ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

Share


ಗದಗ: ಸಿಬ್ಬಂದಿ ನೇಮಕಾತಿ ಆಯೋಗ (ಕರ್ನಾಟಕ-ಕೇರಳ) ಭಾರತ ಸರ್ಕಾರ, ಮೊದಲ ಮಹಡಿ ಇ ವಿಂಗ್, ಕೇಂದ್ರೀಯ ಸದನ, ಕೋರಮಂಗಲ, ಬೆಂಗಳೂರು ಇವರು ಲೋವರ್ ಡಿವಿಜನ್ ಕರ್ಕ್ಲ/ಜುನಿಯರ್ ಸೆಕ್ರೆಟರಿ ಅಸಿಸ್ಟಂಟ್, ಪೊಸ್ಟಲ್ ಅಸಿಸ್ಟಂಟ್/ ಸಾರ್ಟಿಂಗ್ ಅಸಿಸ್ಟಂಟ್, ಡಾಟಾ ಎಂಟ್ರಿ ಆಫರೇಟರ್, ಡಾಟಾ ಎಂಟ್ರಿ ಆಫರೇಟರ್ ಗ್ರೇಡ್ ಎ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅಭ್ಯರ್ಥಿಗಳು ಪಿಯುಸಿ/ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ ೧೮ ರಿಂದ ೨೭ (೧-೧-೨೦೨೧ ಕ್ಕೆ ಅನ್ವಯಿಸುವಂತೆ) ರೊಳಗಿರಬೇಕು. ಸಾಮಾನ್ಯ ಅಭ್ಯರ್ಥಿಗಳಿಗೆ ಮತ್ತು ಇತರೆ ವರ್ಗದವರಿಗೆ ವಯೋಮಿತಿಯಲ್ಲಿ ನಿಯಮಾನುಸಾರ ಸಡಿಲಿಕೆ ನೀಡಲಾಗುವುದು. ಸಾಮಾನ್ಯ ಅಭ್ಯರ್ಥಿ, ಓಬಿಸಿಯವರಿಗೆ ಪರೀಕ್ಷಾ ಶುಲ ರೂ.೧೦೦ ಆಗಿದ್ದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಂಗವಿಕಲ, ಮಾಜಿ ಸೈನಿಕರು, ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಪರೀಕ್ಷಾ ಶುಲ್ಕವಿರುವುದಿಲ್ಲ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ ೧೫ ಆಗಿದ್ದು ಪರೀಕ್ಷಾ ದಿನಾಂಕ ೧೨-೪-೨೦೨೧ ರಿಂದ ೨೭-೪-೨೦೨೧ ರವರೆಗೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದಾಗಿದೆ ಎಂದು ಗದಗ ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.