ಆದರ್ಶ ವಿದ್ಯಾಲಯದ ಖಾಲಿ ಸೀಟುಗಳಿಗೆ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ

Share


ಗದಗ: ರೋಣ ತಾಲೂಕಿನ ಇಟಗಿ ಸರಕಾರಿ ಆದರ್ಶ ವಿದ್ಯಾಲಯ, ಇಲ್ಲಿ ೨೦೨೦-೨೧ ನೇ ಸಾಲಿನಲ್ಲಿ ೭,೮ ಮತ್ತು ೯ ನೇ ತರಗತಿಯಲ್ಲಿ ಖಾಲಿ ಇರುವ ಸೀಟುಗಳನ್ನು ಶಾಲಾ ಹಂತದ ಪ್ರವೇಶ ಪರೀಕ್ಷೆಯ ಮೂಲಕ ಭರ್ತಿ ಮಾಡಿಕೊಳ್ಳಲಾಗುವುದು.

೭ ನೇ ತರಗತಿಗೆ ೦೨, ೮ ನೇ ತರಗತಿಗೆ ೦೪ ಹಾಗೂ ೯ನೇ ತರಗತಿಗೆ ೧೧ ಸೀಟುಗಳು ಖಾಲಿಯಿದ್ದು, ಆಸಕ್ತ ವಿದ್ಯಾರ್ಥಿಗಳು ಸರಕಾರಿ ಆದರ್ಶ ವಿದ್ಯಾಲಯಕ್ಕೆ ಬಂದು ಖುದ್ದಾಗಿ ಅರ್ಜಿ ಸಲ್ಲಿಸಬಹುದು. ಈಗ ಓದುತ್ತಿರುವ ಶಾಲೆಯಿಂದ ವ್ಯಾಸಂಗ ಪ್ರಮಾಣ ಪತ್ರ, ಹಿಂದಿನ ತರಗತಿಯ ಅಂಕಪಟ್ಟಿ, ಜಾತಿ, ಆದಾಯ ಪ್ರಮಾಣ ಪತ್ರ, ವಿಕಲ ಚೇತನ ಮಕ್ಕಳಿದ್ದರೆ ಪ್ರಮಾಣ ಪತ್ರ ಹಾಗೂ ಎರಡು ಇತ್ತೀಚಿನ ಭಾವಚಿತ್ರಗಳೊಂದಿಗೆ ಡಿ೧೫ರಂದು ಸಾಯಂಕಾಲ ೫ ಗಂಟೆಯೊಳಗೆ ಶಾಲೆಯಲ್ಲಿ ಲಭ್ಯವಿರುವ ಅರ್ಜಿಯೊಂದಿಗೆ ಸಲ್ಲಿಸಬಹುದು.

ಪರೀಕ್ಷೆಯ ದಿನಾಂಕ ಡಿ.೧೮. ಅರ್ಜಿ ಸಲ್ಲಿಸಲು ರೋಣ ತಾಲ್ಲೂಕಿನ ವಿದ್ಯಾರ್ಥಿಗಳು ಮಾತ್ರ ಅರ್ಹರಿರುತ್ತಾರೆ. ಮಾಹಿತಿಗಾಗಿ ಮುಖ್ಯೋಪಾಧ್ಯಾಯರು ಕೆ.ಪಿ. ಸಾಲಿಮಠ ಇವರ ದೂರವಾಣಿ ಸಂಖ್ಯೆ: ೮೭೬೨೪೮೭೬೯೧ ಹಾಗೂ ೭೩೪೯೨೬೯೦೧೮ಗೆ ಸಂಪರ್ಕಿಸಬಹುದಾಗಿದೆ.