ಜಿಲ್ಲಾ ಪಂಚಾಯತ್ ಅಧ್ಯಕ್ಷರ ಹುದ್ದೆಗೆ ಚುನಾವಣೆ

Share


ಗದಗ: ಜಿಲ್ಲಾ ಪಂಚಾಯತ್ ಅಧ್ಯಕ್ಷರ ಹುದ್ದೆಯ ರಾಜೀನಾಮೆ ನೀಡಿರುವ ಪ್ರಯುಕ್ತ ತೆರವಾಗಿರುವುದರಿಂದ ೫ ವರ್ಷದ ಬಾಕಿ ಉಳಿದ ಅವಧಿಗೆ ಚುನಾವಣೆ ನಡೆಸುವ ಕುರಿತು ಚುನಾವಣಾ ಸಭೆಯನ್ನು ಇದೇ ಡಿ.೧೮ ರಂದು ಮಧ್ಯಾಹ್ನ ೩ ಗಂಟೆಗೆ ಗದಗ ಜಿಲ್ಲಾ ಪಂಚಾಯತ ಕಾರ್ಯಾಲಯದ ಸಭಾಗೃಹದಲ್ಲಿ ಏರ್ಪಡಿಸಲಾಗಿದೆ. ಗದಗ ಜಿಲ್ಲಾ ಪಂಚಾಯತ್ ಅಧ್ಯಕ್ಷರ ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ ಮಿಸಲಿಡಲಾಗಿದೆ.

ಅಧ್ಯಕ್ಷರ ಸ್ಥಾನದ ಚುನಾವಣಾ ಸಭೆಗೆ ನಿಗದಿಪಡಿಸಿದ ಅವಧಿಯ ಎರಡು ಗಂಟೆಗಳಿಗಿಂತ ಕಡಿಮೆಯಿಲ್ಲದಂತೆ (ಡಿ.೧೮ರ ಮಧ್ಯಾಹ್ನ ೧ ಗಂಟೆಯವರೆಗೆ) ಮುಂಚಿತವಾಗಿ ಸದಸ್ಯರು, ನಮೊನೆ-೧ರಲ್ಲಿ ನಾಮ ನಿರ್ದೇಶನ ಪತ್ರವನ್ನು ಬೆಳಗಾವಿಯ ಪ್ರಾದೇಶಿಕ ಆಯುಕ್ತರು ಅಥವಾ ಅವರಿಂದ ಅಧಿಕೃತಗೊಳಿಸಲಾದ ಗದಗ ಅಪಾರ ಜಿಲ್ಲಾಧಿಕಾರಿಗಳು ಇವರಿಗೆ ಗದಗ ಜಿಲ್ಲಾ ಪಂಚಾಯತ ಸಭಾಗೃಹದಲ್ಲಿ ಸಲ್ಲಿಸಬಹುದು. ಕೋವಿಡ್-೧೯ರ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಮತ್ತು ಸ್ಯಾನಿಟೈಜರ್ ಬಳಕೆ ಹಾಗೂ ಇತ್ಯಾದಿ ಮುಂಜಾಗೃತಾ ಕ್ರಮ ಕಡ್ಡಾಯವಾಗಿ ಪಾಲನೆ ಮಾಡಬೇಕೆಂದು ಜಿ.ಪಂ. ಅಧ್ಯಕ್ಷ/ಉಪಾಧ್ಯಕ್ಷರ ಚುನಾವಣೆಗಳ ಅಧ್ಯಕ್ಷಾಧಿಕಾರಿಗಳು ಹಾಗೂ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಅಮ್ಲಾನ್ ಆದಿತ್ಯ ಬಿಸ್ವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.