ಸಕಾಲ ಸೇವೆಗಳ ಪಡೆಯಲು ಮಾಜಿ ಸೈನಿಕರಿಗೆ ಅರ್ಜಿ ಆಹ್ವಾನ

Share

ಗದಗ: ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ವತಿಯಿಂದ ಮಾಜಿ ಸೈನಿಕರು ಹಾಗೂ ಅವರ ಕುಟುಂಬದವರು ಸಕಾಲ ಸೇವೆಗಳನ್ನು ಪಡೆಯಲು ಅರ್ಜಿಗಳನ್ನು www.sakala.kar.nic.inನಲ್ಲಿ ಸಲ್ಲಿಸಬೇಕಾಗುತ್ತದೆ.

ಇದರಡಿಯಲ್ಲಿ ಮಾಜಿ ಸೈನಿಕರಿಗೆ/ಮೃತ ಮಾಜಿ ಸೈನಿಕರ ಪತ್ನಿಗೆ ಗುರುತಿನ ಚೀಟಿ ವಿತರಿಸುವುದು. ಉದ್ಯೋಗ ನೋಂದಣಿ, ಸಿ ಇ ಟಿ ಪ್ರಮಾಣ ಪತ್ರ, ಕನ್ನಡಕ ಅನುದಾನ, ಮದುವೆ ಅನುದಾನ, ಮನೆ ದುರಸ್ತಿ ಅನುದಾನ(ಯುದ್ಧ ಸಂತ್ರಸ್ಥರ ಪ್ರಕರಣಗಳಿಗೆ) ಈ ಆರು ಸೇವೆಗಳನ್ನು ಸೇವಾ ಸಿಂಧು ಮುಖಾಂತರ ಅರ್ಜಿ ಸಲ್ಲಿಸಿ ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ; 0836- 2440176, ಉಪನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಇವರನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.