ಸೆ. 21 ರಂದು ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ

Share

ಹಾವೇರಿ: ನಗರದ 110 ಕೆ.ವಿ.ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಸುಭಾಸ್ ಸರ್ಕಲ್ 11 ಕೆವಿ ಮಾರ್ಗದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಸೆಪ್ಟೆಂಬರ್ 21 ರಂದು ಜರುಗಲಿದೆ.

ಅಂದು ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 5-30ರವರೆಗೆ ನಗರದ ಹಳೆ ಪೋಸ್ಟ್ ಆಫೀಸ್ ರೋಡ, ಮೈಲಾರಲಿಂಗೇಶ್ವರ ದೇವಸ್ಥಾನ, ಕೂಲಿಯವರ ಓಣಿ, ಕೋಂಡವಾಡಗಲ್ಲಿ, ಗುಡಿ ದವಾಖಾನೆ ರೋಡ, ಕಂದಕ ರೋಡ, ಗದಿಗೇರ ಓಣಿ, ಮನೋಹರ ಟಾಕೀಸ್, ನಡುವಿನಮಠ, ಎಂ.ಜಿ.ರೋಡ, ಗಣೇಶಗುಡಿ ರೋಡ್ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಹಾಗೂ ಗ್ರಾಹಕರು ಸಹಕರಿಸುವಂತೆ ಹೆಸ್ಕಾಂನ ಕಾರ್ಯ ಮತ್ತು ಪಾಲನಾ ಉಪ ವಿಭಾಗ ಕಛೇರಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸಿ.ಬಿ.ಹೊಸಮನಿ ಅವರು ವಿನಂತಿಸಿದ್ದಾರೆ.