ಆರೋಗ್ಯ ಸೇವೆಯಲ್ಲಿ ರಿಯಾಯಿತಿ ಪಡೆಯಲು ಮಣಿಪಾಲ ಆರೋಗ್ಯ ಕಾರ್ಡ್‌ ನೋಂದಣಿ‌ ಮಾಡಿಕೊಳ್ಳಿ: ಮೋಹನ್‌ ಶೆಟ್ಟಿ

Share

ಹಾವೇರಿ: ಆರೋಗ್ಯ ಸೇವೆಯಲ್ಲಿ ರಿಯಾಯಿತಿ ಪಡೆಯಲು ಮಣಿಪಾಲ ಆರೋಗ್ಯ ಕಾರ್ಡ್‌ಗೆ ನೊಂದಣಿ ಮಾಡಿಕೊಳ್ಳಿ. 2021ರ ನೋಂದಣಿ ಪ್ರಕ್ರಿಯೆಗೆ ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ ಸಹ ಕುಲಾಧಿಪತಿ ಡಾ.ಎಚ್‌.ಎಚ್‌. ಬಲ್ಲಾಳ್‌ ಅವರು ವರ್ಚುವಲ್‌ ವೇದಿಕೆ ಮೂಲಕ ಚಾಲನೆ ನೀಡಿದ್ದಾರೆ ಎಂದು ಮಣಿಪಾಲದ ಕಸ್ತೂರಬಾ ಆಸ್ಪತ್ರೆಯ ಉಪ ವ್ಯವಸ್ಥಾಪಕ ಮೋಹನ್‌ ಶೆಟ್ಟಿ ತಿಳಿಸಿದರು.

ನಗರದ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 20 ವರ್ಷಗಳಿಂದ ಸಾಮಾಜಿಕ ಕಾಳಜಿಯೊಂದಿಗೆ ಉತ್ಕೃಷ್ಟ ಗುಣಮಟ್ಟದ ಚಿಕಿತ್ಸೆಯನ್ನು ರಿಯಾಯಿತಿ ದರದಲ್ಲಿ ನೀಡುವ ಮೂಲಕ ಈ ಯೋಜನೆಗೆ ಹೆಚ್ಚು ಸದಸ್ಯರನ್ನು ದಾಖಲಿಸುವಲ್ಲಿ ಯಶಸ್ವಿಯಾಗಿದ್ದೇವೆ. ‘ಸಂಪೂರ್ಣ ಕುಟುಂಬಕ್ಕಾಗಿ ಶ್ರೇಷ್ಠ ಮೌಲ್ಯ ಮತ್ತು ವಿಶ್ವಾಸಾರ್ಹ ಸೇವೆ’ ಎಂಬುದು ಈ ವರ್ಷದ ಧ್ಯೇಯ ವಾಕ್ಯ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಮಣಿಪಾಲ ಆರೋಗ್ಯ ಕಾರ್ಡ್‌ ಒಂದು ವರ್ಷದ ಯೋಜನೆಯಲ್ಲಿ ಒಬ್ಬರಿಗೆ ಸದಸ್ಯತ್ವ ಶುಲ್ಕ ರೂ. 300, ಕೌಟುಂಬಿಕ ಕಾರ್ಡ್‌ನಲ್ಲಿ ಸಂಗಾತಿ, 25 ವರ್ಷದ ಒಳಗಿನ ಮಕ್ಕಳಿಗೆ ರೂ. 600 ಮತ್ತು ಕುಟುಂಬ ಪ್ಲಸ್‌ ಕಾರ್ಡ್‌ನಲ್ಲಿ ಸಂಗಾತಿ, 25 ವರ್ಷದ ಒಳಗಿನ ಮಕ್ಕಳು ಹಾಗೂ ನಾಲ್ವರು ಪೋಷಕರಿಗೆ (ತಂದೆ, ತಾಯಿ, ಅತ್ತೆ ಮತ್ತು ಮಾವ) ರೂ. 750 ಶುಲ್ಕ ನಿಗದಿಪಡಿಸಲಾಗಿದೆ. ಎರಡು ವರ್ಷಗಳ ಯೋಜನೆಯಲ್ಲಿ ಒಬ್ಬರಿಗೆ ರೂ. 500, ಕುಟುಂಬಕ್ಕೆ ರೂ. 800 ಮತ್ತು ಕೌಟುಂಬಿಕ ಪ್ಲಸ್‌ ಯೋಜನೆಗೆ ರೂ. 950 ಶುಲ್ಕವಿರುತ್ತದೆ ಎಂದು ಮಾಹಿತಿ ನೀಡಿದರು.

ಕಾರ್ಡ್ ಸದಸ್ಯತ್ವ ಹೊಂದಿರುವವರಿಗೆ ಹೊರರೋಗಿ ವಿಭಾಗದಲ್ಲಿ ಮತ್ತು ಒಳರೋಗಿ ವಿಭಾಗದಲ್ಲಿ ರಿಯಾಯಿತಿ ಇರುತ್ತದೆ. ಕಳೆದ ವರ್ಷ 4.5 ಲಕ್ಷ ಸದಸ್ಯತ್ವ ದಾಖಲಿಸಿದ್ದೆವು. ಈ ಬಾರಿ 6 ಲಕ್ಷ ಸದಸ್ಯತ್ವದ ಗುರಿ ಹೊಂದಿದ್ದೇವೆ. ಮಾಹಿತಿಗೆ ಮೊ: 97406 18912 ಸಂಪರ್ಕಿಸಿ ಎಂದು ತಿಳಿಸಿದರು. ಮಾರುಕಟ್ಟೆ ವಿಭಾಗದ ಪ್ರತಿನಿಧಿ ಅನಿಲ್‌ ನಾಯ್ಕ್‌, ದ್ಯಾಮಣ್ಣ ಮಂಟಗಣಿ ಇದ್ದರು.