ಸಾವಿತ್ರಿ ಬಾಯಿ ಪುಲೆ ಮಹಿಳಾ ಶಿಕ್ಷಣಕ್ಕೆ ಪ್ರೇರಣೆ: ಬಸವಶಾಂತಲಿಂಗ ಶ್ರೀ

Share

ಹಾವೇರಿ: ನಗರದ ಬಸವಕೇಂದ್ರ ಹೊಸಮಠ ಹಾಗೂ ಎಸ್.ಜೆಎಮ್ ಪಪೂ ಕಾಲೇಜು ಸಹಯೋಗದಲ್ಲಿ ಶುಕ್ರವಾರ ಅಕ್ಷರದವ್ವ ಭಾರತದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಜನ್ಮದಿನಾಚರಣೆಯನ್ನು ಅವರ ಭಾವಚಿತ್ರಕ್ಕೆ ಪುಪ್ಪ ನಮನ ಸಲ್ಲಿಸುವ ಮೂಲಕ ಆರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಹೊಸಮಠದ ಬಸವಶಾಂತಲಿಂಗ ಶ್ರೀ, ಮಹಿಳಾ ಶಿಕ್ಷಣಕ್ಕೆ ವಿರೋಧವಿದ್ದ ಅಂದಿನ ಕಾಲದಲ್ಲೇ ಉನ್ನತ ಶಿಕ್ಷ ಣ ಪಡೆದವರು ಸಾವಿತ್ರಿಬಾಯಿ ಪುಲೆ. ಜಾತಿ, ಮತ, ಪಂಥ ಭೇದವಿಲ್ಲದೆ ಪ್ರತಿಯೊಬ್ಬರು ಶಿಕ್ಷಣ ಪಡೆಯಲು ಪುಲೆಯವರ ಕಾರ್ಯ ಶ್ಲಾಘನೀಯ. ಅಂದು ಬಾಲ್ಯ ವಿವಾಹ, ದೌರ್ಜನ್ಯಕ್ಕೊಳಗಾ ದವರ ಬೆನ್ನೆಲುಬಾಗಿ ನಿಂತು ಹೋರಾಟ ನಡೆಸಿದ ದಿಟ್ಟ ಮಹಿಳೆ ಕೂಡ. ಆದ್ದರಿಂದ ಇಂದು ಪ್ರತಿಯೊಬ್ಬರು ಅವರನ್ನು ನೆನಪು ಮಾಡಿಕೊಳ್ಳಬೇಕೆಂದರು.

ಅತ್ಯಂತ ಸಾಮಾನ್ಯ ಕುಟುಂಬದಲ್ಲಿ ಮಹಾರಾಷ್ಟ್ರದ ಗ್ರಾಮವೊಂದರಲ್ಲಿ ಹುಟ್ಟಿದ ಸಾವಿತ್ರಿ ಪುಲೆ 8ನೇ ವರ್ಷದಲ್ಲೇ ಜ್ಯೋತಿ ಬಾಪುಲೆ ಅವರನ್ನು ವಿವಾಹವಾಗಿದ್ದರು. ಈ ಜೋಡಿ ಸದಾ ಶೋಷಿತರು, ದಮನಿತರ ಪರ ಕೆಲಸ ಮಾಡಿದ್ದು, ಪತಿಯಿಂದಲೇ ಶಿಕ್ಷಣದ ಮಹತ್ವ ಅರಿತು ಅಕ್ಷರಾಭ್ಯಾಸ ಮಾಡಿದ ಸಾವಿತ್ರಿ, ದೇಶದ ಮೊಟ್ಟ ಮೊದಲ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿದರು. ಈ ದಂಪತಿ 18 ಶಾಲೆಗಳನ್ನು ನಡೆಸುವ ಮೂಲಕ ಅಕ್ಷರ ವಂಚಿತ ಮಹಿಳೆಯರು, ಶೋಷಿತರಿಗೆ ವಿದ್ಯೆ ನೀಡುವ ಮಹತ್ವದ ಕಾರ್ಯ ಮಾಡಿದ್ದರು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾಲೇಜು ಪ್ರಾಚಾರ್ಯರು, ಉಪನ್ಯಾಸಕರು, ವಿದ್ಯಾರ್ಥಿಗಳು ಸೇರಿದಂತೆ ಸಿಬ್ಬಂದಿ ವರ್ಗದವರು ಇದ್ದರು.