ಸಮೃದ್ಧಿ ಜೀವನ ಸೊಸೈಟಿ ವಿರುದ್ಧ ಪ್ರತಿಭಟನೆ : ಮರುಳಿ ಹಣ ನೀಡಿಕೆಗೆ ಆಗ್ರಹ

Share

ಹಾವೇರಿ: ಸಮೃದ್ಧಿ ಜೀವನ ಮಲ್ಟಿ ಸ್ಟೇಟ್ ಮಲ್ಟಿ ಪರ್ಪಸ್ ಕೋ-ಆಪರೇಟಿವ್ ಸೊಸೈಟಿ ಸಾರ್ವಜನಿಕರಿಂದ 150 ಕೋಟಿರೂಗಳನ್ನು ವಚಿಚಿಸಿದ್ದು, ಈ ಹಣವನ್ನು ಕಳೆದುಕೊಂಡವರಿಗೆ ಮರಳಿ ಕೊಡಿಸುವಮತೆ ಆಗ್ರಹಿಸಿ ಸೋಮವಾರ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ರಕ್ಷಣೆ ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಮಿತಿಯ ಪದಾಧಿಕಾರಿಗಳು, ಏಜೆಂಟರುಗಳು ಹಾಗೂ ಗ್ರಾಹಕರು ಬ್ರಹತ್ ಪ್ರತಿಭಟನೆ ನಡೆಸಿದರು.
ನಗರದ ಪುರಸಿದ್ದೇಶ್ವರ ದೇವಸ್ಥಾನದ ಮುಂಭಾಗದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಎಂ.ಜಿ. ರಸ್ತೆ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹಾಗೂ ಸೊಸೈಟಿಯ ವಿರುದ್ಧ ಘೋಷಣೆ ಕೂಗುತ್ತಾ ಹೊಸಮನಿ ಸಿದ್ಧಪ್ಪ ಸರ್ಕಲ್‌ಗೆ ಆಗಮಿಸಿ ಹೆದ್ದಾರಿ ತಡೆ ನಡೆಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದ ಪ್ರತಿಭಟನಾ ಕಾರರು, ಸಮೃದ್ಧಿ ಜೀವನ ಮಲ್ಟಿ ಸ್ಟೇಟ್ ಮಲ್ಟಿ ಪರ್ಪಸ್ ಕೋ-ಆಪರೇಟಿವ್ ಸೊಸೈಟಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಮಿತಿಯ ರಾಜ್ಯಗೌರವಾಧ್ಯಕ್ಷ ಶಿವಶಂಕರ ಟೀಕಿಹಳ್ಳಿ, ರಾಜ್ಯ ಉಪಾಧ್ಯಕ್ಷ ಹರೀಶ ಇಂಗಳಗೊಂದಿ, ಮಹಿಳಾ ಅಧ್ಯಕ್ಷೆ ಲಕ್ಷ್ಮಿ ಜಿಂಗಾಡೆ, ಜಿಲ್ಲಾ ಸಂಚಾಲಕ ಮಾಲತೇಶ ಪಾಟೀಲ, ವಿಷ್ಣು ಜಿಂಗಾಡೆ, ಶಿವರಾಜ ಮಾಳಗಿ, ತಿರಕಪ್ಪ ಕೆ. ಚಿಕ್ಕೇರಿ, ಪರಮೇಶ್ವರ ಭಜಂತ್ರಿ, ಮಾಲತೇಶ ಗೊಟಗೋಡಿ, ಚಾಂದಸಾಬ ಯಲಗಚ್ಚ, ದೇವರಾಜ, ಮಹೇಶ ಹಳಕೋಟಿ, ರವಿ ಹಾವೇರಿ, ಪ್ರೇಮಾ ಕಲಕೇರಿ, ಸಾಯಿರಾಥ ಬಿದರಿ, ಬಸಣ್ಣ ರಿತ್ತಿ ಸೇರಿದಂತೆ ನೂರಾರು ಏಜೆಂಟರು ಗ್ರಾಹಕರು ಭಾಗವಹಿಸಿದ್ದರು.