ಮಾಜಿ ಜಿ.ಪಂ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ ವಿರುದ್ಧ ತೊಡೆ ತಟ್ಟಿದ ಶಾಸಕ ನೆಹರು ಓಲೇಕಾರ

Share

ಹಾವೇರಿ: ಜಿ.ಪಂ.ಮಾಜಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ ಹಾಗೂ ಶಾಸಕ ನೆಹರು ಓಲೇಕಾರ ನಡುವಿನ ಮುಸುಕಿನ ಗುದ್ದಾಟ ಈಗ ವಿಕೋಪಕ್ಕೆ ತಿರುಗಿದೆ.
ಬಸೇಗಣ್ಣಿ ಜೂನ್ 1 ರಂದು ಕನವಳ್ಳಿ ಗ್ರಾಮಸ್ಥರ ವಿರುದ್ಧ ನೀರಾವರಿ ಇಲಾಖೆಯಲ್ಲಿಯ 434 ಪೈಪುಗಳು ಕಳ್ಳತನ ಮಾಡಲಾಗಿದೆ ಎಂದು ದೂರು ನೀಡಿದ್ದರು. ಈ ಸಂಬಂಧ ಗ್ರಾಮಸ್ಥರ ಜೂ.3ರಂದು ಪೊಲೀಸರು ಗ್ರಾಮಸ್ಥರನ್ನು ಬಂಧಿಸಿದ್ದರೆನ್ನಲಾಗಿದೆ.
ಸೋಮವಾರ ಕನವಳ್ಳಿ ಸೋಮನಕಟ್ಟೆ ಬಸನಕಟ್ಟೆ ಹನುಮನಹಳ್ಳಿ ಗ್ರಾಮಗಳ ಜೀವ ಜಲ ವಾಗಿರುವ ಮಲ್ಲನಕೇರಿಗಳಿಗೆ ನೀರು ತುಂಬಿಸುವ ಸಲುವಾಗಿ ಗ್ರಾಮಸ್ಥರು ಅಲ್ಲಿಯ ಅಧಿಕಾರಿಗಳ ಸಮ್ಮಖದಲ್ಲಿಯೇ ಶಾಸಕರ ಆದೇಶದ್ವನಯ ಗ್ರಾಮಕ್ಕೆ ತೆಗೆದುಕೊಂಡು ಬಂದು ಯು.ಟಿ.ಪಿ ಕಾಲುವೆಯ ಮೂಲಕ ಕೆರೆಗೆ ನೀರು ತುಂಬಿಸುವ ಕಾಮಗಾರಿಗೆ ಬಳಸಿಕೊಳ್ಳಲಾಗಿದೆ. ಆದರೆ ಈಗ ಗ್ರಾಮಸ್ಥರ ವಿರುದ್ಧ ಬಸೆಗಣ್ಣಿ ಕಳ್ಳತನ ಆರೋಪ ಮಾಡಿ ಅವರ ವಿರುದ್ಧ ಕೇಸ್ ದಾಖಲಿಸಿದ್ದನ್ನು ‌ಹಿಂದೆ ತೆಗೆದುಕೊಳ್ಳಬೇಕು ಹಾಗೂ ಗ್ರಾಮಗಳ ಕೆರಿಗಳಿಗೆ ನೀರು ತುಂಬಿಸಬೇಕೆಂದು ಸೋಮನಕಟ್ಟೆ ಕ್ರಾಸ್ ಬಳಿ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಧರಣಿ ಕುಳಿತರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಶಾಸಕ ನೆಹರು ಓಲೇಕಾರ ಮಾತನಾಡಿ, ಹಿಂದೆ ನಾನು ಶಾಸಕ ಹಾಗೂ ಟಾಸ್ಕ ಪೂರ್ಸ ಸಮಿತಿಯ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ತಂದಿದ್ದ ಪೈಪುಗಳನ್ನು ಇಲಾಖೆಯಲ್ಲಿ ಇಡಲಾಗಿತ್ತು. ಮೂರುವರ್ಷಗಳ ಕಾಲ ಜಿ.ಪಂ.ಅಧ್ಯಕ್ಷನಾಗಿದ್ದ ಕೊಟ್ರೇಶಪ್ಪ ಬಸೇಗಣ್ಣಿ ಈ ಗ್ರಾಮದ ಜನರಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸದೆ ದ್ರೋಹ ಮಾಡಿದ್ದಾರೆ ಎಂದರು.

ಈಗ ಮತ್ತೆ ನಮ್ಮ ಪಕ್ಷ ಆಡಳಿತಕ್ಕೆ ಬಂದಿದ್ದು, ನಾನು ಶಾಸಕನಾದ ಮೇಲೆ ಕನವಳ್ಳಿ ಗ್ರಾಮದ ಜನರ ಗೋಳಾಟ ನೋಡಲಾಗದೆ ನೀರಾವರಿ ಇಲಾಖೆಯಲ್ಲಿ ಇರಸಲಾದ 334 ಪೈಪುಗಳನ್ನು ಗ್ರಾಮಸ್ಥರು ಅಧಿಕಾರಿಗಳ ಸಮ್ಮಖದಲ್ಲಿಯೇ ತಂದಿದ್ದು ಜೊತೆಗೆ ಅವರಿಂದ ಕೆರೆ ತುಂಬಿಸುವ ಕಾರ್ಯಕ್ಕೆ ಎಂದು ಅನುಮತಿ ಪತ್ರ ತಂದಿದ್ದು ಆದರೂ ತಮ್ಮ ಅಧಿಕಾರದ ಪ್ರಭಾವದಿಂದ ಅಧಿಕಾರಿಗಳಿಂದ ದೂರು ದಾಖಲಿಸಿರುವ ಬಸೇಗಣ್ಣಿ ರಾಜಕೀಯ ಮಾಡುತ್ತಿದ್ದಾರೆ ಈ ಕುರಿತು ಜೂನ್. 27 ರಂದು ನಡೆಯುವ ಕೆ.ಡಿ.ಪಿ ಸಭೆಯಲ್ಲಿ ಚರ್ಚೆಸುವುದಾಗಿ ಹೇಳಿದರು.
ಪ್ರತಿಭಟನೆಯಲ್ಲಿ ಬಸವರಾಜ ಕಳಸೂರ ಮಲ್ಲನಗೌಡ ಹನುಮಗೌಡ್ರ ಬಸವರಾಜ ಹೆಸರಿ ನಾಗಣ್ಣ ಕೋನವರ ಕೆ.ಸಿ ಕೋರಿ ಪದ್ಮರಾಜ ಬಳಿಗಾರ ಸೇರಿದಂತೆ ಕನವಳ್ಳಿ ಸೋಮನಕಟ್ಟೆ ಮಾಚಾಪುರ ಬಸನಕಟ್ಟೆ ಹನುಮನಹಳ್ಳಿಯ ಗ್ರಾಮಸ್ಥರು ಭಾಗಿಗಳಾಗಿದ್ದರು.