ಮೊದಲ ಹಂತದ ಗ್ರಾ.ಪಂ ಚುನಾವಣೆ: 1357 ಸ್ಥಾನಗಳಿಗೆ 3580 ಅಭ್ಯಥಿ೯ಗಳು ಕಣದಲ್ಲಿ

Share

ಹಾವೇರಿ: ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ನಡೆಯಲಿರುವ ನಾಲ್ಕು ತಾಲೂಕುಗಳ 104 ಗ್ರಾಮ ಪಂಚಾಯತಿಗಳ 1506 ಸ್ಥಾನಗಳ ಪೈಕಿ 149 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಉಳಿದ 1357 ಸ್ಥಾನಗಳಿಗೆ 3580 ಅಭ್ಯಥಿ೯ಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ.

ಮೊದಲ ಹಂತದ ಚುನಾವಣೆ ಇದೇ ಡಿಸೆಂಬರ್ 22 ರಂದು ನಡೆಯಲಿದೆ. ಅಂತಿಮವಾಗಿ ಕಣದಲ್ಲಿ ಉಳಿದಿರುವ 3580 ಜನ ಅಭ್ಯರ್ಥಿಗಳ ಅನುಸೂಚಿತ ಜಾತಿಯ 512, ಅನುಸೂಚಿತ ವರ್ಗದ 369, ಹಿಂದುಳಿದ ಎ ವರ್ಗದ 551, ಹಿಂದುಳಿದ ಬಿ ವರ್ಗದ 171, ಸಾಮಾನ್ಯ ವರ್ಗದ 1977 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಜಿಲ್ಲೆಯಲ್ಲಿ ನಡೆಯುತ್ತಿರುವ 2ನೇ ಹಂತದ 105 ಗ್ರಾಮ ಪಂಚಾಯಿತಿಗಳ ಚುನಾವಣೆಗೆ ಸಂಬಂಧಿಸಿದಂತೆ 1977 ನಾಮಪತ್ರಗಳು ಮಂಗಳವಾರ ಸ್ವೀಕೃತವಾಗಿವೆ. ಬ್ಯಾಡಗಿ ತಾಲ್ಲೂಕಿನಲ್ಲಿ 253, ಸವಣೂರ ತಾಲ್ಲೂಕಿನಲ್ಲಿ 430, ಶಿಗ್ಗಾವಿ ತಾಲ್ಲೂಕಿನಲ್ಲಿ 594, ಹಾಗೂ ಹಾನಗಲ್‌ ತಾಲ್ಲೂಕಿನಲ್ಲಿ 700 ನಾಮಪತ್ರಗಳು ಸಲ್ಲಿಕೆಯಾಗಿವೆ.