ಮಾ. 23 ರಂದು ನಗರದಲ್ಲಿ ವಿದ್ಯುತ್ ವ್ಯತ್ಯಯ

Share

ಹಾವೇರಿ: ನಗರದ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮಾ. 22 ರಂದು ರವಿವಾರ ನಡೆಯಬೇಕಿದ್ದ ನಿರ್ವಹಣಾ ಕಾಮಗಾರಿಯನ್ನು ತಾಂತ್ರಿಕ ಕಾರಣಗಳಿಂದ ರದ್ದು ಮಾಡಲಾಗಿದೆ. ಮಾರ್ಚ್ 22 ರಂದು ವಿದ್ಯುತ್ ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ.

ಮಾರ್ಚ್ 23 ರಂದು ಸೋಮವಾರ ನಿರ್ವಹಣಾಕಾಮಗಾರಿ ನಡೆಯಲಿದ್ದು, ಅಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಬಸವೇಶ್ವರ ನಗರ 1 ರಿಂದ 6ನೇ ಕ್ರಾಸ್ ಎ ಮತ್ತು ಬಿ ಬ್ಲಾಕ್, ಮುನ್ಸಿಪಲ್ ಹೈಸ್ಕೂಲ್, ರಾಜೇಂದ್ರನಗರ, ಸುಭಾಸ ಸರ್ಕಲ್, ರೈಲ್ವೆ ಸ್ಟೇಷನ್ ರಸ್ತೆ, ಶಿವಬಸವ ನಗರ, ಶಿವಯೋಗಿಶ್ವರ ನಗರ, ಹೊಸನಗರ, ಹಳೇ ಪಿ.ಬಿ.ರೋಡ್, ಎಮ್.ಜಿ.ರೋಡ್, ಹಾನಗಲ್ ರೋಡ್, ಭಾರತಿ ನಗರ, ಎಪಿಎಮ್‍ಸಿ, ನಾಗೇಂದ್ರನಮಟ್ಟಿ, ವಿಜಯ ನಗರ, ಉದಯ ನಗರ, ದಾನೇಶ್ವರಿ ನಗರ, ಅಕ್ಕಿಪೇಟೆ, ವಿದ್ಯಾನಗರ, ಮುಲ್ಲಾನಕೇರಿ, ಶಿವಾಜಿನಗರ, ದೇವಿಹೊಸೂರು, ಕುರುಬಗೊಂಡ ಪಂಪ್‍ಸೆಟ್ಸ್ ಹಾಗೂ ಸದರಿ ಫೀಡರ್ ವ್ಯಾಪ್ತಿಗೆ ಬರುವ ಎಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಕಾರ್ಯ ಮತ್ತು ಪಾಲನಾ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜನೀಯರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.