ಮಾ.22 ರಂದು ನಗರ, ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ

Share

ಹಾವೇರಿ: ನಗರದ ವಿದ್ಯುತ್ ವಿತರಣಾಕೇಂದ್ರದಲ್ಲಿ ಮಾ. 22 ರಂದು ರವಿವಾರ 110 ಕೆ.ವ್ಹಿ ತ್ರೈಮಾಸಿಕ ನಿರ್ವಹಣಾಕಾಮಗಾರಿ ಜರುಗಲಿದೆ. 33 ಕೆ.ವಿಗಾಂಧೀಪುರ ಹಾಗೂ 110 ಕೆ.ವ್ಹಿ ಹಾವೇರಿ ವಿದ್ಯುತ್ ವಿತರಣಾಕೇಂದ್ರದಿಂದ ಹೊರಡುವ ಸುಭಾಷ ಸರ್ಕಲ್, ಹುಕ್ಕೆರಿಮಠ, ಭಾರತಿ ನಗರ, ಎಪಿಎಮ್‍ಸಿ, ದೇವಿಹೊಸುರ, ಕುರುಬಗೊಂಡ 11 ಕೆವಿ ಫೀಡರ್‍ಗಳಲ್ಲಿ ಅಂದು ಬೆಳಿಗ್ಗೆ 10 ರಿಂದ ಸಾಯಂಕಾಲ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಸದರಿ ವಿದ್ಯುತ್ ವಿತರಣಾಕೇಂದ್ರ ವ್ಯಾಪ್ತಿಗೆ ಬರುವ ಹಳೇ ಪಿಬಿ ರೋಡ್, ಎಮ್.ಜಿ.ರೋಡ್, ಹಾನಗಲ್ ರೋಡ್, ಭಾರತಿ ನಗರ, ಎಪಿಎಮ್‍ಸಿ, ನಾಗೇಂದ್ರನಮಟ್ಟಿ, ವಿಜಯ ನಗರ, ಉದಯ ನಗರ, ದಾನೇಶ್ವರಿ ನಗರ, ಅಕ್ಕಿಪೇಟೆ, ರಾಜೇಂದ್ರ ನಗರ, ವಿದ್ಯಾನಗರ, ಮುಲ್ಲಾನಕೇರಿ, ಶಿವಾಜಿನಗರ, ರೈಲ್ವೆ ಸ್ಟೇಶನ್‍ರೋಡ್, ಬಸವೇಶ್ವರ ನಗರ 1 ರಿಂದ 6ನೇ ಕ್ರಾಸ್ ಮತ್ತು ಸಿ ಬ್ಲಾಕ್, ಶಿವಬಸವ ನಗರ, ಶಿವಯೋಗಿಶ್ವರ ನಗರ, ಹೊಸ ನಗರ ಮತ್ತು ಕರ್ಜಗಿ, ಯತ್ತಿನಹಳ್ಳಿ, ಅಗಡಿ, ಕಳ್ಳಿಹಾಳ, ಕಾಟೇನಹಳ್ಳಿ, ಮಾಳಾಪುರ, ಭೂ-ವಿರಾಪುರ, ರಾಮಾಪುರ, ಅಗಸನಮಟ್ಟಿ, ಕೋಳೂರು, ಗಣಜೂರು, ದೇವಿಹೊಸೂರ, ಕುರುಬಗೊಂಡ ಗ್ರಾಮಗಳ ಪಂಪ್‍ಸೆಟ್ ಹಾಗೂ ಸದರಿ ಫೀಡರ ವ್ಯಾಪ್ತಿಗೆ ಬರುವ ಎಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಕಾರ್ಯ ಮತ್ತು ಪಾಲನಾ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ನಿರ್ವಾಹಕ ಇಂಜನೀಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.