ದುರ್ಗಾದೇವಿ ಜಾತ್ರೆಗೆ ಅದ್ದೂರಿ ಚಾಲನೆ

Share

ಹಾವೇರಿ: ತಾಲೂಕಿನ ನೆಗಳೂರ ಗ್ರಾಮದ ಕೋಡಿದುರ್ಗಾದೇವಿ ಜಾತ್ರೆಗೆ ಮಂಗಳವಾರ ಸಂಜೆ ಅದ್ದೂರಿ ಚಾಲನೆ ದೊರಕಿತು. ಗ್ರಾಮದ ದ್ಯಾಮವ್ವ ದೇವಿ ದೇವಸ್ಥಾನದಿಂದ ಶೃಂಗಾರಗೊಂಡ ಬಂಡಿಯಲ್ಲಿ ಸರ್ವಲಂಕಾರಗೊಂಡ ದುರ್ಗಾದೇವಿಯನ್ನು ಪ್ರತಿಷ್ಠಾಸಿ ಮೇರವಣಿಗೆ ಪ್ರಾರಂಭವಾಯಿತು, ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವಿಯ ಮೇರವಣಿಗೆಗೆಯು ಸಕಲ ವಾದ್ಯ ಮೇಳಗಳೊಂದಿಗೆ ಸಾಗಿತು, ದೇವಿಯ ಆಗಮನದ ಹಿನ್ನಲೆಯಲ್ಲಿ ಗ್ರಾಮದ ಪ್ರತಿಯೊಂದು ಬೀದಿಯು ಶುಭ್ರವಾಗಿಟ್ಟು ನೀರು ಹಾಕಿ ರಂಗೋಲಿ ಬಿಡಿಸಿ ದೇವಿಯನ್ನು ಸ್ವಾಗತಿಸಿದರು.ಮೇರವಣಿಗೆಯೂದ್ದಕ್ಕೂ ಉದೋ ಉದೋ ಜಯಗೋಷವನ್ನು ಭಕ್ತರು ಮೊಳಗಿಸಿದರು.

ತಮಷಾ ಮದ್ದುಗಳ ಚಿತ್ತಾರ; ಮೇರವಣಿಗೆಯಲ್ಲಿ ತಮಷಾ ಮದ್ದುಗಳು ಪ್ರದರ್ಶನ ನೋಡುಗರ ಗಮನ ಸೆಳೆಯಿತು, ಜೊತೆಗೆ ಯುವ ಸಮೂಹ ಚಿತ್ರಗೀತೆಗಳಿಗೆ ಕುಣಿದು ಕುಪ್ಪಳಿಸಿದರು. ನಂತರ ಕೋಡಿ ದುರ್ಗಾದೇವಿ ದೇವಸ್ಥಾನ ತಲುಪಿದ ಮೇರವಣಿಗೆ ಸಂಪನ್ನಗೊಂಡು ದೇವಿಯನ್ನು ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿ ವಿವಿಧ ಪ್ರಜಾ ಕೈಂಕರ್ಯ ನೇರವೇರಿಸಿದರು.

ಮಂಗಳವಾರ ಜಾತ್ರೆ; ಎರಡು ದಿನಗಳ ಕಾಲ ನಡೆಯುವ ಕೋಡಿ ದುರ್ಗಾದೇವಿ ಜಾತ್ರೆಯು ಬಹಳ ವಿಜೃಂಭಣೆಯಿಂದ ಜರಗುವುದು. ಗ್ರಾಮದ ಭಜನಾ ಸಂಘದವರು ತಮ್ಮ ತಮ್ಮ ಸಂಘದ ವತಿಯಿಂದ ಎತ್ತುಗಳ ಮೇರವಣಿಗೆ ನಡೆಸುವರು, ನಂತರ ದೇವಿಗೆ ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸದ್ಭಕ್ತರು ಪೂಜೆ ಹರಿಕೆ ಸಲ್ಲಿಸುವರು, ನಂತರ ಸಂಜೆ ದೇವಿಯು ದೇವಸ್ಥಾನದಿಂದ ಮರಳಿ ಗ್ರಾಮದೇವತಾ ದೇವಸ್ಥಾನ ತಲುಪುವುದು.