ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಕಾಂಗ್ರೆಸ್ ನಿಂದ ಅನಗತ್ಯ ಗೋಂದಲ ಸೃಷ್ಟಿ ಶಿವಾನಂದ ಗುರುಮಠ ಆರೋಪ

Share

ಹಾವೇರಿ: ಕಾಂಗ್ರೆಸ್ ಪಕ್ಷ ವಿನಾ ಕಾರಣ ಸಿಎಎ ಬಗ್ಗೆ ಜನರಲ್ಲಿ ಗೊಂದಲ ಉಂಟು ಮಾಡಿದ್ದು, ಬಾಂಗ್ಲಾ, ಅಪಘಾನಿಸ್ತಾನ ಹಾಗೂ ಪಾಕಿಸ್ತಾನದಿಂದ ಭಾರತಕ್ಕೆ ಒಳ ನುಸುಳುಕೊರರಿಗೆ ಪೌರತ್ವ ಕಲ್ಪಸಿಕೊಟ್ಟು ಮುಂದೆ ಅವರನ್ನು ಮತಬ್ಯಾಂಕ್ ಮಾಡಿಕೊಳ್ಳಲು ಗೊಂದಲ ಸೃಷ್ಟಿ ಮಾಡುತ್ತಿದೆ ಎಂದು ಹಾವೇರಿಯಲ್ಲಿ ಅಖಿಲ ಕರ್ನಾಟಕ ಕಬ್ಬು ಬೆಳಗಾರರ ಸಂಘದ ಅಧ್ಯಕ್ಷ ಶಿವಾನಂದ ಚಿಕ್ಕಮಠ ಆರೋಪಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮುಸ್ಲಿಂ ಮತಗಳು ಕೈತಪ್ಪಿ ಹೋಗುವ ಹೆದರಿಕೆಯಿಂದ ಯಾವುದೇ ಸತ್ಯಾಂಶವಿಲ್ಲದೇ ಸಿಎಎ ಅನ್ನು ಕಾಂಗ್ರೆಸ್ ಪಕ್ಷದವರು ವಿರೋಧಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಕಟ್ಟಿದವಳು ಬ್ರಿಟಿಷ್ ಮಹಿಳೆ ಇಂದು ಇಟಲಿ ಮಹಿಳೆ ಅದನ್ನು ಮುನ್ನಡೆಸುತ್ತಿದ್ದು, ವಿದೇಶಿಗರಿಂದ ಭಾರತದ ಅಭಿವೃದ್ಧಿ ಅಸಾಧ್ಯ. ಈಗಾಗಲೇ ರಾಜ್ಯ ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಜನರು ತಿರಸ್ಕರಿಸಿದ್ದು, ಜನರು ಇನ್ನಾದರೂ ಗುಲಾಮಗಿರಿಯಿಂದ ಹೊರಬಂದು ದೇಶದ ಅಭಿವೃದ್ಧಿ ಬಗ್ಗೆ ಗಮನಹರಿಸುವುದು ಸೂಕ್ತ ಎಂದರು.