ಕೋಡಿ ದುರ್ಗಾದೇವಿ ಜಾತ್ರೆ ಜ.14 ರಿಂದ

Share

ಹಾವೇರಿ: ತಾಲೂಕಿನ ನೆಗಳೂರ ಗ್ರಾಮದ ಕೋಡಿ ದುರ್ಗಾದೇವಿ ಜಾತ್ರಾ ಮಹೋತ್ಸವ ಇದೇ ಜ.14 ಮತ್ತು 15 ಎರಡು ದಿನಗಳ ಕಾಲ ಜರುಗಲಿದೆ. 14 ರ  ಸಂಜೆ ದೇವಿಯನ್ನು ಶೃಂಗರಿಸಿ ಗ್ರಾಮ ದೇವತೆಯ ದೇವಸ್ಥಾನ ದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯ ಮೇಳ ಹಾಗೂ ತಮಾಷಾ ಮದ್ದುಗಳ ಪ್ರದರ್ಶನದೊಂದಿಗೆ ಮೇರವಣಿಗೆ ಮುಖಾಂತರ ಸಂಚರಿಸಿ ದೇವಸ್ಥಾನ ತಲುಪುವುದು. ನಂತರ ದೇವಿಗೆ ದೇವಸ್ಥಾನದಲ್ಲಿ ವಿವಿಧ ಪೂಜಾ ಕೈಕಂರ್ಯಗಳು ಜರಗುವುದು.

15 ರ ಬೆಳಗ್ಗೆ 10ಕ್ಕೆ ಗುರುಶಾಂತೇಶ್ವರ ಭಜನಾ ಸಂಘ ಹಾಗೂ ವೀರಭದ್ರೇಶ್ವರ ಭಜನಾ ಸಂಘಗಳವತಿಯಿಂದ  ಶೃಂಗಾರಗೊಂಡ ಎತ್ತುಗಳ ಮೇರವಣಿಗೆ  ಜರಗುವುದು. ಸಂಜೆ 7ಕ್ಕೆ ದುರ್ಗಾದೇವಿ ದೇವಸ್ಥಾನ ದಿಂದ ಮರಳಿ ಗ್ರಾಮದೇವಿಯ ದೇವಾಸ್ಥನಕ್ಕೆ ‌ಬರುವಳು. ನಂತರ ರೇವಣಸಿದ್ದೇಶ್ವರ ಭಜನಾ ಸಂಘ ಹಾಗೂ ಸಿದ್ದೇಶ್ವರ ಭಜನಾ ಸಂಘ ದವತಿಯಿಂದ ಎತ್ತಿನ ಮೆರವಣಿಗೆ ಜರಗುವುದು. ರಾಜ್ಯದ ನಾನಾ ಭಾಗಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಸದ್ಭಕ್ತರು ಆಗಮಿಸಿ ದೇವಿಗೆ ಹರಿಕೆ ಸಲ್ಲಿಸುವರು. ಎಂದು ಜಾತ್ರಾ ಮಹೋತ್ಸವ ಸೇವಾ ಸಮಿತಿಯವರು ಪ್ರಕಟಣೆ ತಿಳಿಸಿದ್ದಾರೆ.