ಡಿ. 22ರ ಭಾನುವಾರ ನಗರದಲ್ಲಿ ವಿದ್ಯುತ್ ವ್ಯತ್ಯಯ

Share

ಹಾವೇರಿ: ನಗರದ ಹುಕ್ಕೇರಿಮಠದ 11 ಕೆವಿ ಮಾರ್ಗದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಂಡಿರುವುದರಿಂದ ಡಿಸೆಂಬರ್ 22 ರ ಭಾನುವಾರ ಬೆಳಿಗ್ಗೆ 10 ರಿಂದ ಸಂಜೆ 5.30 ರವರೆಗೆ ನಗರದ ದಾನೇಶ್ವರಿ ನಗರ, ವೀರಭದ್ರೇಶ್ವರ ನಗರ, ಶಿವಜ್ಯೋತಿ ಆಸ್ಪತ್ರೆ, ಆಶ್ರಯ ಆಸ್ಪತ್ರೆ, ಬಾದಾಮಿ ನಗರ, ಕೆ.ಜೆ.ಪಿ. ಜ್ಯುವೇಲರ್ಸ್ ರಸ್ತೆ ಮಾರ್ಗದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಅಡಚಣೆಗಾಗಿ ಸಹಕರಿಸಲು ಹೆಸ್ಕಾಂ ಕಾರ್ಯ ನಿರ್ವಾಹಕ ಅಭಿಯಂತರರ ಪ್ರಕಟಣೆ ತಿಳಿಸಿದೆ.