ಡಾ.ಮೃತ್ಯುಂಜಯ ಶೆಟ್ಟರ್‌ಗೆ ಪ್ರತಿಷ್ಟಿತ ಡಾ.ಶಿಮೂಶ ಪ್ರಶಸ್ತಿ ಪ್ರದಾನ

Share

ಹಾವೇರಿ: ವೈಚಾರಿಕ ಉತ್ಸವವಾಗಿ ನಾಡಿನಾಧ್ಯಂತ ಹೆಸರಾಗಿರುವ ಲಿಂ. ಜಗದ್ಗುರುನೈಘಂಟಿನ ಸಿದ್ದಬಸವ ಮುರುಘರಾಜೇಂದ್ರ ಶ್ರೀ ಹಾಗೂ ಅಥಣಿ ಶ್ರೀಮುರುಘೇಂದ್ರ ಮಹಾಶಿವಯೋಗಿಗಳವರ ಸ್ಮರಣೋತ್ಸವದ ಅಂಗವಾಗಿ ಪ್ರತಿವರ್ಷ ಹೊಸಮಠದಿಂದ ಕೊಡುವ ಪ್ರತಿಷ್ಠಿತ ಡಾ.ಶಿಮೂಶ ಪ್ರಶಸ್ತಿಯನ್ನು ನಗರದ ಹೊಸಮಠದ ಬಸವಕೇಂದ್ರದಲ್ಲಿ ಭಾನುವಾರ ರಾತ್ರಿ ಧಾರವಾಡ ಅಂತರಾಷ್ಟ್ರೀಯ ಖ್ಯಾತಿಯ ಹಿಂದೂಸ್ತಾನಿ ಗಾಯಕ ಡಾ.ಮೃತ್ಯುಂಜಯ ಶೆಟ್ಟರ್ ಅವರಿಗೆ ಚಿತ್ರದುರ್ಗದ ಮುರುಘಾಮಠದ ಶೂನ್ಯಪೀಠಾಧ್ಯಕ್ಷರಾದ ಡಾ.ಶಿವಮೂರ್ತಿ ಮುರುಘಾಶರಣರು ಪ್ರದಾನ ಮಾಡಿದರು.

ಡಾ.ಶೆಟ್ಟರ ಅವರಿಗೆ ಡಾ.ಶಿಮೂಶ ಪ್ರಶಸ್ತಿ 50 ಸಾವಿರ ರೂ ನಗದು ಹಾಗೂ ಪ್ರಶಸ್ತಿ ಫಲಕ, ಹಾವೇರಿಯ ಪ್ರಸಿದ್ಧ ಯಾಲಕ್ಕಿ ಹಾರ, ಮೈಸೂರು ಪೇಟಾವನ್ನು ತೊಡಸಿ ಶ್ರೀಗಳು ಸನ್ಮಾನಿಸಿದರು.

ಡಾ.ಮೃತ್ಯುಂಜಯ ಶೆಟ್ಟರ ಅವರು ಹಿಂದುಸ್ಥಾನಿ ಸಂಗೀತ ಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಅವರ ಸಾಧನೆಯನ್ನುಗಮನಿಸಿ ಆಯ್ಕೆ ಸಮಿತಿಯು ಡಾ.ಶಿಮೂಶ ಪ್ರಶಸ್ತಿಗೆ ಅವರನ್ನು ಆಯ್ಕೆಮಾಡಿತ್ತು.

“ಜಾಗತಿಕ ಶಾಂತಿ ಮತ್ತು ಶರಣ ಸಂಸ್ಕ್ರತಿ ವಿಚಾರಕೂಟ” ವಿಷಯವನ್ನು ಡಾ.ಬೈರಮಂಗಲ ರಾಮೇಗೌಡ ಮಂಡಿಸಿದರು, ಸಮ್ಮುಖವನ್ನು ಧಾರವಾಡದ ಮುರುಘಾಮಠದ ಮಲ್ಲಿಕಾರ್ಜುನ ಶ್ರೀ, ಹಾವೇರಿ ಹುಕ್ಕೇರಿಮಠದ ಸದಾಶಿವ ಶ್ರೀ, ಸವಣೂರಿನ ದೊಡ್ಡಹುಣಸೆಮಠದ ಚನ್ನಬಸವ ಶ್ರೀ ವಹಿಸಿದ್ದರು.

ಮುಖ್ಯಅತಿಥಿಗಳಾಗಿ ಶಾಸಕ ನೆಹರು ಓಲೇಕಾರ ಮತ್ತಿತರರು ಆಗಮಿಸಿದ್ದರು. ವೇದಿಕೆಯಲ್ಲಿ ಹೊಸಮಠದ ಬಸವಶಾಂತಲಿಂಗ ಶ್ರೀ, ಡಾ.ಮಲ್ಲಿಕಾರ್ಜುನ ಪಾಲಮೂರ್, ಶರಣ ಸಂಸ್ಕೃತಿ ಉತ್ಸವ ಸಮಿತಿ ಅಧ್ಯಕ್ಷ ಡಾ ಬಸವರಾಜ ವೀರಾಪೂರ, ಉಪಾಧ್ಯಕ್ಷ ಶ್ರೀಧರ ದೊಡ್ಡಮನಿ ಇದ್ದರು.