ಪೊಲೀಸ್ ಸಬ್ ಇನ್ಸಪೆಕ್ಟರ್- ಪರೀಕ್ಷಾ ಪೂರ್ವ ತರಬೇತಿ

Share

ಹಾವೇರಿ: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ವತಿಯಿಂದ ಪುರುಷ ಮತ್ತು ಮಹಿಳೆಯರಿಗೆ ಸಿವಿಲ್ ಪೊಲೀಸ್ ಸಬ್ ಇನ್ಸಪೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನಿಸಿದೆ.

ಈ ಹುದ್ದೆಗೆ ಹಾವೇರಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಿಂದ ಡಿಸೆಂಬರ್ 24 ರಿಂದ 31ರವರೆಗೆ ಉಚಿತ ತರಬೇತಿಯನ್ನು ಆಯೋಜಿಸಿದೆ. ಆಸಕ್ತರು ಡಿಸೆಂಬರ್ 23ರ ಒಳಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಜಿಲ್ಲಾ ಆಡಳಿತ ಭವನ ಕಟ್ಟಡ, ಕೊಠಡಿ ಸಂಖ್ಯೆ 10, 3ನೇ ಮಹಡಿ ಎ ಬ್ಲಾಕ್ ಈ ಕಚೇರಿಗೆ ಸಂಪರ್ಕಿಸಿ ನೋಂದಾಯಿಸಿಕೊಳ್ಳಲು ಕೋರಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ 08375-249291/ 6360112870/9481930137 ಸಂಪರ್ಕಿಸಲು ಉದ್ಯೋಗ ವಿನಿಮಯ ಅಧಿಕಾರಿಗಳು ಕೋರಿದ್ದಾರೆ.