ಜಾನಪದ ಜಾತ್ರೆ: ವಸ್ತುಪ್ರದರ್ಶನ ಮಳಿಗೆಗೆ ಶಾಸಕರಿಂದ ಚಾಲನೆ

Share

ಹಾವೇರಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆಯುತ್ತಿರುವ ಜಾನಪದ ಜಾತ್ರೆ ಅಂಗವಾಗಿ ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾದ ವಸ್ತುಪ್ರದರ್ಶನಕ್ಕೆ ಗುರುವಾರ ಶಾಸಕ ನೆಹರು ಓಲೇಕಾರ ಅವರು ಚಾಲನೆ ನೀಡಿದರು.

ಜಿಲ್ಲೆಯ ವಿವಿಧ ಇಲಾಖೆಗಳ ಏಳು ಮಳಿಗೆಗಳನ್ನು ತೆರೆಯಲಾಗಿದ್ದು, ಆಯಾ ಇಲಾಖೆಗಳ ಯೋಜನೆಗಳು ಹಾಗೂ ಅವುಗಳ ಮಾಹಿತಿಗಳನ್ನೊಂಡ ಮಾದರಿಗಳನ್ನು ಪ್ರದರ್ಶನಗೊಳ್ಳುತ್ತಿವೆ. ರೇಷ್ಮೆ ಇಲಾಖೆಯವತಿಯಿಂದ ವಿವಿಧ ತಳಿಯ ರೇಷ್ಮೆ ಹುಳುಗಳ ಗೂಡು, ಮೂರು ಮಾದರಿಯ ಹುಳು ತಯಾರಿಕೆಯ ಚಂದ್ರಿಕೆ ಹಾಗೂ ರೇಷ್ಮೆಯಿಂದ ತಯಾರಾದ ವಿವಿಧ ವಸ್ತುಗಳನ್ನು ಹಾಗೂ ಕೃಷಿ ಇಲಾಖೆಯಿಂದ ವಿವಿಧ ತಳಿಯ ಸಿರಿಧಾನ್ಯ ಮತ್ತು ಯಾವ ಯಾವ ಬೇಳೆಯನ್ನು ಯಾವ ಕಾಲದಲ್ಲಿ ಹೇಗೆ ಬೆಳೆಯಬೆಕು, ಅವುಗಳಿಗೆ ಬರುವ ರೋಗಗಳಿಗೆ ಸಿಂಪಡಿಸುವ ಔಷಧಿಗಳ ಮಾಹಿತಿಗಳನ್ನೊಳಗೊಂಡ ಬ್ಯಾನರ್‍ಗಳು ಪ್ರದರ್ಶನಗೊಳ್ಳುತ್ತಿವೆ.

ಪಶುಸಂಗೋಪನಾ ಇಲಾಖೆ ವತಿಯಿಂದ ದೇಶಿಯ, ವಿದೇಶಿ ತಳಿಯ ಜಾನುವಾರಗಳ ಮಾಹಿತಿ ಹಾಗೂ ಆರೋಗ್ಯ ಇಲಾಖೆ ವಿವಿಧ ಯೋಜನೆಗಳು ಹಾಗೂ ವಿವಿಧ ರೋಗಗಳಿಗಿರುವ ಲಸಿಕಾ ಮಾಹಿತಿ ವಸ್ತುಗಳ ಮಾದರಿಗಳ ಪ್ರದರ್ಶಿಸಲಾಗುತ್ತಿದೆ. ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ತಯಾರಿಸಿದ ಉತ್ತರ ಕರ್ನಾಟಕದ ಬಹು ಬೇಡಿಕೆಯ ರುಚಿಯಾದ ಖಾದ್ಯಗಳು ಮಹಿಳೆಯರನ್ನು ಸೆಳೆಯುವಲ್ಲಿ ಯಶಸ್ವಿಯಾದವು.