ಜನವರಿ 03 ರಂದು ಕೈಗಾರಿಕಾ ಸ್ಪಂದನ ಸಭೆ

Share

ಹಾವೇರಿ: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ಕೈಗಾರಿಕಾ ಸ್ಪಂದನ ಸಭೆಯನ್ನು ಜನವರಿ 3 ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದೆ.

ಈ ಸಭೆಯಲ್ಲಿ ಉದ್ದಿಮೆದಾರರ ಅಹವಾಲುಗಳನ್ನು ಆಲಿಸಲಾಗುವುದು. ಜಿಲ್ಲೆಯ ಉದ್ದಿಮೆದಾರರು ತಮ್ಮ ಅಹವಾಲುಗಳನ್ನು ಲಿಖಿತವಾಗಿ ಜಂಟಿ ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಕೊಠಡಿ, ಸಂ. 24ಬಿ ಬ್ಲಾಕ್, ಜಿಲ್ಲಾಡಳಿತ ಭವನ ಹಾವೇರಿ ಅಥವಾ ಇ-ಮೇಲ್ jd-haveri@karnatakaindustry.gov.in ವಿಳಾಸಕ್ಕೆ ಜನವರಿ 2ರೊಳಗಾಗಿ ಸಲ್ಲಿಸಬೇಕು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.