ಗ್ರಾಮ ಪಂಚಾಯತ್ ಚುನಾವಣೆ, ಮೊದಲ ಹಂತದಲ್ಲಿ ಶೇ 84.01 ಮತದಾನ

Share

ಹಾವೇರಿ: ಜಿಲ್ಲೆಯ 104 ಗ್ರಾಮ ಪಂಚಾಯತ್‍ಗಳಿಗೆ ಮಂಗಳವಾರ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಶೇ.84.01 ರಷ್ಟು ಮತದಾನವಾಗಿದೆ.

ಮೊದಲ ಹಂತದಲ್ಲಿ ಜಿಲ್ಲೆಯ ಹಾವೇರಿ, ರಾಣೇಬೆನ್ನೂರು, ಹಿರೇಕೆರೂರ ಹಾಗೂ ರಟ್ಟಿಹಳ್ಳಿ ತಾಲೂಕಿನ 104 ಗ್ರಾಮ ಪಂಚಾಯತಿಗಳ 709 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಈ ಪೈಕಿ 35 ಮತಗಟ್ಟೆಗಳಲ್ಲಿ ಅವಿರೋಧ ಆಯ್ಕೆ ಕಾರಣ 674 ಮತಗಟ್ಟೆಗಳಲ್ಲಿ ಮಂಗಳವಾರ ಶಾಂತಿಯುತ ಮತದಾನ ನಡೆದಿದೆ.

2,32,008 ಪುರುಷ, 2,17,415 ಮಹಿಳಾ ಹಾಗೂ 16 ಇತರ ಮತದಾರರು ಸೇರಿ ಒಟ್ಟು 4,49,439 ಮತದಾರರು ಹಕ್ಕು ಚಲಾಯಿಸಿದ್ದಾರೆ.