ಖಾಲಿ ನಿವೇಶನ ಸ್ವಚ್ಛತೆಗೆ ಸೂಚನೆ

Share

ಹಾವೇರಿ: ನಗರದಲ್ಲಿ ಬಹಳಷ್ಟು ಖಾಸಗಿ ಖಾಲಿ ನಿವೇಶನಗಳು ಕಸದ ತೊಟ್ಟಿಗಳಾಗಿದ್ದು, ನಗರದ ಸೌಂದರ್ಯವನ್ನು ಹಾಳು ಮಾಡುತ್ತಿವೆ. ಆದ್ದರಿಂದ 7 ದಿನಗೊಳಗಾಗಿ ಭೂ ಮಾಲೀಕರು ಗಿಡಗಂಟಿ ಸ್ವಚ್ಛಗೊಳಿಸಿ, ಸ್ವಚ್ಛ ಭಾರತ ಅಭಿಯಾನದಲ್ಲಿ ಕೈಜೋಡಿಸಬೇಕು ಎಂದು ನಗರಸಭೆ ಪೌರಾಯುಕ್ತರು ಸೂಚನೆ ನೀಡಿದ್ದಾರೆ.

ವಾರದೊಳಗೆ ಸ್ವಚ್ಛಗೊಳಿಸದಿದ್ದರೆ, ನಿಯಮಾನುಸಾರ ನಗರಸಭೆಯಿಂದ ಸ್ವಚ್ಛಗೊಳಿಸಿ, ಅದಕ್ಕೆ ತಗಲುವ ವೆಚ್ಚವನ್ನು ತಮ್ಮ ನಿವೇಶನದ ಮೇಲೆ ಬೋಜಾ ದಾಖಲಿಸಲಾಗುವುದು. ಆಸ್ತಿ ತೆರಿಗೆ ಮತ್ತು ನೀರಿನ ತೆರಿಗೆ, ಟ್ರೇಡ್‌ ಲೈಸೆನ್ಸ್‌ಗಳನ್ನು ನಗರಸಭೆಗೆ ಬರುವ ಇತರೆ ತೆರಿಗೆಗಳನ್ನು ಪಾವತಿಸಬೇಕು ಎಂದು ಪ್ರಕಟಣೆ ತಿಳಿಸಿದ್ದಾರೆ.