ಡಿ.15 ರಿಂದ ಕ್ರೀಡಾ ಶಾಲೆ ಹಾಗೂ ಕ್ರೀಡಾ ನಿಲಯಗಳಿಗೆ ಆಯ್ಕೆ ಪ್ರಕ್ರಿಯೆ

Share

ಹಾವೇರಿ: ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ವತಿಯಿಂದ ಜಿಲ್ಲೆಯ ಕ್ರೀಡಾ ಶಾಲೆ ಹಾಗೂ ನಿಲಯಗಳಿಗೆ 20121-22ನೇ ಸಾಲಿಗೆ ಡಿ. 15 ರಿಂದ 18 ರವರೆಗೆ ಆಯಾ ತಾಲೂಕು ಕೇಂದ್ರಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿರುವ 14 ವರ್ಷದೊಳಗಿ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಕಿರಿಯರ ವಿಭಾಗದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು. ಪ್ರಸಕ್ತ ಶೈಕ್ಷಣಿನ ಸಾಲಿನಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ 18 ವರ್ಷದೊಳಗಿನ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಹಿರಿಯರ ವಿಭಾಗದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು.

ಆಯ್ಕೆ ಸ್ಥಳ ವಿವರ: ಡಿ. 15 ರಂದು ಬೆಳಿಗ್ಗೆ 10-30 ರಿಂದ ಸವಣೂರ ಹಾಗೂ ಹಿರೇಕೆರೂರು ತಾಲೂಕು ಕ್ರೀಡಾಂಗಣದಲ್ಲಿ ಆಯ್ಕೆ ನಡೆಯಲಿದೆ. ಡಿ. 16 ರಂದು ಬ್ಯಾಡಗಿ ಹಾಗೂ ಶಿಗ್ಗಾಂವ ತಾಲೂಕು ಕ್ರೀಡಾಂಗಣದಲ್ಲಿ ಬೆಳಿಗ್ಗೆ 10-30 ರಿಂದ 1-30 ರವರೆಗೆ ಹಾಗೂ ರಾಣೇಬೆನ್ನೂರು ಹಾಗೂ ಹಾನಗಲ್ ತಾಲೂಕು ಕ್ರೀಡಾಂಗಣದಲ್ಲಿ ಮಧ್ಯಾಹ್ನ 2-30 ರಿಂದ ಆಯ್ಕೆ ನಡೆಯಲಿದೆ. ಡಿ. 18 ರಂದು ಬೆಳಿಗ್ಗೆ 10-30 ರಿಂದ ಹಾವೇರಿ ನಗರದ ಹೊಸಮನಿ ಸಿದ್ದಪ್ ಜಿಲ್ಲಾ ಕ್ರೀಡಾಂಗಣದಲ್ಲಿ ಆಯ್ಕೆ ಪ್ರಕ್ರಿಯೆ ಜರುಗಲಿದೆ. ಹೆಚ್ಚಿನ ಮಾಹಿತಿಗಾಗಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ದೂರವಾಣಿ ಸಂಖ್ಯೆ: 08375-232443/232070 ಸಂಪರ್ಕಿಸಬಹುದು.