ಉಪ ಚುನಾವಣೆ: ಮದ್ಯ ಪಾನ ಮತ್ತು ಮದ್ಯ ಮಾರಾಟ ನಿಷೇಧ

Share

ಹಾವೇರಿ: ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ತೆರವಾದ ತಾಲೂಕು ಪಂಚಾಯತಿ ಹಾಗೂ ಗ್ರಾಮ ಪಂಚಾಯತಿಗಳ ಸದಸ್ಯ ಸ್ಥಾನಗಳಿಗೆ ಮೇ 29 ರಂದು ಉಪಚುನಾವಣೆ ಜರುಗಲಿದೆ. ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಮತ್ತು ಕಾನೂನು ಸುವ್ಯವಸ್ಥೆ ಹಿತದೃಷ್ಟಿಯಿಂದ ಚುನಾವಣೆ ನಡೆಯುವ ಸ್ಥಳಗಳಲ್ಲಿ ದಿನಾಂಕ 13-05-2019ರ ಸಂಜೆ 6 ಗಂಟೆಯಿಂದ 31-05-2019ರ ಮಧ್ಯರಾತ್ರಿ 12ರ ವರೆಗೆ ಮದ್ಯಪಾನ ಮತ್ತು ಮದ್ಯಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೃಷ್ಣ ಬಾಜಪೇಯಿ ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯ ಸವಣೂರ ತಾಲೂಕಿನ 11- ಯಲವಿಗಿ ತಾಲೂಕು ಪಂಚಾಯತಿ ಕ್ಷೇತ್ರ ಹಾಗೂ ರಾಣೇಬೆನ್ನೂರು ತಾಲೂಕಿನ 36-ಗುಡ್ಡದಾನ್ವೇರಿ, ಹಿರೇಕೆರೂರು ತಾಲೂಕಿನ 13-ಬೆಟಕೇರೂರ ಮತ್ತು ಸವಣೂರು ತಾಲೂಕಿನ 16-ಹೂವಿನಶಿಗ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿ ಬೀಯರ್ ಬಾರುಗಳು ಅಥವಾ ಇತರೆ ಯಾವುದೇ ಕ್ಲಬ್‍ಗಳನ್ನು ಮತ್ತು ಮದ್ಯ ಡಿಪೋಗಳನ್ನು ಮುಚ್ಚಿ ಮದ್ಯಪಾನ ಮತ್ತು ಮದ್ಯ ಮಾಟರವನ್ನು , ಮದ್ಯ ಸಂಗ್ರಹಣೆ ಹಾಗೂ ಮದ್ಯ ಸಾಗಾಟ ನಿಷೇಧಿಸಲಾಗಿದೆ ಹಾಗೂ ಈ ದಿನಗಳನ್ನು ಶುಷ್ಕ ದಿವಸಗಳೆಂದು ಘೋಷಿಸಲಾಗಿದೆ.
ಈ ಚುನಾವಣೆ ಪ್ರಕ್ರಿಯೆಗಳು ಜಾರಿಯಲ್ಲಿರುವ ಪ್ರದೇಶಗಳಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ ಯಾರಾದರೂ ಮದ್ಯವನ್ನು ಸ್ವಾಧೀನದಲ್ಲಿಟ್ಟುಕೊಂಡಿ ರುವುದು ಅಥವಾ ಮದ್ಯ ಸೇವಿಸಿ ಬೀದಿಯಲ್ಲಿ ರಂಪಾಟ ಮಾಡುತ್ತಿರುವುದು ಕಂಡು ಬಂದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಚುನಾವಣೆಯ ಪ್ರಕ್ರಿಯೆಗಳು ಮುಕ್ತಾಯವಾ ಗುವವರೆಗೆ ಅಂಹತವನ್ನು ಬಂಧನದಲ್ಲಿಡಲು ಸೂಚಿಸಲಾಗಿದೆ.

Leave a Reply

Your email address will not be published.