ಅ. 1 ರಂದು ನಗರದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ

Share

ಹಾವೇರಿ: ನಗರದಲ್ಲಿ ಅಕ್ಟೋಬರ್ 1 ರಂದು ಮಂಗಳವಾರ ತುರ್ತು ನಿರ್ವಹಣಾ ಕಾಮಗಾರಿ ನಿಮಿತ್ಯ ಹಾವೇರಿ 110 ಕೆ.ವ್ಹಿ.ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಭಾರತಿ ನಗರ 11 ಕೆವಿ ಮಾರ್ಗದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಅಂದು ಬೆಳಿಗ್ಗೆ 11 ಗಂಟೆಯಿಂದ ಸಾಯಂಕಾಲ 5-30ರವರೆಗೆ ಹಾವೇರಿ ನಗರದ ಹಾನಗಲ್ ರೋಡ, ಭಾರತಿ ನಗರ, ಶ್ರೀಕಂಠಪ್ಪ ಬಡಾವಣೆ, ವರದಾನೇಶ್ವರಿ ಪಾರ್ಕ್, ತುಳಸಿ ಐಕಾನ್‍ಲೇ ಔಟ್, ಪಟ್ಟದ ಸ್ವಾಮಿ ಲೇಔಟ್, ಗ್ರಾಮೀಣ ಪೊಲೀಸ್ ಠಾಣೆ, ಜಾನುವಾರು ಮಾರುಕಟ್ಟೆ, ಅಗ್ನಿಶಾಮಕ ಠಾಣೆ, ಶಿವಾಜಿನಗರ 1 ಮತ್ತು 2ನೇ ಕ್ರಾಸ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಹಾಗೂ ಸದರಿ ಫೀಡರ ವ್ಯಾಪ್ತಿಗೆ ಬರುವ ಎಲ್ಲ ಗ್ರಾಹಕರು ಸಹಕರಿಸಬೇಕು ಎಂದು ಹೆಸ್ಕಾಂ ಕಾರ್ಯ ಮತ್ತು ಪಾಲನೆ ಉಪವಿಭಾಗ ಸಹಾಯಕ ಕಾರ್ಯನಿರ್ವಾಹಕ ಇಂಜನೀಯರ ಸಿ.ಬಿ.ಹೊಸಮನಿ ಅವರು ವಿನಂತಿಸಿಕೊಂಡಿದ್ದಾರೆ.