ವಿಶ್ವ ರೇಬಿಸ್ ದಿನಾಚರಣೆ

Share

ಹಾವೇರಿ: ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಹಾಗೂ ಕರ್ನಾಟಕ ಪಶುವೈದ್ಯಕೀಯ ಸಂಘ, ಜಿಲ್ಲಾ ಘಟಕ ಸಹಯೋಗದಲ್ಲಿ ಶನಿವಾರ ಹಾವೇರಿ ಜಿಲ್ಲಾ ಪಶುವೈದ್ಯಕೀಯ ಪಾಲಿಕ್ಲಿನಿಕ್‍ನಲ್ಲಿ ವಿಶ್ವ ರೇಬಿಸ್ ದಿನಾಚರಣೆ ಆಚರಿಸಲಾಯಿತು.

ತಾಲೂಕಿನ ತಹಶಿಲ್ದಾರ ಶಂಕರ ಅವರು ಕಾರ್ಯಕ್ರಮ ಉದ್ಘಾಟಿಸಿದರು. ವಿಶ್ವ ರೇಬೀಸ್(ಹುಚ್ಚು ರೋಗ) ದಿನಾಚರಣೆಯನ್ನು ಪ್ರತಿವರ್ಷ 28ನೇ ಸೆಪ್ಟಂಬರ್‍ರಂದು ಸೂಕ್ಷ್ಮಜೀವಿಶಾಸ್ತ್ರದ ಪಿತಾಮಹ ಹಾಗೂ ರೇಬೀಸ್ ಹಾಗೂ ನೆರಡಿರೋಗದ ಲಸಿಕೆಯನ್ನು ಮೊದಲಿಗೆ ಕಂಡುಹಿಡಿದ ಖ್ಯಾತ ವಿಜ್ಞ್ಯಾನಿ ಲೂಯೀಸ್ ಪಾಶ್ಚರ್ ಅವರ ಮರಣದ ಶತಮಾನೋತ್ಸವದ ಅಂಗವಾಗಿ ವಿಶ್ವದಾದ್ಯಂತ ಕಳೆದ 13 ವರ್ಷಗಳಿಂದ ಆಚರಿಸಲಾಗುತ್ತಿದೆ.

ಅವರು ಮೊದಲ ಬಾರಿಗೆ 1881 ರಲ್ಲಿ ಹುಚ್ಚುನಾಯಿ ಕಡಿತಕ್ಕೊಳಗಾದ ಮಗುವಿಗೆ ಲಸಿಕೆ ಹಾಕಿ ಶುಶ್ರೂಷೆ ಮಾಡಿ ಗುಣಪಡಿಸಿದರು, ಅಂದಿನಿಂದ ಸಂಶೋಧನೆಗಳು ನಡೆದು ಈಗ ಪರಿಣಾಮಕಾರಿಯಾದ ಮತ್ತು ಒಳ್ಳೆಯ ಗುಣಮಟ್ಟದ ಲಸಿಕೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ವರ್ಷದ ವಿಶ್ವ ರೇಬಿಸ್ ದಿನಾಚರಣೆಯ ಧ್ಯೇಯ ವಾಕ್ಯ- “ರೇಬಿಸ್ ಲಸಿಕೆ ಹಾಕಿಸಿ, ರೋಗ ನಿವಾರಿಸಿ” ಈ ರೋಗವನ್ನು ತಡೆಗಟ್ಟುವಕೆ, ನಿಯಂತ್ರಿಸುವಿಕೆ, ನಿವಾರಣೆಯ ಬಗ್ಗೆ ಹಾಗೂ ಮನುಷ್ಯರಲ್ಲಿ-ಪ್ರಾಣಿಗಳಲ್ಲಿ ಅದರ ಪ್ರಭಾವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಹಾಗೂ 2030ಕ್ಕೆ ಭಾರತವನ್ನು ರೇಬಿಸ್ ಮುಕ್ತ ದೇಶವನ್ನಾಗಿಸುವ ಉದ್ದೇಶವಾಗಿದೆ.

ಶ್ವಾನ ಮತ್ತು ಬೆಕ್ಕುಗಳಿಗೆ ಉಚಿತ ರೇಬಿಸ್ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಪಶು ಪಾಲನಾ ಮತ್ತು ಪಶು ವೈದ್ಯಸೇವೆ ಇಲಾಖೆ ಉಪನಿರ್ದೆಶಕರಾದ ಡಾ.ಡಿ.ಸುಧಾಕರ, ಸಹಾಯಕ ನಿರ್ದೇಶಕ ಡಾ.ಪರಮೇಶ ಎನ್ ಹುಬ್ಬಳ್ಳಿ, ಮುಖ್ಯ ಪಶುವೈದ್ಯಾಧಿಕಾರಿ ಡಾ. ಹೆಚ್.ಬಿ ಸಣ್ಣಕ್ಕಿ, ಸಹಾಯಕ ನಿರ್ದೇಶಕ ಡಾ. ಆನಂದ ಪಾಲೆಕರ, ರೋಟರಿ ಕ್ಲಬ್ ಸದ್ಯಸರಾದ ರವಿ ಹಿಂಚಿಗೇರಿ, ಶರತ್ ಮಲ್ಲನಗೌಡ್ರ, ಮಹದೇವಗೌಡ ಪಾಟೀಲ, ಹಾವೇರಿ ಜಿಲ್ಲಾ ಪ್ರಾಣಿ ದಯಾ ಸಂಘದ ಸದ್ಯಸ ನಿಜಲಿಂಗಪ್ಪ ಬಸಗಣ್ಣಿ ಹಾಗೂ ಇಲಾಖೆಯ ಪಶು ವೈದ್ಯಾದಿಕಾರಿಗಳಾದ ಡಾ.ಗಂಗಾಧರ ಸುಕ್ತೆ, ಡಾ.ಮಹೇಶ ಸವಣೂರ, ಡಾ.ಪ್ರವಿಣಾ, ಡಾ.ತ್ರೀವೇಣಿ ಮತ್ತು ತಾಲ್ಲೂಕಿನ ಎಸ್.ಎಫ್ ಕರಿಯಪ್ಪನವರ, ಬಿ.ಐ ಆಡೂರ, ಡಾ.ನಾಗರಾಜ ಜಲ್ಲೇರ ಇತರರು ಉಪಸ್ಥಿತರಿದ್ದರು.

ಒಟ್ಟು 65 ಶ್ವಾನ ಮತ್ತು ಬೆಕ್ಕುಗಳಿಗೆ ಉಚಿತ ರೇಬಿಸ್ ಲಸಿಕೆಯನ್ನು ಹಾಕಲಾಯಿತು ಮತ್ತು ಸಾರ್ವಜನಿಕರಿಗೆ ರೇಬಿಸ್ ಕುರಿತು ಜಾಗೃತಿ ಮೂಡಿಸಲು ವಿಡಿಯೋ ಮೂಲಕ ಪ್ರದರ್ಶಿಸಲಾಯಿತು.