ಲಾರಿಗೆ ಕಾರು ಡಿಕ್ಕಿ: ಇಬ್ಬರು ಸಾವು

Share

ಹಾವೇರಿ: ಜಿಲ್ಲೆಯ ಹಾನಗಲ್ ತಾಲೂಕಿನ ಮೂಡೂರ ಕ್ರಾಸ್ ಬಳಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಮೃತಪಟ್ಟಿರುವ ಘಟನೆ ಸೋಮವಾರ ಜರುಗಿದೆ.

ಮೃತರನ್ನು ಹಾನಗಲ್ ತಾಲ್ಲೂಕು ಬೊಮ್ಮನಹಳ್ಳಿ ನಿವಾಸಿ ಮಲ್ಲಿಕಾರ್ಜುನ ಹಾಲಪ್ಪಗೌಡರ್ (30) ಹಾಗೂ ಸೊರಬ ತಾಲ್ಲೂಕಿನ ತಾವರಗೊಪ್ಪ ನಿವಾಸಿ ಮಲ್ಲಿಕ್ ರಾಜುಗೌಡರ್ (35) ಎಂದು ಗುರುತಿಸಲಾಗಿದೆ.

ಅಪಘಾತದ ರಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಅಪಘಾತ ಕುರಿತು ಹಾನಗಲ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.