ಸಮೂಹ ಸಾಧನೆಯಿಂದ ಅನುಭವ ಮಂಟಪ ನಿರ್ಮಾಣ ಮಾಡಬಹುದು: ಡಾ.ಶಿವಮೂರ್ತಿ ಮುರುಘಾ ಶರಣರು

Share

ಹಾವೇರಿ: ನಗರದ ಬಸವಕೇಂದ್ರ ಹೊಸಮಠದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಶರಣ ಸಂಸ್ಕೃತಿ ಉತ್ಸವ- 2020 ಕಾರ್ಯಕ್ರಮದಲ್ಲಿ ಬೆಂಗಳೂರಿನ ವಿಶ್ರಾಂತ ಕುಲಪತಿ ಹಾಗೂ ಸಾಹಿತ್ಯ ಚಿಂತಕ ಪ್ರೋ. ಮಲ್ಲೇಪುರಂ ವೆಂಕಟೇಶ ಅವರಿಗೆ ಡಾ. ಶಿಮುಖ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಚಿತ್ರದುರ್ಗ ಮುರುಘರಾಜೇಂದ್ರ ಬೃಹನ್ಮತದ ಡಾ. ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ಸಮೂಹ ಸಾಧನೆಯ ಭಾವ ಎಲ್ಲರಲ್ಲಿ ಮೂಡಿದರೆ 20 ನೇ ಶತಮಾನದಲ್ಲೂ ಅನುಭವ ಮಂಟಪ ಕಟ್ಟಬಹುದು ಎಂದರು.

ಸಾಹಿತಿ ರಂಜಾನ್ ದರ್ಗಾ ಮಾತನಾಡಿ,‌ ಜಗತ್ತನ್ನು ಹೇಗೆ ನಾವೆಲ್ಲ ರಕ್ಷಣೆ ಮಾಡಬೇಕು ಎಂಬುವುದನ್ನು ಬಸವತತ್ವ ಹೇಳಿಕೊಡುತ್ತದೆ. 12 ನೇ ಶತಮಾನದಲ್ಲಿ ಬಸವಣ್ಣನವರು ಕಾಯಕ, ಪ್ರಸಾದ ಹಾಗೂ ದಾಸೋಹ ಎಂಬ ತತ್ವಗಳನ್ನು ಒಳಗೊಂಡ ನಿಸರ್ಗ ಧರ್ಮವನ್ನು ನಮಗೆ ಕೊಟ್ಟಿದ್ದಾರೆ. ನಿಸರ್ಗವನ್ನು ಯೋಗ್ಯ ರೀತಿಯಲ್ಲಿ ರಕ್ಷಣೆ ಮಾಡಿ ಬಿಟ್ಟು ಕೊಡುವ ಕರ್ತವ್ಯ ನಮ್ಮ ಮೇಲಿದೆ ಎಂದರು.

ಬಸವಶಾಂತಲಿಂಗ ಶ್ರೀ, ಸವಣೂರಿನ ದೊಡ್ಡಹುಣಸೇಕಲ್ಮಠದ ಚನ್ನಬಸವ ಶ್ರೀಗಳು ಮಾತನಾಡಿದರು. ಧಾರವಾಡದ ಕೆ.ಎಂ.ಎಫ್ ಘಟಕದ ಅಧ್ಯಕ್ಷ ಬಸವರಾಜ ಅರಬಗೊಂಡ, ನಗರಸಭಾಧ್ಯಕ್ಷ ಸಂಜೀವಕುಮಾರ ನೀರಲಗಿ ಸೇರಿದಂತೆ ಇತರರು ಇದ್ದರು.