ಕಾಲ ಕಾಲಕ್ಕೆ ಕಣ್ಣು ತಪಾಸಣೆ ಮಾಡಿಸಿಕೊಳ್ಳಿ: ಡಾ. ವಿದ್ಯಾ ಎಸ್ ಮೋಸ್

?

Share

ಸವಣೂರ: ಸರಿಯಾದ ಸಮಯಕ್ಕೆ ಕಣ್ಣುಗಳನ್ನು ತಪಾಸಣೆ ಮಾಡಿಸಿಕೊಳ್ಳಲು ಉಚಿತ ಕಣ್ಣಿನ ತಪಾಸಣೆ ಶಿಬಿರಗಳು ಪೂರಕವಾದ್ದು, ಇಂತಹ ಶಿಬಿರಗಳನ್ನು ಎಲ್ಲರು ಸದುಪಯೋಗ ಪಡಿಸಿಕೊಳ್ಳುವಂತಾಗಲಿ ಎಂದು ಶಂಕರ ಆಸ್ಪತ್ರೆಯ ಡಾ. ವಿದ್ಯಾ ಎಸ್ ಮೋಸ್ ಅವರು ಹೇಳಿದರು.

ನಗರದ ತಾಲೂಕ ಆಸ್ಪತ್ರೆಯಲ್ಲಿ ತಾಲೂಕ ವೈಧ್ಯಾಧಿಕಾರಿಗಳ ಕಚೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ, ಜಿಲ್ಲಾ ಅಂಧತ್ವ ನಿಯಂತ್ರಣ ಕಾರ್ಯಕ್ರಮ. ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ, ಅಮ್ಮಾ ಸಂಸ್ಥೆ ಹಿರೇಮುಗದೂರ ಹಾಗೂ ಕರ್ನಾಟಕ ವೃತ್ತಿಪರ ಶಿಕ್ಷಣ ಪದವೀಧರರ ಸಂಘ ಹಾವೇರಿ ಇವುಗಳ ಸಂಯುಕ್ತಾಶ್ರಯದಲ್ಲಿ ಜರುಗಿದ ಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ ನೇತ್ರದಾನ ಜಾಗೃತಿ ಶಿಬಿರದಲ್ಲಿ ಅವರು ಮಾತನಾಡಿದರು.

ಕಣ್ಣು ಬಾಳಿನ ಬೆಳುಕು ಇದ್ದಂತೆ. ಅವುಗಳನ್ನು ಜಾಗೃತಿಯಿಂದ ಇಟ್ಟುಕೊಳ್ಳಲು ಪ್ರತಿಯೊಬ್ಬರು ಕಾಳಜಿ ವಹಿಸಬೇಕು. ಸೂಕ್ಷ್ಮ ಅಂಗವಾಗಿರುವ ಕಣ್ಣು ಬದುಕಿಗೆ ಮಹತ್ವದಾಗಿದೆ. ವಿದ್ಯಾವಂತರು ಇಂತಹ ಉಚಿತ ತಪಾಸಣೆಗೆ ಕರೆ ತರುವ ಮೂಲಕ ಹಿರಿಯರಿಗೆ ಸಹಕಾರಿಯಾಗಬೇಕು. ಈ ನಿಟ್ಟಿನಲ್ಲಿ ಅಮ್ಮಾ ಸಂಸ್ಥೆ ಪದಾಧಿಕಾರಿಗಳು ಹಳ್ಳಿ-ಹಳ್ಳಿಗೂ ಹೋಗಿ ಪ್ರಚಾರ ಕಾರ್ಯಕೈಗೊಂಡು ಬಡವರಿಗೆ ಅನುಕೂಲವಾಗಲು ಉತ್ತಮ ಕೆಲಸ ಮಾಡುತ್ತಿದೆ ಎಂದರು.

ಆಸ್ಪತ್ರೆಯ ಆರೋಗ್ಯ ಮಿತ್ರ ಶಿವಕುಮಾರ, ಶಿವಮೊಗ್ಗದ ಶಂಕರ ಆಸ್ಪತ್ರೆಯ ಕಾರ್ಯವೃಂದದ ಶಂಕರ ನಾಯ್ಕ, ರಮ್ಯಾ, ಮಹ್ಮದ ಯುಸೂಫ್ ಹೋಂಗಲ್, ಪವಿತ್ರಾ, ರಮ್ಯ, ಅರ್ಚನಾ, ಅಮ್ಮಾ ಸಂಸ್ಥೆ ಪದಾಧಿಕಾರಿಗಳು ಪಾಲ್ಗೊಂಡಿದ್ದರು.