ವಾಲ್ಮೀಕಿ ಮಹರ್ಷಿ ಜಯಂತಿ ಆಚರಣೆ

Share

ಹಾವೇರಿ: ಜಿಲ್ಲೆಯ ಸವಣೂರ ತಾಲೂಕಿನ ಹಿರೇಮುಗದೂರ ಗ್ರಾಮದಲ್ಲಿ ವೀರಮದಕರಿ ವಾಲ್ಮೀಕಿ ಸಂಘದ ವತಿಯಿಂದ ವಾಲ್ಮೀಕಿ ಮಹರ್ಷಿಯವರ ಜಯಂತಿಯನ್ನು ಭಾನುವಾರ ಆಚರಿಸಲಾಯಿತು.
ಈ ಸಂದರ್ಭದಲ್ಲಿ ವಾಲ್ಮೀಕಿ ಸಮುದಾಯದ ಹಿರಿಯ ಮುಖಂಡ, ಗ್ರಾ.ಪಂ ಮಾಜಿ ಸದಸ್ಯ ಮಲ್ಲಪ್ಪ ತಳವಾರ, ಗ್ರಾ.ಪಂ ಸದಸ್ಯ ಈರಣ್ಣ ಚಪ್ಪರದಳ್ಳಿಮಠ, ವಾಲ್ಮೀಕಿ ಸಮುದಾಯದ ಮುಖಂಡರಾದ ಕೊಟೆಪ್ಪ ತಳವಾರ, ಮಾಲತೇಶ ತಳವಾರ, ಚಂದ್ರಪ್ಪ ತಳವಾರ, ಮಲ್ಲಾರೆಪ್ಪ ತಳವಾರ, ಹನುಮಂತಪ್ಪ ತಳವಾರ, ರವಿ ತಳವಾರ, ನಿಂಗಪ್ಪ ತಳವಾರ, ಚಂದ್ರ ಸಣ್ಣಪ್ಪ ಹೊಸಮನಿ ಸೇರಿದಂತೆ ವಾಲ್ಮೀಕಿ ಸಮುದಾಯದ ಮುಖಂಡರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.