ಗುಜರಾತ್ ಮಾಜಿ ಮುಖ್ಯಮಂತ್ರಿ ಕೇಶುಭಾಯ್ ಪಟೇಲ್ ವಿಧಿವಶ

Share

ಗಾಂಧಿನಗರ: ಎರಡು ಬಾರಿ ಗುಜರಾತ್ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿದ್ದ ಕೇಶುಭಾಯ್ ಪಟೇಲ್ ಅವರು ಇಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರಿಗೆ 91 ವರ್ಷ ವಯಸ್ಸಾಗಿತ್ತು ಎಂದು ಕುಟುಂಬದ ಮೂಲಗಳು ತಿಳಿವೆ.

ಜುಲೈ 24, 1928ರಂದು ಗುಜರಾತ್ ನ ಜುನಾಗಢ ಜಿಲ್ಲೆಯ ವಿಶಾವದಾರ್ ಪಟ್ಟಣದಲ್ಲಿ ಜನಿಸಿದ್ದ ಕೇಶುಭಾವ್, ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರಾಗಿದ್ದರು. 1995ರಲ್ಲಿ ಮೊದಲ ಅವಧಿ ಹಾಗೂ 1998 ರಿಂದ 2001ರವರೆಗೆ ಎರಡನೇ ಅವಧಿಗೆ ಗುಜರಾತ್ ಮುಖ್ಯಮಂತ್ರಿಯಾಗಿ ಕೇಶುಭಾಯ್ ಸೇವೆ ಸಲ್ಲಿಸಿದ್ದರು.

ಪಟೇಲ್ ಅವರು 6 ಬಾರಿ ಗುಜರಾತ್ ವಿಧಾನಸಭೆ ಸದಸ್ಯರಾಗಿ ಆಯ್ಕೆ ಆಗಿದ್ದರು. 2012ರಲ್ಲಿ ಪಟೇಲ್ ಅವರು ಬಿಜೆಪಿ ತೊರೆದು ಬಾಜಪ ತೊರೆದು ಗುಜರಾತ್ ಪರಿವರ್ತನ ಸ್ಥಾಪನೆ ಮಾಡಿ 2014ರಲ್ಲಿ ಆ ಪಕ್ಷವನ್ನು ಮತ್ತೇ ಬಿಜೆಪಿ ಪಕ್ಷದ ಜೊತೆ ವಿಲೀನಗೊಳಿಸಿದರು.

1945ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ (ಆರ್ ಎಸ ಎಸ್) ಸಂಘಕ್ಕೆ ಪ್ರಚಾರಕ್ಕಾಗಿ ಸೇವೆ ಸಲ್ಲಿದ್ದರು. ಪ್ರಧಾನಿ ನರೇಂದ್ರ ಮೊದಿ ಸೇರಿದಂತೆ ಹಲವಾರು ರಾಜಕೀಯ ಮುಖಂಡರ ಜೊತೆ ಕೇಶುಬಾಯ್ ಪಟೇಲ್ ನಿಟಕ ಸಂಬಂದ ಹೊಂದಿದ್ದರು.