ರಷ್ಯಾ-ಉಕ್ರೇನ್​​​ ಯುದ್ಧ ತಟ್ಟಿದ ಬಿಸಿ; ಗೋಧಿ, ಅಡುಗೆ ಎಣ್ಣೆ ಬೆಲೆ ಗಗನಕ್ಕೆi

Share

ಮುಂಬೈ,ಮಾರ್ಚ್ 7: ಭಾರತಕ್ಕೂ ಉಕ್ರೇನ್-ರಷ್ಯಾ ಯುದ್ಧದ ಎಫೆಕ್ಟ್ ತಟ್ಟಿದೆ. ಬೆಂಗಳೂರಲ್ಲಿ ಗೋಧಿ, ಅಡುಗೆ ಎಣ್ಣೆ ಬೆಲೆಯಲ್ಲಿ ಭಾರೀ ಏರಿಕೆ ಕಂಡಿದೆ. ಗೋಧಿ ಬೆಲೆಯಲ್ಲಿ ಶೇ.10ರಿಂದ ಶೇ.‌15ರಷ್ಟು ಹೆಚ್ಚಳ ಆಗಿದ್ದು, ಜನಸಾಮಾನ್ಯರು ಪರದಾಡುವಂತಾಗಿದೆ.

ಸನ್‌ಫ್ಲವರ್ ಆಯಿಲ್ ಬೆಲೆಯಲ್ಲೂ 50 ರೂಪಾಯಿ ಹೆಚ್ಚಳ ಆಗಿದೆ. ತೈಲ‌ ಬೆಲೆಯಲ್ಲೂ ₹10 ರಿಂದ ₹15 ಹೆಚ್ಚಾಗೋ ಸಾಧ್ಯತೆ ಇದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಳ ಆಗಿದ್ದು, ಒಂದು ಬ್ಯಾರೆಲ್​​ಗೆ 10,671.72ಕ್ಕೆ ಏರಿಕೆ ಕಂಡಿದೆ.

ಬೆಲೆ ಏರಿಕೆಗೆ ಕಾರಣ

ಗೋಧಿ, ಜೋಳ, ಬಾರ್ಲಿಯನ್ನ ಹೆಚ್ಚು ಬೆಳೆಯುವ ದೇಶ ಉಕ್ರೇನ್​​ಉಕ್ರೇನ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೂರ್ಯಕಾಂತಿ ತೈಲ ಉತ್ಪಾದನೆಜಗತ್ತಿನ ಬೇಡಿಕೆಯ ಶೇ. 75ರಷ್ಟು ಎಣ್ಣೆ ಉಕ್ರೇನ್​​ನಿಂದ ಸರಬರಾಜುಭಾರತಕ್ಕೆ ಕೂಡ ಅವಶ್ಯಕತೆಗೆ ಅನುಗುಣವಾಗಿ ಖಾದ್ಯ ತೈಲ ಸರಬರಾಜುಭಾರತದಲ್ಲಿ ಉಪಯೋಗಿಸುವ ಶೇಕಡಾ 60ರಷ್ಟು ಖಾದ್ಯ ತೈಲ ಆಮದುಪೂರೈಕೆ ಕಡಿಮೆಯಾದ ಕಾರಣ ಬೆಂಗಳೂರಿನಲ್ಲಿ ಅಡುಗೆ ಎಣ್ಣೆ ಬೆಲೆ ಏರಿಕೆ