ದೇಶದ ಮೊದಲ “ಚೈಲ್ಡ್ ಕೋವಿಡ್ ಸೆಂಟರ್” : 3ನೇ ಅಲೆ ಎಚ್ಚರಿಕೆ ಬೆನ್ನಲ್ಲೇ ಮುಂದಾದ ಪಾಲಿಕೆ

Share

ಪುಣೆ: ಕರೋನದ ಎರಡನೇ ಅಲೆಯಿಂದಾಗಿ ಅನೇಕರು ದಿನದಿಂದ  ದಿನಕ್ಕೆ   ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.  ಕರೋನದ ಮೂರನೇ ಅಲೆಯೂ ಬರಲಿದೆ. ಕರೋನದ ಎರಡನೇ ಅಲೆಯಿಂದಾಗಿ ಯುವಜನರು ಕರೋನಾದಿಂದ ಪ್ರಭಾವಿತರಾದಂತೆಯೇ, ಈಗ ಮೂರನೇ ಅಲೆಯಿಂದ ಕರೋನಾ ಚಿಕ್ಕ ಮಕ್ಕಳಿಗೆ ದೊಡ್ಡ ಅಪಾಯವಾಗಿದೆ. ಕರೋನದ ಮೂರನೇ ಅಲೆಯ ಸಂಭವನೀಯ ಅಪಾಯವನ್ನು ಪರಿಗಣಿಸಿ, ಪುಣೆ ಮಹಾನಗರ ಪಾಲಿಕೆ ಸಿದ್ಧತೆಗಳನ್ನು ಪ್ರಾರಂಭಿಸಿದೆ. ಮೂರನೆಯ  ಅಲೆಯ ಕುರಿತಾಗಿ ಕೇಂದ್ರ ವೈದ್ಯಕೀಯ ಸಲಹೆಗಾರರು ಎಚ್ಚರಿಕೆ ನೀಡಿದ್ದಾರೆ.
ಮಕ್ಕಳ ಮೇಲೆ ಮೂರನೇ ಅಲೆ ಪ್ರಭಾವವನ್ನು ಪರಿಗಣಿಸಿ ಪುಣೆ ಮಹಾನಗರ ಪಾಲಿಕೆ ಎಚ್ಚರಿಕೆಯ ಕ್ರಮಕೈಗೊಳ್ಳುತ್ತಿದೆ. ಇದಕ್ಕಾಗಿ ಪುಣೆಯಲ್ಲಿ ಮೊದಲ ಮಕ್ಕಳ ಕೋವಿಡ್ ಕೇರ್ ಸೆಂಟರ್ ಆಸ್ಪತ್ರೆಯನ್ನು ಸ್ಥಾಪಿಸಲಾಗುವುದು ಎಂದು ಪುಣೆ ಮಹಾನಗರ ಪಾಲಿಕೆ ತಿಳಿಸಿದೆ. ಈ ಮಕ್ಕಳ ಆರೈಕೆ ಆಸ್ಪತ್ರೆಯನ್ನು ಯೆರ್ವಾಡಾದ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಸ್ಥಾಪಿಸಲಾಗುವುದು. ಈ ಸ್ಥಳದಲ್ಲಿ 200 ಆಮ್ಲಜನಕ ಹಾಸಿಗೆಗಳನ್ನು ಒದಗಿಸಲಾಗುವುದು.
ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಮಕ್ಕಳ ಆರೈಕೆ ಆಸ್ಪತ್ರೆಯ ನಿರ್ಮಾಣಕ್ಕೆ 4 ಕೋಟಿ ರೂ. ವೆಚ್ಚವಾಗಲಿದ್ದು, ಮುಂದಿನ ಒಂದೂವರೆ ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಪಾಲಿಕೆಯ ಹೆಚ್ಚುವರಿ ಆಯುಕ್ತ ರುಬೆಲ್ ಅಗರ್‌ವಾಲ್ ತಿಳಿಸಿದ್ದಾರೆ. ಪುಣೆಯ ಜೊತೆಗೆ ಔರಂಗಾಬಾದ್ ಮಹಾನಗರ  ಗರ್ಭಿಣಿಯರು ಮತ್ತು ಯುವಜನರು ಕರೋನಾದಿಂದ ಹೆಚ್ಚಿನ ಅಪಾಯವನ್ನು ಎದುರಿಸು ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮಕ್ಕಳ ವೈದ್ಯರ ಕಾರ್ಯಪಡೆ ರಚಿಸಲಾಗುವುದು ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಾಹಿತಿ ನೀಡಿದ್ದಾರೆ.