ಕೇರಳದಲ್ಲಿ ಮೇ 8 ರಿಂದ ರಾಜ್ಯಾದ್ಯಂತ ಲಾಕ್​​ಡೌನ್​

Share



ತಿರುವನಂತಪುರಂ: ದಿನವೊಂದರಲ್ಲಿ 41,953 ಹೊಸ ಕೋವಿಡ್​ ಕೇಸ್ ಹಾಗೂ 58 ಸಾವು​ ವರದಿಯಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಕೇರಳ ಸರ್ಕಾರ ಮೇ 8ರಿಂದ ಮೇ 16ರವರೆಗೆ 9 ದಿನಗಳ ಲಾಕ್​​ಡೌನ್​ ಘೋಷಿಸಿದೆ.

ಪ್ರಕರಣಗಳ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು ಈಗಾಗಲೇ ಲಾಕ್​​ಡೌನ್​​ನಂತಹ ಕಠಿಣ ನಿರ್ಬಂಧಗಳು ರಾಜ್ಯದಲ್ಲಿ ಜಾರಿಯಲ್ಲಿದ್ದು, ವೈರಸ್​ ಮತ್ತಷ್ಟು ಉಲ್ಬಣಗೊಳ್ಳದಂತೆ ತಡೆಯಲು ಲಾಕ್​​ಡೌನ್​ ಹೇರಿರುವುದಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.