ತಂಬಾಕು ಉತ್ಪನ್ನಗಳ ವ್ಯಾಪಾರಸ್ಥರಿಗೆ ದಂಡ ವಿಧಿಸಿದ ಅಧಿಕಾರಿಗಳು

Share

ಗದಗ: ಬೀಡಿ, ಸಿಗರೇಟ್ಸ್ ಹಾಗೂ ಇತರೆ ತಂಬಾಕು ಉಪತ್ಪನ್ನಗಳ ಜಾಹಿರಾತು ನಿಷೇಧ, ವ್ಯಾಪಾರ ವಹಿವಾಟು, ಉತ್ಪಾದನೆ ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಮತ್ತು ತನಿಖಾ ದಳದ ಸಹಯೋಗದಲ್ಲಿಂದು ಜಿಲ್ಲೆಯ ಶಹರ ವಲಯದ ವ್ಯಾಪ್ತಿಯಲ್ಲಿ ಬರುವ, ಬೀಡಾ ಅಂಗಡಿ, ಹೋಟೆಲ್, ಟೀ ಸ್ಟಾಲ್‌ಗಳ ಮೇಲೆ ಜಿಲ್ಲಾ ಸಮೀಕ್ಷಾಣಾಧಿಕಾರಿ ಜಗದೀಶ ನುಚ್ಚಿನ ನೇತೃತ್ವದಲ್ಲಿ ದಾಳಿ ನಡೆಸಿದರು. ನಿಯಮ ಉಲ್ಲಂಘಿಸಿದವರ ವಿರುದ್ಧ ಒಟ್ಟು ೧೫ ಪ್ರಕರಣಗಳು ದಾಖಲಾಗಿದ್ದು, ೧೭೦೦ ರೂಪಾಯಿ ದಂಡ ವಸೂಲಿ ಮಾಡಲಾಗಿದೆ.

ಜಿಲ್ಲಾ ಬಾಲ ಕಾರ್ಮಿಕ ನಿರ್ಮೂಲನಾ ಸಂಘದ ಯೋಜನಾ ನಿರ್ದೇಶಕ ಸಂದೇಶಕುಮಾರ ಪಾಟೀಲ ಹಾಗೂ ಜಿಲ್ಲಾ ಪೋಲಿಸ್ ಇಲಾಖೆಯ ಸಿಬ್ಬಂದಿ, ಸಮಾಜ ಕಾರ್ಯಕರ್ತರಾದ ಬಸಮ್ಮ ಚಿತ್ತರಗಿ, ದುರಗಪ್ಪ ಸಾನಕೇನವರ ಈ ಸಂದರ್ಭದಲ್ಲಿ ಹಾಜರಿದ್ದರು.