ಗ್ರಾ.ಪಂ ಚುನಾವಣೆ: 2ನೇ ಹಂತದ ಚುನಾವಣೆ ಮೊದಲ ದಿನ 59 ನಾಮಪತ್ರಗಳ ಸಲ್ಲಿಕೆ

Share

ಗದಗ: ಜಿಲ್ಲೆಯ ಎರಡನೇ ಹಂತದ ಗ್ರಾಮ ಪಂಚಾಯತ ಚುನಾವಣೆಗೆ ನಾಮಪತ್ರಗಳ ಸ್ವೀಕೃತಿ ಪ್ರಾರಂಭವಾಗಿದ್ದು ನಾಮಪತ್ರ ಸಲ್ಲಿಕೆಯ ಮೊದಲ ದಿನವಾದ ಡಿ.11ರಂದು 64 ಗ್ರಾಮ ಪಂಚಾಯತಗಳ 895 ಸ್ಥಾನಗಳಿಗೆ 59 ನಾಮಪತ್ರಗಳು ಸಲ್ಲಿಕೆಯಾಗಿವೆ.

ಮುಂಡರಗಿ ತಾಲೂಕಿನ 18 ಗ್ರಾಮ ಪಂಚಾಯತಿಯ 264 ಸ್ಥಾನಗಳಿಗೆ 7 ನಾಮಪತ್ರಗಳು ಸಲ್ಲಿಕೆಯಾಗಿವೆ. ನರಗುಂದ ತಾಲೂಕಿನ 13 ಗ್ರಾಮ ಪಂಚಾಯತಗಳ 166 ಸ್ಥಾನಗಳಿಗೆ 1 ನಾಮಪತ್ರ ಸಲ್ಲಿಕೆಯಾಗಿದೆ, ರೋಣ ತಾಲೂಕಿನ 24 ಗ್ರಾಮ ಪಂಚಾಯತಗಳ 331 ಸ್ಥಾನಗಳಿಗೆ 25 ನಾಮಪತ್ರಗಳು ಸಲ್ಲಿಕೆಯಾಗಿವೆ. ಹಾಗೂ ಗಜೇಂದ್ರಗಡ ತಾಲೂಕಿನ 9 ಗ್ರಾಮಪಂಚಾಯತಗಳ 134 ಸ್ಥಾನಗಳಿಗೆ 26 ನಾಮಪತ್ರಗಳ ಸಲ್ಲಿಕೆಯಾಗಿವೆ ಎಂದು ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣೆ ಶಾಖೆ ತಿಳಿಸಿದೆ. ಡಿ.16 2ನೇ ಹಂತದ ಗ್ರಾಮ ಪಂಚಾಯತ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ.