ಹಾವೇರಿಯಲ್ಲಿ ‘ಯೋಗ ದಿನ’ದ ಸರಳ ಆಚರಣೆ

Share

ಹಾವೇರಿ: ಅಂತರಾಷ್ಟ್ರೀಯ ಯೋಗ ದಿನವನ್ನು ಜಿಲ್ಲಾದ್ಯಂತ ಈ ಬಾರಿ ಸರಳವಾಗಿ ಆಚರಿಸಲಾಯಿತು. ಕೊರೊನಾ ವೈರಸ್ ಹರಡುವುದನ್ನು ತಡೆಯಲು ಲಾಕ್ ಡೌನ್ ಘೋಷಿಸಿರುವ ಕಾರಣ ಸಾಮೂಹಿಕ ಕಾರ್ಯಕ್ರಮವನ್ನು ರದ್ದು ಪಡಿಸಲಾಗಿತ್ತು.

ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಹಾವೇರಿಯ ಹುಕ್ಕೇರಿಮಠ ಸದಾಶಿವ ಶ್ರೀ ಯೋಗಭ್ಯಾಸ ಮಾಡಿದರು.
ಬಸವಕೇಂದ್ರ ಹೊಸಮಠ ಹಾಗೂ ಪತಂಜಲಿ ಯೋಗ ಕ್ಲಾಸ್ ಆಶ್ರಯದಲ್ಲಿ ಬಸವಶಾಂತಲಿಂಗ ಶ್ರೀ ನೇತೃತ್ವದಲ್ಲಿ ಭಾನುವಾರ ನಗರದ ಹೊಸಮಠದಲ್ಲಿ ವಿಶ್ವ ಯೋಗ ದಿನಾಚರಣೆ ನಡೆಯಿತು.
ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಹಾವೇರಿ ಶಾಸಕ ನೆಹರು ಓಲೇಕಾರ ತಮ್ಮ ಮನೆಯಲ್ಲಿ ಯೋಗಭ್ಯಾಸ ಮಾಡಿದರು.
ಹಾವೇರಿಯ ಜಿಲ್ಲಾಡಳಿತ ಭವನದ ಆವರಣದಲ್ಲಿ ಜಿಲ್ಲಾಡಳಿತ, ಆಯುಷ್‌ ಇಲಾಖೆ ಮತ್ತು ಜಿಲ್ಲಾ ಯೋಗಾಸನ ಕ್ರೀಡಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಯೋಗ ದಿನದ ಅಂಗವಾಗಿ ಅಧಿಕಾರಿಗಳು ಮತ್ತು ಯೋಗಪಟುಗಳು ಯೋಗಾಭ್ಯಾಸ ಮಾಡಿದರು.