ಹಾವೇರಿ: ಮತ್ತೆ ಮೂರು ಜನರಿಗೆ ಕೋವಿಡ್ ಸೋಂಕು ದೃಢ

Share

ಹಾವೇರಿ: ಜಿಲ್ಲೆಯಲ್ಲಿ ಆಶಾ ಕಾರ್ಯಕರ್ತೆ ಒಳಗೊಂಡಂತೆ ಭಾನುವಾರ ಮೂವರಿಗೆ ಕರೋನಾ ಸೋಂಕು ದೃಢಪಟ್ಟಿದೆ. ಈವರೆಗೆ 41 ಕೋವಿಡ್ ಪ್ರಕರಣ ದೃಢಪಟ್ಟಿದ್ದು, ಈ ಪೈಕಿ 21 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 20 ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಅವರು ತಿಳಿಸಿದ್ದಾರೆ

ಶಿಗ್ಗಾಂವ ನಗರದ P-6832 ಸೋಂಕಿತ ಇಂದು ಮತ್ತೊಬ್ಬ ವ್ಯಕ್ತಿಗೆ ಸೋಂಕು ತಗಲಲು ಕಾರಣವಾಗಿದ್ದಾನೆ. ಈತನ ಪ್ರಾಥಮಿಕ ಸಂಪರ್ಕದಿಂದ ಶಿಗ್ಗಾಂವಿ ದೇಸಾಯಿಗಲ್ಲಿಯ 45 ವರ್ಷದ P-8698 ಮಹಿಳೆಗೆ ಇಂದು ಸೋಂಕು ದೃಢ ಪಟ್ಟಿದೆ. ಜಿಲ್ಲೆಯ 40 ನೇ ಸೋಂಕಿತೆ ಸವಣೂರಿನ 23 ವರ್ಷದ P-8699 ಗರ್ಭಿಣಿ ಹಾಗೂ 41 ನೇ ಪ್ರಕರಣ P- 8700 ಸವಣೂರು ತಾಲೂಕು ಕಾರಡಗಿಯ ಅಶಾ ಕಾರ್ಯಕರ್ತೆಗೆ ಸೋಂಕು ದೃಢಪಟ್ಟಿದೆ.