ಕೋವಿಡ್ ಗುಣಮುಖ: ಮೂವರ ಬಿಡುಗಡೆ

Share

ಹಾವೇರಿ: ಕೋವಿಡ್ ಸೋಂಕಿನಿಂದ ಗುಣಮುಖರಾದ ಜಿಲ್ಲೆಯ ಮೂರು ಜನರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಸೋಮವಾರ ಬಿಡುಗಡೆಮಾಡಲಾಗಿದೆ.

P-6517, P-6518 ಹಾಗೂ P-7131 ಇಂದು ಬಿಡುಗಡೆ ಹೊಂದಿ ವ್ಯಕ್ತಿಗಳಾಗಿದ್ದಾರೆ. ಈವರೆಗೆ ಜಿಲ್ಲೆಯಲ್ಲಿ 41 ಜನರಿಗೆ ಸೋಂಕು ದೃಢಪಟ್ಟಿದ್ದು, ಈ ಪೈಕಿ 24 ಜನರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. 17 ಪ್ರಕರಣಗಳು ಸಕ್ರಿಯವಾಗಿವೆ.