ಹಾವೇರಿ: ಕಂದಾಯ ಇಲಾಖೆಯ ನೌಕರ ಸೇರಿದಂತೆ 45 ಜನರಿಗೆ ಜನರಿಗೆ ಕೋವಿಡ್ ಸೋಂಕು ದೃಢ

Share

ಹಾವೇರಿ: ಕಂದಾಯ ಇಲಾಖೆಯ ನೌಕರ ಹಾಗೂ ಆಶಾ ಕಾರ್ಯಕರ್ತೆ ಸೇರಿ ಶುಕ್ರವಾರ ಜಿಲ್ಲೆಯ 45 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 275 ಕೋವಿಡ್-19 ಪಾಸಿಟಿವ್ ಪ್ರಕರಣ ದೃಢಗೊಂಡಿವೆ. ಈ ಪೈಕಿ 116 ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಇಂದು ಓರ್ವ ಮಹಿಳೆ ಸೇರಿದಂತೆ ಈವರೆಗೆ ಮೂವರು ಮೃತಪಟ್ಟಿದ್ದಾರೆ. 156 ಪ್ರಕರಣಗಳು ಸಕ್ರಿಯವಾಗಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಇಂದು ದೃಢಪಟ್ಟ ಪ್ರಕರಣಗಳ ಪೈಕಿ ಹಾವೇರಿ ತಾಲೂಕಿನ 21, ಶಿಗ್ಗಾಂವ ತಾಲೂಕಿನ 9, ಸವಣೂರ ತಾಲೂಕಿನ 5, ರಾಣೇಬೆನ್ನೂರು ತಾಲೂಕಿನ 6 ಹಾಗೂ ಹಾನಗಲ್ ತಾಲೂಕಿನ 4 ಪ್ರಕರಣಗಳು ಒಳಗೊಂಡಿವೆ.

ರಾಣೇಬೆನ್ನೂರ ತಾಲೂಕಿನ ಕೋಣನತಂಬಿಗೆ ಗ್ರಾಮದ 50 ವರ್ಷದ ಮಹಿಳೆ ಜುಲೈ 8 ರಂದು ಜ್ವರ ಕಾರಣ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿ ಐ.ಎಲ್.ಐ ಕಾರಣ ಚಿಕಿತ್ಸೆ ಪಡೆಯುತ್ತಿದ್ದು, ಇಂದು ಮೃತಪಟ್ಟಿರುತ್ತಾರೆ. ಈಕೆಯ ಸ್ವಾಬ್ ವರದಿ ತೆಗೆದು ಕಳುಹಿಸಲಾಗಿದ್ದು, ಲಾಬ್ ವರದಿ ನಿರೀಕ್ಷಿಸಲಾಗುತ್ತಿದೆ.

ಶಿಗ್ಗಾಂವಿಯ ಜಯನಗರ ಕಂಟೈನಮೆಂಟ್ ಜೋನ್ ನಿವಾಸದಲ್ಲಿ ಜುಲೈ 6 ರಂದು ನಿಧನ ಹೊಂದಿದ್ದ 82 ವರ್ಷದ ವ್ಯಕ್ತಿಯ ಲ್ಯಾಬ್ ವರದಿ ಇಂದು ಬಂದಿದ್ದು, ಪಾಸಿಟಿವ್ ಎಂದು ದೃಢಪಟ್ಟಿದೆ. ಮೃತ 82 ವರ್ಷದ (HVR -247) P-19992 ರ ಸೋಂಕಿತನ ಸಂಪರ್ಕಿತರಾಗಿದ್ದಾರೆ. ಮೃತರ ಸಂಸ್ಕಾರ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮವಾಗಿ ಕೋವಿಡ್-19 ನಿಯಮಾವಳಿಯಂತೆ ಸಂಸ್ಕಾರ ನೆರವೇರಿಸಲಾಗಿತ್ತು.

ಸೋಂಕಿತರ ವಿವರ: ಹಾವೇರಿ ನಗರದ ಗುತ್ತಲ ರಸ್ತೆಯ P-24736ರ ಸಂಪರ್ಕಿತೆ 30 ವರ್ಷದ ಮಹಿಳೆ (HVR-233), ಅಶ್ವಿನಿ ನಗರದ P-19943ರ ಸಂಪರ್ಕಿತೆ 38 ವರ್ಷದ ಮಹಿಳೆ(HVR -234), ಶಿವಬಸವ ನಗರ 44 ವರ್ಷದ ಪುರುಷ (HVR -235 ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ), ಅಶ್ವಿನಿ ನಗರದ P-25372ರ ಸಂಪರ್ಕಿತರಾದ 28 ವರ್ಷದ ಪುರುಷ (HVR -236), 66 ವರ್ಷದ ಪುರುಷ (HVR -237), 22 ವರ್ಷದ ಪುರುಷ (HVR-238), 55 ವರ್ಷದ ಮಹಿಳೆ (HVR -239), ಕಲ್ಲುಮಂಟಪ ಓಣಿಯ 26 ವರ್ಷದ ಮಹಿಳೆ (HVR -240 ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ).

P-16598ರ ಸಂಪರ್ಕಿತರಾದ ಕನವಳ್ಳಿಯ 28 ವರ್ಷದ ಮಹಿಳೆ (HVR-244) 67 ವರ್ಷದ ಮಹಿಳೆ (HVR -245) 60 ವರ್ಷದ ಪುರುಷ (HVR-246), P-18104ರ ಸಂಪರ್ಕಿತರಾದ 50 ವರ್ಷದ ಮಹಿಳೆ (HVR -258), 30 ವರ್ಷದ ಮಹಿಳೆ (HVR 259) ಹಾಗೂ P-16598ರ ಸಂಪರ್ಕಿತರಾದ 29 ವರ್ಷದ ಮಹಿಳೆ (HVR-260), P-23227ರ ಸಂಪರ್ಕಿತೆ 65 ವರ್ಷದ ಮಹಿಳೆ(HVR -261), P-16598ರ ಸಂಪರ್ಕಿತೆ 48 ವರ್ಷ ಮಹಿಳೆ (HVR -262), 60 ವರ್ಷದ ಪುರುಷ HVR-263, 35 ವರ್ಷದ ಪುರುಷ (264), P-18104ರ ಸಂಪರ್ಕಿತ 50 ವರ್ಷದ ಪುರುಷ (HVR -265), 20 ವರ್ಷದ ಯುವಕ (HVR-266), P-23227ರ ಸಂಪರ್ಕಿತರಾದ 26 ವರ್ಷದ ಪುರುಷ (HVR -267) ಸೋಂಕು ದೃಢಪಟ್ಟಿದೆ.ಜುಲೈ 6 ರಂದು ಮಾದರಿಗಳನ್ನು ಲ್ಯಾಬ್ ಗೆ ಕಳುಹಿಸಲಾಗಿದ್ದು, ಜುಲೈ 10 ರಂದು ಪಾಸಿಟಿವ್ ವರದಿ ಬಂದಿರುತ್ತದೆ.

P-30694ರ ಸಂಪರ್ಕಿತ ಶಿಗ್ಗಾಂವ ತಾಲೂಕಿನ ಬಂಕಾಪುರ ಚೌಡಿಕೂಟದ 36 ವರ್ಷದ ಪುರುಷ(HVR -232), P-30694ರ ಸಂಪರ್ಕಿತ ಶಿಗ್ಗಾಂವ ಅಂಬೇಡ್ಕರ ನಗರದ 50 ವರ್ಷದ ಮಹಿಳೆ(HVR -248), P-19933ರ ಸಂಪರ್ಕಿತರಾದ ಜಯನಗರ ಬಡಾವಣೆಯ 45 ವರ್ಷದ ಪುರುಷ(HVR -249), ವಿನಾಯಕ ನಗರದ ನಿವಾಸಿ 59 ವರ್ಷದ ಪುರುಷ (HVR -250 ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ), P -19932ರ ಸಂಪರ್ಕಿತರಾದ ಜಯನಗರ ಬಡಾವಣೆಯ 29 ವರ್ಷದ ಪುರುಷ (HVR -251), 23 ವರ್ಷದ ಯುವಕ (HVR-252), ಸದಾಶಿವಪೇಟೆಯ ಐ.ಎಲ್.ಐ. ಪ್ರಕರಣದ 26 ವರ್ಷದ ಯುವಕ (HVR -273), ಬಂಕಾಪೂರ 3ನೇ ವಾರ್ಡಿ 28 ವರ್ಷದ ಮಹಿಳೆ (HVR -275 ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ). P-19932ರ ಸಂಪರ್ಕಿತರಾದ ಶಿಗ್ಗಾಂವ ಜಯನಗರ ಕಂಟೈನಮೆಂಟ್ ಪ್ರದೇಶದ 82 ವರ್ಷದ ಪುರುಷ (HVR -247) ಜುಲೈ 6ರಂದು ಸ್ವ ಗೃಹದಲ್ಲಿ ಮೃತಪಟ್ಟಿದ್ದು ಈತನ ಮಾದರಿಯನ್ನು ಸಂಗ್ರಹಿಸಿ ಲ್ಯಾಬ್‍ಗೆ ಕಳುಹಿಸಲಾಗಿತ್ತು. ಜುಲೈ 10 ರಂದು ಈತನ ಪಾಸಿಟಿವ್ ವರದಿ ಬಂದಿರುತ್ತದೆ. ಸಂಸ್ಕಾರದ ಸಂದರ್ಭದಲ್ಲಿ ಕೋವಿಡ್ ನಿಯಮಾವಳಿ ಅನುಸರಿಸಲಾಗಿದೆ.

ರಾಣೇಬೆನ್ನೂರ ತಾಲೂಕು ನಿಟ್ಟೂರಿನ ಐ.ಎಲ್.ಐ. ಲಕ್ಷಣದ 25 ವರ್ಷದ ಯುವಕ (HVR-231), ದೇವಗೊಂಡನಹಳ್ಳಿಯ 33 ವರ್ಷದ ಆಶಾ ಕಾರ್ಯಕರ್ತೆ(HVR -253) , P-12119ರ ಸಂಪರ್ಕಿತರಾದ ಮಾರುತಿ ನಗರದ 28 ವರ್ಷದ ಮಹಿಳೆ(254), ದೊಡ್ಡ ಪೇಟೆಯ 42 ವರ್ಷದ ಪುರುಷ (HVR -255 ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ) 58 ವರ್ಷದ ಮಹಿಳೆ (HVR -256 ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ), ಮಾರುತಿ ನಗರದ 30 ಪುರುಷ (HVR -257 ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ). ಸದರಿ ಸೋಂಕಿತರ ಮಾದರಿಯನ್ನು ಜುಲೈ 6 ರಂದು ಲ್ಯಾಬ್‍ಗೆ ಕಳುಹಿಸಲಾಗಿದ್ದು, ಜುಲೈ 10 ರಂದು ಪಾಸಿಟಿವ್ ದೃಢಪಟ್ಟಿದೆ.

ಸವಣೂರ ತಾಲೂಕಿನ ಮಾದಾಪುರದ P-25535ರ ಸಂಪರ್ಕಿತರಾದ 47 ವರ್ಷದ ಮಹಿಳೆ(HVR-242), P-18270 ಸೋಂಕಿತ ವ್ಯಕ್ತಿಯ ಸಹೋದರ ಮನ್ನಂಗಿಯ 24 ವರ್ಷ ಪುರುಷ(HVR-268), ಸೋಂಕಿತ ಸಂಬಂಧಿ 15 ವರ್ಷದ ಬಾಲಕ(HVR-269), ತಾಯಿ 45 ವರ್ಷದ ಮಹಿಳೆ(HVR-270) ಹಾಗೂ P-25535ರ ಸಂಪರ್ಕಿತರಾದ ಮಾದಾಪುರದ 27 ವರ್ಷದ ಮಹಿಳೆ(HVR-274)ಗೆ ಸೋಂಕು ದೃಢಪಟ್ಟಿದೆ.

ಹಾನಗಲ್ ತಾಲೂಕು ಆಡೂರಿನ ಐ.ಎಲ್.ಐ. ಲಕ್ಷಣದ 69 ವರ್ಷದ ಮಹಿಳೆ(HVR-241), ಹಾನಗಲ್ ತಾಲೂಕು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಪ್ರಸ್ತುತ ಗದಗ ನಿಗಧಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತನ ಸಂಪರ್ಕದ ಕಾರಣ ಹಾನಗಲ್ ನಗರದದ ದ್ವಿತೀಯ ದರ್ಜೆ ಗುಮಾಸ್ತ 32 ವರ್ಷದ ಪುರುಷ(HVR-243), P-14604ರ ಸಂಪರ್ಕಿತರಾದ 43 ವರ್ಷದ ಪುರುಷ(HVR-271) ಹಾಗೂ P-12117ರ ಸಂಪರ್ಕಿತ 56 ವರ್ಷದ ಪುರುಷ(HVR-272)ನಿಗೆ ಸೋಂಕು ದೃಢಪಟ್ಟಿದೆ. ಈ ಎಲ್ಲರ ಗಂಟಲು ದ್ರವದ ಮಾದರಿಯನ್ನು ಜುಲೈ 8 ರಂದು ಪರೀಕ್ಷೆಗೆ ಕಳುಹಿಸಲಾಗಿದ್ದು, ಜುಲೈ 9 ರಂದು ಕೋವಿಡ್ ದೃಢಪಟ್ಟಿದೆ.

ನಿಯಮಾನುಸಾರ ಸೋಂಕಿತರ ನಿವಾಸ ಇರುವ ಪ್ರದೇಶದ 100 ಮೀಟರ್ ಪ್ರದೇಶವನ್ನು ಕಂಟೈನಮೆಂಟ್ ಜೋನ್ ಎಂದು ಘೋಷಿಸಲಾಗಿದೆ ಹಾಗೂ ನಗರ ಪ್ರದೇಶದ 200 ಪ್ರದೇಶವನ್ನು ಹಾಗೂ ಸೋಂಕಿತರ ಗ್ರಾಮವಾದ ಕನವಳ್ಳಿ, ಮನ್ನಂಗಿ, ಮಾದಾಪೂರ,ನಿಟ್ಟೂರು, ದೇವಗೊಂಡನಕಟ್ಟೆ, ಆಡೂರ ಗ್ರಾಮಗಳನ್ನು ಸಂಪೂರ್ಣವಾಗಿ ಬಫರ್ ಜೋನ್ ಆಗಿ ಘೋಷಿಸಲಾಗಿದೆ. ಇನ್ಸಿಡೆಂಟಲ್ ಕಮಾಂಡರ್ ಆಗಿ ಆಯಾ ತಾಲೂಕಾ ತಹಶೀಲ್ದಾರ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.