ಹಾವೇರಿ: ಇಬ್ಬರು ಶುಶ್ರೂಷಕಿಯರು, ಓರ್ವ ಸರ್ಕಾರಿ ವೈದ್ಯ ಸೇರಿದಂತೆ 18 ಜನರಿಗೆ ಜನರಿಗೆ ಕೋವಿಡ್ ಸೋಂಕು ದೃಢ

Share

ಹಾವೇರಿ: ಇಬ್ಬರು ಶುಶ್ರೂಷಕಿಯರು, ಇಬ್ಬರು ಪೊಲೀಸ್ ಕಾನ್‍ಸ್ಟೇಬಲ್, ಓರ್ವ ಸರ್ಕಾರಿ ವೈದ್ಯ ಸೇರಿದಂತೆ ಗುರುವಾರ ಜಿಲ್ಲೆಯಲ್ಲಿ 18 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. 50 ಸೋಂಕಿತರು ಗುಣಮುಖರಾಗಿ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 230 ಕೋವಿಡ್-19 ಪಾಸಿಟಿವ್ ಪ್ರಕರಣ ದೃಢಗೊಂಡಿವೆ. 116 ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಹೊಂದಿದ್ದು, ಈವರೆಗೆ 2 ಮೃತಪಟ್ಟಿದ್ದಾರೆ. 112 ಪ್ರಕರಣಗಳು ಸಕ್ರಿಯವಾಗಿವೆ ಎಂದು ಅವರು ತಿಳಿಸಿದ್ದಾರೆ.

ಹಾವೇರಿ ತಾಲೂಕಿನ ಕನವಳ್ಳಿಯ 55 ವರ್ಷದ ಪುರುಷ (HVR -213), 45 ವರ್ಷದ ಮಹಿಳೆ (HVR -214), 27 ವರ್ಷದ ಪುರುಷ (HVR-215), 23 ವರ್ಷದ ಯುವತಿ (HVR -216), ರಾಣೇಬೆನ್ನೂರು ನಗರದ 22 ವರ್ಷದ ಯುವತಿ (HVR-217), ಬ್ಯಾಡಗಿ ತಾಲೂಕಿನ ಕದರಮಂಡಲಗಿಯ 32 ವರ್ಷದ ಪುರುಷ (HVR-218), ರಾಣೇಬೆನ್ನೂರಿನ 31 ವರ್ಷದ ಮಹಿಳೆ (HVR-219), ರಾಣೇಬೆನ್ನೂರು ಸಿದ್ದೇಶ್ವರ ನಗರದ42 ವರ್ಷದ ಪುರುಷ (HVR -220).

ಶಿಗ್ಗಾಂವ ತಾಲೂಕಿನ ಹೊಸೂರಯತ್ನಳ್ಳಿ ಗ್ರಾಮದ 70 ವರ್ಷದ ಪುರುಷ (HVR -221), ಹಾನಗಲ್ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ 35 ವರ್ಷದ ಮಹಿಳೆ (HVR-222), ರಾಣೇಬೆನ್ನೂರಿನ 40 ವರ್ಷದ ಮಹಿಳೆ (HVR-223), ಮೈಸೂರಿನಿಂದ ಆಗಮಿಸಿದ ಬಂಕಾಪುರದ ಚೌಡನಕೇರಿಯ 40 ವರ್ಷದ ಪುರುಷ (HVR -224), 27 ವರ್ಷದ ಹಾವೇರಿ ಜಿಲ್ಲಾ ಆಸ್ಪತ್ರೆ ಶುಶ್ರೂಷಕಿ(HVR -225), ಭೂ ವೀರಾಪುರದ ಕಂಟೈನಮೆಂಟ್ ಜೋನ್‍ನ 27 ವರ್ಷದ ಮಹಿಳೆ(HVR -226).

ಹಾನಗಲ್ ತಾಲೂಕು ಹೋತನಹಳ್ಳಿಯ ಕಂಟೈನಮೆಂಟ್ ಜೋನ್‍ನ 26 ವರ್ಷದ ಪುರುಷ (HVR -227), ರಾಣೇಬೆನ್ನೂರಿನ ಬಸವೇಶ್ವನಗರ 46 ವರ್ಷದ ಪುರುಷ (HVR -228), ಹಾವೇರಿಯ 20 ವರ್ಷದ ಯುವತಿ (HVR -229), ಹಾಗೂ 32 ವರ್ಷದ ಪುರುಷ (HVR-230) ನಿಗೆ ಇಂದು ಸೋಂಕು ದೃಢಪಟ್ಟಿದೆ.

ಓರ್ವ ಮರಣ: ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಶಿಗ್ಗಾಂವ ತಾಲೂಕಿನ ಸೋಂಕಿತ ವ್ಯಕ್ತಿ ಜುಲೈ 8 ರಂದು ಹುಬ್ಬಳ್ಳಿ ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ. ಸರ್ಕಾರದ ಮಾರ್ಗಸೂಚಿ ಅನುಸಾರ ಶಿಗ್ಗಾಂವಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ. ಸದರಿ ವ್ಯಕ್ತಿ ಧಾರವಾಡ ಜಿಲ್ಲಾ ಕೋವಿಡ್ -19 ಸೋಂಕಿತರೆಂದು ಗುರುತಿಸಲಾಗಿದೆ.