ಕೋವಿಡ್19; ಮತ್ತೆ 31 ಜನರಿಗೆ ಸೋಂಕು ದೃಢ

Share

ಹಾವೇರಿ: ಜಿಲ್ಲೆಯಲ್ಲಿ ಬುಧವಾರ 31 ಕೋವಿಡ್ ಸೋಂಕು ದೃಢಪಟ್ಟಿದೆ. 8 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ತಿಳಿಸಿದ್ದಾರೆ.

ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿ ನಡೆದ ಶವ ಸಂಸ್ಕಾರದದಲ್ಲಿ ಭಾಗಿಯಾದ ಹಿರೇಕೆರೂರಿನ ರಾಮತೀರ್ಥದ 15 ಜನರಿಗೆ, ಹಾನಗಲ್ ತಾಲೂಕಿನ ಅಕ್ಕಿಆಲೂರ ಹಾಗೂ ಹಿರೇಕೆರೂರಿನ ಸರ್ಕಾರಿ ಆಸ್ಪತೆ ಲ್ಯಾಬ್ ಟೆಕ್ನಿಷಿಯನ್, ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ಹೆಸ್ಕಾಂ ಕಚೇರಿಯಲ್ಲಿ ಲೈನಮನ್ ಸೇರಿದಂತೆ 31 ಜನರಿಗೆ ಕೋವಿಡ್ ದೃಢಪಟ್ಟಿದೆ.

ಹಿರೇಕೆರೂರು ತಾಲೂಕಿನಲ್ಲಿ 16, ಸವಣೂರು, ಹಾನಗಲ್, ರಾಣೇಬೆನ್ನೂರಿನಲ್ಲಿ ತಲಾ 3 ಪ್ರಕರಣ, ಹಾವೇರಿ ಹಾಗೂ ಬ್ಯಾಡಗಿ ತಾಲೂಕಿನಲ್ಲಿ ತಲಾ 1 ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲೆಯಲ್ಲಿ ಈವರೆಗೆ 212 ಕೋವಿಡ್ ಪ್ರಕರಣ ದೃಢಗೊಂಡಿದ್ದು, 66 ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಹೊಂದಿದ್ದಾರೆ. 2 ಸೋಂಕಿನಿಂದ ಮೃತಪಟ್ಟಿದ್ದು, 144 ಪ್ರಕರಣಗಳು ಸಕ್ರಿಯವಾಗಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.