ಹಾವೇರಿ: ಓರ್ವ ಪೋಲಿಸ್ ಕಾನ್‍ಸ್ಟೇಬಲ್ ಸೇರಿದಂತೆ ಆರು ಜನರಿಗೆ ಕೋವಿಡ್ ಸೋಂಕು ದೃಢ

Share

ಹಾವೇರಿ: ಜಿಲ್ಲೆಯಲ್ಲಿ ಮಂಗಳವಾರ ಓರ್ವ ಪೊಲೀಸ್ ಕಾನ್‍ಸ್ಟೇಬಲ್ ಸೇರಿದಂತೆ ಒಟ್ಟು 6 ಜನರಿಗೆ ಕೋವಿಡ್ ಸೋಂಕು ದೃಢ ಪಟ್ಟಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ತಿಳಿಸಿದ್ದಾರೆ.

ಈವರೆಗೆ ಜಿಲ್ಲೆಯಲ್ಲಿ 181 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, 56 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ‌. 02 ಜನರು ಸೋಂಕಿನಿಂದ ಮೃತ ಪಟ್ಟಿದ್ದು, 123 ಸಕ್ರಿಯ ಪ್ರಕರಣಗಳಿವೆ‌.

ಇಂದು ಪತ್ತೆಯಾದ ಪ್ರಕರಣಗಳಲ್ಲಿ ಹಾವೇರಿ ತಾಲ್ಲೂಕಿನಲ್ಲಿ 04, ಹಾನಗಲ್ ಹಾಗೂ ಸವಣೂರು ತಾಲ್ಲೂಕುಗಳಲ್ಲಿ ತಲಾ 01 ಪ್ರಕರಣಗಳು ಪತ್ತೆಯಾಗಿವೆ.