ನ್ಯಾಯ ನಿಷ್ಠುರ, ನೇರಮಾತಿನ, ಸರಳ ಸಜ್ಜನ ಅಪ್ಪಟ ಹೋರಾಟಗಾರನಿಗೆ ಈಗ ಅರವತ್ತು!

Share

ಪತ್ರಿಕೆ ಮಾರುವ ಹುಡುಗನೊಬ್ಬ ಮುಂದೋಂದು ದಿನ ವಿಶ್ವವಿದ್ಯಾಲಯೊಂದರ ಪತ್ರಿಕೋದ್ಯಮ ವಿಭಾಗದ ಬೋಧಕನಾಗುತ್ತಾನೆಂಬುದು ಊಹೆಯೇ ಸರಿ. ಆದರೆ ಆ ಊಹೆ ನಿಜವಾಗಿಸಿದವರೆ, ಕನಸಲ್ಲೂ ನೆನೆಯದ ವ್ಯಕ್ತಿಯೇ ಸದ್ಯ ಕರ್ನಾಟಕ ವಿಶ್ವವಿದ್ಯಾಲಯ ಪತ್ರಿಕೋದ್ಯಮ ವಿಭಾದಲ್ಲಿ ಸಹ-ಪ್ರಾದ್ಯಾಪಕರಾಗಿರುವ ಡಾ. ನಾಗರಾಜ ಆರ್ ಹಳ್ಳಿಯವರ. ಇದೇ ಜುಲೈ 7ಕ್ಕೆ ಅವರಿಗೆ ಅರವತ್ತು. ಈ ಅರವತ್ತು ವಸಂತಗಳು, ಅವರ ಬದುಕಿನ ಒಂದೊಂದು ಘಟನೆಗಳು ವೈಶಿಷ್ಠಮಯ.

ಮೂಲತ ಹಾವೇರಿ ಜಿಲ್ಲೆಯ ರಾಣೀಬೆನ್ನೂರ ತಾಲೂಕು ಹಲಗೇರಿ ಗ್ರಾಮದವರು.(ಇತ್ತೀಚೆಗೆ ನಮ್ಮನ್ನಗಲಿದ ನಾಡೋಜ, ಖ್ಯಾತ ಪತ್ರಕರ್ತ, ಪತ್ರಿಕೋದ್ಯಮ ಡಾ. ಪಾಟೀಲ ಪುಟ್ಟಪ್ಪ ಇದೇ ಊರಿನವರು.) ಮೃದು ಸ್ವಭಾವದ, ನೇರಮಾತಿನ, ಸಹೃದಯವಾದ, ಸರಳ ಸಜ್ಜನ ವ್ಯಕ್ತಿ. ಅಪ್ಪಟ ಹೋರಾಟಗಾರ. ಶಿಕ್ಷಕರ ಕುಟುಂಬದ ಸುಸ್ಕøಂತ ಮನೆತನದಲ್ಲಿ ಜನಿಸಿದ ಇವರು ಪ್ರಾಥಮಿಕ ಹಾಗೂ ಮಾದ್ಯಮಿಕ ಶಿಕ್ಷಣವನ್ನು ಹಲಗೇರಿಯಲ್ಲಿ ಪೂರೈಸಿದರು. ರಾಣೇಬೆನ್ನೂರ ಆರ್.ಟಿ. ಈ.ಎಸ್. ಕಾಲೇಜಿನ ವಿದ್ಯಾರ್ಥಿಯಾಗಿ ಕ.ವಿ.ವಿ ಯಿಂದ 1981ರಲ್ಲಿ ಬಿ.ಎ. ಪದವಿ ಪಡೆದರು.

ವಿದ್ಯಾರ್ಥಿದೆಸೆಯಲ್ಲಿ ವಿದ್ಯಾರ್ಥಿ ಚಳುವಳಿಯಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗಾಗುತ್ತಿರುವ ಅನ್ಯಾಯದ ವಿರುದ್ದ ಪ್ರತಿಭಟಿಸಿದವರು. ಈ ಕಾರಣಕ್ಕಾಗಿ ನ್ಯಾಯಾಲಯದಲ್ಲಿ ಪ್ರಕರಣ ಎದುರಿಸಿ ಗೆದ್ದವರು. ಕಾಲೇಜಿನಲ್ಲಿ ಓದುತ್ತಿರುವಾಗ ಆಡಳಿತ ಮಂಡಳಿಯಿಂದ ತಮ್ಮ ಶಿಕ್ಷಕರಿಗೆ ಆಗುತ್ತಿರುವ ಧೋರಣೆ ಖಂಡಿಸಿ, ಆಡಳಿತ ಮಂಡಳಿ ವಿರುದ್ದ ನಡೆದ ಹೋರಾಟದಲ್ಲಿ, ಶಿಕ್ಷಕರ ಪರವಾಗಿ, ವಿದ್ಯಾರ್ಥಿಗಳನ್ನು ಸಂಘಟಿಸಿ ಬೆಂಬಲವಾಗಿ ನಿಂತು ಹೋರಾಟ ಮಾಡಿದವರು. ಅದರ ಫಲವಾಗಿ ಇಂದು ಖಾಸಗಿ ಅನುದಾನಿತ ಶಾಲಾ-ಕಾಲೇಜುಗಳ ಸಿಬ್ಬಂದಿಗಳು ಸರಕಾರದಿಂದ ನೇರವಾಗಿ ವೇತನ ಪಡೆಯುವಂತಾಯಿತು.

ಖ್ಯಾತ ಪತ್ರಿಕೋದ್ಯಮಿ, ನಾಡೋಜ ಡಾ. ಪಾಟೀಲ ಪುಟ್ಟಪ್ಪ ಅವರ ಗಾಡ ಪ್ರಭಾವ, ದಾವಣಗೇರಿ ‘ಜನತಾ ವಾಣಿ’ ಪತ್ರಿಕೆ ಸಂಪಾದಕರಾಗಿದ್ದ ದಿ: ಎಚ್. ಎನ್. ಷಡಾಕ್ಷರಪ್ಪ ಅವರ ಪ್ರೇರಣೆ, ಪತ್ರಿಕಾ ಕ್ಷೇತ್ರದಲ್ಲಿ ಪದಾರ್ಪಣೆಗೆ ಕಾರಣವಾಯಿತು.

ಅಖಂಡ ಧಾರವಾಡ ಜಿಲ್ಲೆಯ ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷರು, ರಾಣೀಬೆನ್ನೂರನ ಮಾಜಿ ಶಾಸಕರು ಅದ ಡಾ. ಬಿ.ಜಿ. ಪಾಟೀಲ ಅವರಿಂದ ರಾಜಕೀಯ, ಹಾಗೂ ಸಾಮಾಜಿಕ ಸೇವೆಯ ದೀಕ್ಷೆ ಮುಂದೆ ಪಕ್ಷದ ತಾಲೂಕು, ಜಿಲ್ಲಾ ಘಟಕದ ವಿವಿಧ ಹುದ್ದೆಗಳಲ್ಲಿ ಪದಾಧಿಕಾರಿಯಾಗಿ, ಖಾಯಂ ಆಹ್ವಾನಿತ ಸದಸ್ಯರಾಗಿ ನೇಮಕಗೊಂಡು ಸೇವೆ.

ಪದವಿ ಅಧ್ಯಯನ ಮಾಡುತ್ತಿರುವಾಗ ತಮ್ಮ ನೆಚ್ಚಿನ ಗುರುಗಳ ಸಲಹೆ, ಮಾರ್ಗದರ್ಶನ ಮೇರೆಗೆ ಪ್ರಗತಿಪರ ಚಿಂತಕರು, ಬರಹಗಾರರು, ಲೇಖಕರು, ಸಾಹಿತಿಗಳ ಸಂಪಾಧಕತ್ವದಲ್ಲಿ ಪ್ರಕಟಗೊಳ್ಳುತ್ತಿದ್ದ ಪಿ. ಲಂಕೇಶ ಅವರ ‘ಲಂಕೇಶ ಪತ್ರಿಕೆ’, ಬಿ. ವಿ. ವೈಕುಂಠರಾಜು ಅವರ ‘ವಾರ ಪತ್ರಿಕೆ’, ಮತ್ತು ಇನ್ನೊಬ್ಬ ಪ್ರಗತಿಪರ ಚಿಂತಕರ ಸಂಪಾದಕತ್ವದಲ್ಲಿ ಪ್ರಕಟಗೊಳ್ಳುತ್ತಿದ್ದ ‘ಸುದ್ದಿ ಸಂಗಾತಿ’ ಪತ್ರಿಕೆಯ ಪ್ರತಿನಿಧಿಯಾಗಿ ಕಾರ್ಯನಿರ್ವಹಣೆ ಜೊತೆಗೆ ದಾವಣಗೇರರ ಜನತಾವಾಣಿಯಲ್ಲಿ ಉಪನ್ಯಾಸಕರಾಗಿ ಸೇವೆಯ ಜೊತೆ ಎಲ್.ಎಲ್.ಬಿ ಅಧ್ಯಯನ ಕಾರಣಾಂತರದಿಂದ ಲಾ ಡಿಗ್ರಿ ಪೂರ್ಣ ಗೊಳಿಸಲಾಗಲಿಲ್ಲ.

ರಾಜಕೀಯ, ಸಮಾಜಿಕ, ಪತ್ರಿಕೋದ್ಯಮದ ಅನುಭವದೊಂದಿಗೆ, ರಾಣೇಬೆನ್ನೂರ ನಗರಕ್ಕೆ ಅವಶ್ಯವಾಗಿ ಬೇಕಿದ್ದ, ಜನತೆಯ ದ್ವನಿಯೊಂದರ ಆಗಬೇಕಿದ್ದ ಪತ್ರಿಕೆ ಹುಟ್ಟು ಹಾಕುವ ಯೋಚನೆ ಮಾಡಿ ‘ಹಳ್ಳಿವಾಣಿ’ ಎಂಬ ಹೆಸರಿನ ಪತ್ರಿಕೆ ಸ್ಥಾಪಿಸಿ ಅದರ ಸಂಪಾದಕರಾಗಿ ಕಾರ್ಯನಿರ್ವಹಿಸಿದರು. ವಿಶೇಷವೆಂದರೆ ಅಂದಿನ ವಿಧಾನವಭೆಯ ಅಧ್ಯಕ್ರಾಗಿದ್ದ ಬಿ.ಜಿ. ಬಣಕಾರ ಅವರ ಅಧ್ಯಕ್ಷತೆಯಲ್ಲಿ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಪತ್ರಿಕೆ ಬಿಡುಗಡೆ ಮಾಡಿ ಶುಭ ಹಾರೈಸಿದರು.

ಜನಸಮಾನ್ಯರ ದ್ವನಿಯಾಗಿ ಪತ್ರಿಕೆ ಬೇಗನೆ ಜನಪ್ರಿಯತೆ ಪಡೆಯಿತು. ಪತ್ರಿಕೆಯೊಂದರ ಸಂಚಿಕೆಯಲ್ಲಿ ಪ್ರಕಟಗೊಂಡ ರೈತರ ಸಮಸ್ಯೆಯೊಂದರ ಕುರಿತ ಲೇಖನ ಅಂಧಿನ ವಿರೋಧ ಪಕ್ಷದಲ್ಲಿದ್ದ ಇಂದಿನ ಮುಖ್ಯ ಮಂತ್ರಿ ಯಡಿಯೂರಪ್ಪನವರು ವಿಧಾನ ಸಭೆಯಲ್ಲಿ ಚರ್ಚಿಸಿ ಸರಕಾರದ ಗಮನ ಸೆಳೆದಿದ್ದು ಪತ್ರಿಕೆಯ ಹೆಗ್ಗುರುತು.

ರಾಜ್ಯದಲ್ಲಿ ನಡೆದ ಗೋಕಾಕ ಚಳುವಳಿಯನ್ನು ಗ್ರಾಮೀಣ ಮಟ್ಟದಲ್ಲಿ ಚಳುವಳಿ ಅರಿವು ಮೂಡಿಸಿ ಹಲಗೇರಿ ಗ್ರಾಮದಲ್ಲಿ ಚಳುವಳಿ ಸಂಘಟಿಸಿದ್ದು, ರಾಜ್ಯದಲ್ಲಿ ಪ್ರಥಮ ಹಳ್ಳಿ ಎಂಬ ಹೆಗ್ಗಳಿಕೆಗೆ ಕಾರಣರಾದವರು ನಾಗರಾಜ ಹಳ್ಳಿಯವರ.

ಸಂಪರ್ಕ ಯುಗದ ಇಂದಿನ ದಿನಗಳಲ್ಲಿ ಪತ್ರಿಕಾ ಆಗುಹೋಗುಗಳು ಮತ್ತು ಹೊಸ ಅವಿಷ್ಕಾರಗಳನ್ನು ತಿಳಿದು ಕೊಳ್ಳಲು ಪತ್ರಿಕೋದ್ಯಮ ವಿಷಯವನ್ನು ಅಧ್ಯಯನ ಮಾಡುವ ಉದ್ದೇಶದಿಂದ ‘ಹಳ್ಳಿವಾಣಿ ಪತ್ರಿಕೆ ಪ್ರಕಟನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ 1986ರಲ್ಲಿ ಕ.ವಿ.ವಿ. ಪತ್ರಿಕೋದ್ಯಮ ವಿಭಾಗಕ್ಕೆ ಸೇರಿ 1988ರಲ್ಲಿ ಎಂ.ಎ. ಪದವಿ ಪಡೆದುಕೊಂಡರು. ‘ಹಳ್ಳಿವಾಣಿ’ ಪತ್ರಿಕೆ ಪ್ರಕಟಣೆ ಮುಂದುವರೆಸಿದರು.

ಕರ್ನಾಟಕ ವಿಶ್ವವಿದ್ಯಾಲಯ ಮೊದಲ ಬಾರಿಗರ ಬಿ.ಎ. ತರಗತಿಗಳಲ್ಲಿ ಪತ್ರಿಕೋದ್ಯಮ ವಿಷಯವನ್ನು ಬೋದಿಸಲು ಕ್ರಮಕೈಗೊಂಡ ಹಿನ್ನಲೆಯಲ್ಲಿ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಅಷ್ಟೇ ಅಲ್ಲ ಉತ್ತರ ಕರ್ನಾಟಕದಲ್ಲಿಯೇ ಬಿ.ಎ. ಪದವಿ ತರಗತಿಗಳಲ್ಲಿ ಪತ್ರಿಕೋದ್ಯಮ ಶಿಕ್ಷಣವನ್ನು ಆರಂಭಿಸಿದ ಮೊದಲ ಹೆಗ್ಗಳಿಕೆಗೆ ಪಾತ್ರವಾದ ಧಾರವಾಡ ಅಂಜುಮನ್ ಪದವಿ ಕಾಲೇಜಿನಲ್ಲಿ ವಿಷಯವನ್ನೂ ಭೋದಿಸಲು ಅಧ್ಯಾಪಕರ ಕೊತೆ ಕಂಡು ಬಂದಾಗ ಕಾಲೇಜಿನ ಆಡಳಿತ ಮಂಡಳಿ ಹಾಗೂ ಪ್ರಾಚಾರ್ಯರ ಕೋರಿಕೆಯ ಮೇರೆಗೆ 1989ರಲ್ಲಿ ವಿಭಾಗದ ಉಪನ್ಯಾಸಕರಾಗಿ ಸೇರಿ ಶಿಕ್ಷಕ ವೃತ್ತಿಯಲ್ಲಿ ಸೇವೆ ಪ್ರಾರಂಭಿಸಿದರು. ಹಳ್ಳಿವಾಣಿ ಪ್ರಕಟಣೆ ಅನಿವಾರ್ಯವಾಗಿ ನಿಲ್ಲಿಸಬೇಕಾಯಿತು.

ತಿಂಗಳಿಗೆ ನಾಲ್ಕುನೂರು ರೂಪಾಯಿ ಸಂಬಳದೊಂದಿಗೆ ಪ್ರಾರಂಭವಾದ ಉಪನ್ಯಾಸಕವೃತ್ತಿ, ಹಿರಿಯ ಶ್ರೇಣಿ, ಸಹ-ಪ್ರದ್ಯಾಪಕರಾಗಿ 22 ವರ್ಷ 10 ತಿಂಗಳು ಕಾಲ ಸೇವೆ ಸಲ್ಲಿಸಿದರು. ಇವರ ಮಾರ್ಗದರ್ಶನದಲ್ಲಿ ಸಾವಿರಾರು ವಿದ್ಯಾರ್ಥಿಗಳು ಪದವಿಯಲ್ಲಿ ಪತ್ರಿಕೋದ್ಯಮ ವಿಷಯವನ್ನು ಅಧ್ಯಯನ ಮಾಡಿ ನಾಡಿನ ವಿವಿಧ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಕೆಲವರು ಉನ್ನತ ಶಿಕ್ಷಣ ಪಡೆದು ಬೇರೆ ಬೇರೆ ವೃತ್ತಿಯಲ್ಲಿ ತೊಡಗಿ ಕೊಂಡಿದ್ದಾರೆ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಉತ್ತಮ ಬೋದಕರು ಎಂದು ಹೆಸರುಗಳಿಸಿದ್ದಾರೆ. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಸದಾ ಚಟುವಟಿಕೆಯಿಂದ ದುಡಿಯುತ್ತ ಸಂಸ್ಥೆಯ ಆಡಳಿತ ಮಂಡಳಿಯ ಪ್ರೀತಿಗೆ ಪಾತ್ರರಾಗಿದ್ದರು.

ಉಪನ್ಯಾಸಕ ವೃತ್ತಿಯ ಜೊತೆಗೆ ‘ವಿಶ್ವವಾಣಿ’, ನವನಾಡು ದಿನ ಪತ್ರಿಕೆಗಳಲ್ಲಿ ವರದಿಗಾರ, ಉಪಸಂಪಾದಕರಾಗಿ ಕಾರ್ಯನಿರ್ವಹಿಸಿದ ಅನುಭವದ ಜೊತೆಗೆ ಧಾರವಾಡ ಆಕಾಶವಾಣಿ ಕೇಂದ್ರದಲ್ಲಿ ಸುದ್ದಿವಾಚಕ ಹಾಗೂ ಉದ್ಘೋಷಕರಾಗಿ ಕೆಲಸ ಮಾಡಿದ ಅನುಭವ.

ಕರ್ನಾಟಕ ವಿಶ್ವವಿದ್ಯಾಲಯ, ಬೆಂಗಳೂರು, ಕುವೆಂಪು, ಮಂಗಳೂರು, ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ ವಿಜಯಪುರ, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ, ಕಲಬುರ್ಗಿ, ತುಮಕೂರು ವಿಶ್ವವಿದ್ಯಾಲಯ ಹಾಗೂ ಎಸ್.ಜೆ.ವಿ.ಪಿ ಕಾಲೇಜು (ಸ್ವಾಮತೆ) ಹರಿಹರ ಎಲ್.ಬಿ. ಕಾಲೇಜು(ಸ್ವಾಮತೆ) ಸಾಗರ ಪದವಿ ತರಗತಿಯ ಅಬ್ಯಾಸಮಂಡಳಿ ಹಾಗೂ ಪರೀಕ್ಷಾ ಮಂಡಳಿಯ ಸದಸ್ಯರಾಗಿ, ಚೇರಮನ್ನರಾಗಿ ಕಾರ್ಯನಿರ್ವಹಿಸಿದ್ದಾರೆ.

ಅಂತರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯಮಟ್ಟದ ವಿಚಾರ ಸಂಕೀರಣ, ಕಾರ್ಯಾಗಾರಗಳಲ್ಲಿ ಭಾಗವಹಿಸಿ ಪ್ರಭಂಧವನ್ನು ಮಂಡಿಸಿದ್ದಾರೆ. ಅಹ್ಮದಾಬಾದ್, ಬೆಂಗಳೂರು ಹಾಗೂ ಶಿಮ್ಲಾ ವಿಶ್ವ ವಿದ್ಯಾಲಯ, ಕರ್ನಾಟಕ ವಿಶ್ವವಿದ್ಯಾಲಯ ಆಯೋಜಿಸಿದ್ದ್ ಯು.ಜಿ.ಸಿ ಪುನರ್ ಮನನ ಶಿಬಿರಗಳಲ್ಲಿ ಭಾಗವಹಿಸಿ ತಮ್ಮ ಜ್ಞಾನವನ್ನು ವಿಸ್ತರಿಸಿಕೊಂಡಿದ್ದಾರೆ.

ಪತ್ರಿಕಾ ವರದಿ, ಸಂಗ್ರಹಣೆ ಹಾಗೂ ಪರಿಣಾಮಕಾರಿಯಾಗಿ ಬರೆಯುವ ಶೈಲಿಗಳನ್ನು ಇವರು ರೂಢಿಸಿಕೊಂಡಿದ್ದಾರೆ ಇದರಿಂದಾಗಿ ಇವರ ಬೋಧನಾ ಸಾಮಥ್ರ್ಯಕ್ಕೆ ವಿಶೇಷ ಗುಣವು ಮೈಗೂಡಿದೆ ಹಾವೇರಿ, ರೋಣ, ಸವದತ್ತಿ, ಯಲಬುರ್ಗಾಗಳಲ್ಲಿ ಪತ್ರಕರ್ತ ಸಂಘಗಳೇರ್ಪಡಿಸಿದ್ದ ಕಾರ್ಯಾಗಾರಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಉಪನ್ಯಾಸ ನೀಡಿ, ಪ್ರಬಂಧ ಮಂಡಿಸಿದ್ದಾರೆ.

ಕನ್ನಡದ ಹಿರಿಯ ಪತ್ರಕರ್ತ ಡಾ. ಪಾಟೀಲ ಪುಟ್ಟಪ್ಪ ಅವರನ್ನು ಕುರಿತು “ಪತ್ರಿಕೋದ್ಯಮಿ ಡಾ. ಪಾಟೀಲ ಪುಟ್ಟಪ್ಪ ಬದುಕು-ಬರಹ ಒಂದು ಅಧ್ಯಯನ” ಎಂಬ ಸಂಶೋಧನ ಮಹಾಪ್ರಬಂಧವನ್ನು ಮಂಡಿಸಿ ಪಿ.ಎಚ್.ಡಿ. ಪದವಿಯನ್ನು ಪಡೆದಿದ್ದಾರೆ

ಉತ್ತರ ಕರ್ನಾಟಕದ ಖಾಸಗಿ ಅನುದಾನಿತ ಪದವಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಅರೆಕಾಲಿಕ ಉಪನ್ಯಾಸಕರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದರು. ತಮ್ಮ ಗೆಳೆಯರೊಂದಿಗೆ ಸೇರಿ ಅರೆಕಾಲಿಕ ಉಪನ್ಯಾಸಕರನ್ನು ಸಂಘಟಿಸಿ, ಸಂಘ, ಸ್ಥಾಪಿಸಿ ಹೋರಾಟಕ್ಕೆ ಅಡಿಪಾಯ ಹಾಕಿಕೊಟ್ಟು ತೆರೆಮರೆಯಲ್ಲಿ ಇದ್ದುಕೊಂಡು ಅದರ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯ ಖಾಸಗಿ ಅನುದಾನಿತ ಕಾಲೇಜುಗಳನ್ನು ವೇತಾನುದಾನ ವ್ಯಾಪ್ತಿಗೆ ಒಳಪಡಿಸಲು ನಡೆದ ಹೋರಾಟದಲ್ಲಿ ಸಕ್ರಿಯವಾಗಿ ತಮ್ಮನ್ನು ತೋಡಗಿಸಿಕೊಂಡಿದ್ದಾರೆ. ವೇತಾನುದಾನಕ್ಕೊಳಪಟ್ಟ 10 ಖಾಸಗಿ ಅನುದಾನಿತ (ಯೋಜನೆ) ಮಹಾವಿದ್ಯಾಲಯಗಳ ಸಿಬ್ಬಂದಿಗೆ ಸಂಬಳ ಬಿಡುಗಡೆಗಾಗಿ ಸಹಯೋಗದೊಂದಿಗೆ ಹೋರಾಟ ನಡೆಸಿ ವೇತನ ಬಿಡುಗಡೆ ಮಾಡಿಸುವಲ್ಲಿ ಶ್ರಮಿಸಿದ್ದಾರೆ

ಖಾಸಗಿ ಅನುದಾನಿತ ಪದವಿ(ಯೋಜನೆ) ಕಾಲೇಜುಗಳ ಶಿಕ್ಷಕ-ಶಿಕ್ಷಕೇತರ ಸಂಘದ ಸಂಚಾಲಕರಾಗಿ ಕ.ವಿ.ಕಾ.ಶಿಯ ಪತ್ರಿಕಾ ಕಾರ್ಯದರ್ಶಿಯಾಗಿ, ಉಪಾದ್ಯಕ್ಷರಾಗಿ, ಕರ್ನಾಟಕ ರಾಜ್ಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಶಿಕ್ಷಕರ ಸಂಘದ ಜಂಟಿಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ ಅಖಿಲ ಭಾರತ ವಿಶ್ವವಿದ್ಯಾಯ ಹಾಗೂ ಕಾಲೇಜು ಶಿಕ್ಷಕರ ಪೆಡೇರೇಶನ ಅಜೀವ ಸದಸ್ಯರು.

2013ರಲ್ಲಿ ಕ.ವಿ.ವಿ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹ-ಪ್ರಾಧ್ಯಾಪಕ ಹುದ್ದೇಗೆ ಆಯ್ಕೆಗೊಂಡ ಇವರನ್ನು ಅಂಜುಮನ್ ಆಡಳಿತ ಮಂಡಳಿ ಬಿಡುಗಡೆ ಮಾಡಲು ನಿರಾಕರಿಸಿದಾಗ ತಮ್ಮ ಮೂಲಭೂತ ಹಕ್ಕಿಗಾದ ಧಕ್ಕೆಯನ್ನು ಧಾರವಾಡ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿ, ನ್ಯಾಯಾಲಯ ಆದೇಶ ವಿಳಂಬವಾಗುವ ಹಿನ್ನಲೆಯಲ್ಲಿ ಕ.ವಿ.ವಿ. ಸೇವೆಗೆ ಹಾಜರಾಗಿದ್ದು ಒಂದು ದೊಡ್ಡ ಸಾಹಸಗಾಥೆಯೇ. ಮಾರ್ಚ 29, 2014 ರಂದು ಕ.ವಿ.ವಿಗೆ ಹಾಜರಾದ ನಾಗರಾಜ, ಸೇವೆಗೆ ಸೇರಿದ ವರ್ಷವೇ ವಿದ್ಯಾರ್ಥಿಗಳ ಪ್ರೀತಿ ಆದರಗಳಿಗೆ ಪಾತ್ರರಾದರು. ಇವರ ದಕ್ಷತೆ, ಪ್ರಮಾಣಿಕ ಕರ್ತವ್ಯ ಗಮನಿಸಿ ವಿ.ವಿ ಆಡಳಿತ ಮಂಡಳಿ ಹಾವೇರಿಯ ಕ.ವಿ.ವಿ. ಸ್ನಾತಕೋತ್ತರ ಕೇಂದ್ರದ ಆಡಳಿತಾಧಿಕಾರಿಯಾಗಿ ನೇಮಿಸಿತು.

ತೀವ್ರ ಸಮಸ್ಯೆಗಳು, ಅದ್ವಾನಗೊಂಡಿದ್ದ ಆಡಳಿತ ವ್ಯವಸ್ಥೆಯನ್ನು ತಮ್ಮ ದಿಟ್ಟ ನಿಲುವು ಹಾಗೂ ಪ್ರಾಮಾಣಿಕತೆ, ದಕ್ಷತೆಯಿಂದ ನಿರ್ವಹಿಸಿ ಅಂಟಿದ್ದ ಕಳಂಕವನ್ನು ದೂರ ಮಾಡುವಲ್ಲಿ ಅವಿರತ ಶ್ರಮಿಸಿ, ಅದರ ಘನತೆಯನ್ನು ಹೆಚ್ಚಿಸುವಲ್ಲಿ ಪ್ರಯತ್ನಿಸಿದರು. ತಮ್ಮ ಜಿಲ್ಲೆಯ ಪಿ.ಜಿ. ಕೇಂದ್ರವನ್ನು ಸರ್ವತೋಮುಖ ಅಭಿವೃದ್ಧಿ ಮಾಡಬೇಕೆಂಬ ಕನಸು ಕಂಡರು. ಆದರೆ ಅದು ಆಗದ್ದೂ ಬೇರೆಯೇ ದಿಟ್ಟು ಹಾಗೂ ನೇರ ನೂಡಿ, ಪ್ರಾಮಾಣಿಕತೆ ಹಾಗೂ ದಕ್ಷತೆ ಇವರ ಆಡಳಿತ ವೈಖರಿಗೆ ಮುಳುವಾಯಿತು. ವಿಷವೃತ್ತದಲ್ಲಿ ಸಿಲುಕಿಸುವ ಪ್ರಯತ್ನ ನಡೆದವು. ಒಂದೆಡೆ ಅನಾರೋಗ್ಯ, ಇನ್ನೊಂದೆಡೆ ವಿಷವರ್ತುಲ, ಆಡಳಿತಾಗಾರರ, ಅಸಹಕಾರಕ್ಕೆ ಬೇಸತ್ತು ಆಡಳಿತಗಾರ ಹುದ್ದೆಗೆ ರಾಜೀನಾಮೆ ಸಲ್ಲಿಸಿ ಕ.ವಿ.ವಿ ಗೆ ವರ್ಗಾವಣೆ ಕೋರಿದರು. ಆದರೆ ವರ್ಗಾವಣೆ ಆಗಲಿಲ್ಲ. ಹೋರಾಟದ ನಂತರ ಮತ್ತೇ ಕ.ವಿ.ವಿ ವಿಭಾಗಕ್ಕೆ ವರ್ಗಾವಣೆ ನಡೆಯಿತು.

ದಕ್ಷ ಹಾಗೂ ಪ್ರಮಾಣಿಕತೆಯಿಂದ ರಜಾ ಅವಧಿಯನ್ನು ಲೆಕ್ಕಿಸದೆ ಪಿ.ಜಿ. ಕೇಂದ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲು ಪ್ರಯತ್ನಿಸಿದ ವ್ಯಕ್ತಿಗೆ ದೊರೆತಿದ್ದಾದರು ಏನು ಗೊತ್ತೆ?

ಬೋದಕನ ಹುದ್ದೆಯ ಜೊತೆ ಆಡಳಿತಗಾರ ಹುದ್ದೆ ನಿರ್ವಹಿಸಿದ್ದಾರೆ. ವಿಶ್ವವಿದ್ಯಾಲಯ ನೀಡಿದ ಗೌರವಧನ ತಿಂಗಳಿಗೆ 400ರೂ. ರಜಾ ಅವಧಿಯಲ್ಲಿ ಕಾರ್ಯನಿರ್ವಹಿಸಿದರೆ ಸಿಗಬೇಕಾದ ಸೌಲಭ್ಯವು ಇಲ್ಲ. ಭೋದಕರಿಗೆ ಇರುವ ರಜಾ ಅವಧಿಯ ಸೌಲಭ್ಯದಲ್ಲಿ ಆಡಳಿತಗಾರ ಕೆಲಸ ನಿರ್ವಹಿಸಿದಕ್ಕೆ ಯಾವ ಸೌಲತ್ತು ಇಲ್ಲ. ನ್ಯಾಯಯುತವಾಗಿ ಭೋದಕರಿಗೆ ಸಿಗಬೇಕಾದ ರಜೆ ಸೌಲಭ್ಯವು ನೀಡದೆ 50 ದಿನ ಗೈರು ಹಾಜರೆಂದು ಪರಿಗಣಿಸಿ 50 ದಿನದ ಸಂಬಳ ಕಡಿತ ಮಾಡಲಾಗಿದೆ. ಪರೀಕ್ಷಾರ್ಥ ಸೇವೆ ಮುಂದೂಡಿಕೆ ಪದವಿ ಕಾಲೇಜಿನ ಸೇವೆಯಲ್ಲಿದ್ದರೂ ವಿಶ್ವವಿದ್ಯಾಲಯ ಹುದ್ದೇಗೆ ನೇಮಕಗೊಂಡಾಗ, ಪದವಿ ಕಾಲೇಜಿನ ಸೇವೆಯನ್ನು ಮುಂದುವರೆಸಿ, ವೇತನ ನಿಗದಿ ಮಾಡುವ ಅವಕಾಶ ನಿಯಮಗಳಲ್ಲಿದ್ದು ಈ ನಿಯಮದನ್ವಯ ವಿಶ್ವವಿದ್ಯಾಲಯಕ್ಕೆ ನೇಮಕಗೊಂಡ ಎಲ್ಲ ಬೋಧಕರಿಗೆ ಸೌಲಭ್ಯ ನೀಡಿದ್ದು, ನಾಗರಾಜ ಹಳ್ಳಿಯವರಿಗೆ ಈ ಸೌಲಭ್ಯ ನೀಡದೆ ವಂಚಿತರನ್ನಾಗಿಸಲಾಗಿದೆ.

ಈ ಎಲ್ಲ ಮಾನಸಿಕ ಹಿಂಸೆಯ ನಡುವೆಯೂ ತಮ್ಮ ಪಾಲಿನ ಶಿಕ್ಷಕ ವೃತ್ತಿಗೆ ಚೂತಿಬಾರದಂತೆ, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಪ್ರದ್ಯಾಪಕ ಹುದ್ದೆಗೆ ಎಲ್ಲ ಅರ್ಹತೆಯನ್ನೂ ಹೊಂದಿದ್ದರು, ವಿಳಂಬ ಧೋರಣೆ ಅನುಸರಿಸಿ, ಪ್ರಾಧ್ಯಾಪಕ ಹುದ್ದೆಯ ಬಡ್ತಿ, ಮುಖ್ಯಸ್ಥರ ಹುದೆಯಿಂದ ವಂಚಿಸಲಾಗಿದೆ.

ಇವರ ಮಾರ್ಗದರ್ಶನದಲ್ಲಿ ಒಟ್ಟು ಎಂಟು ಜನ ವಿದ್ಯಾರ್ಥಿಗಳು ಸಂಶೋಧನ ಕೈಗೊಂಡಿದ್ದು ಒಬ್ಬರು ಈಗಾಗಲೇ ಮಹಾಪ್ರಬಂಧವನ್ನು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ್ದಾರೆ. ಫಲಿತಾಂಶ ಬರಬೇಕಿದೆ. ಪದವಿ ಕಾಲೇಜಿನ ಸೇವೆಯಲ್ಲಿಯೇ ಮುಂದುವರೆದಿದ್ದರೆ ಇದೇ ಜುಲೈ 2020ಕ್ಕೆ ನಿವೃತ್ತಿಯಾಗಿನೆಮ್ಮದಿಯ ಜೀವನ ಇವರದಾಗುತ್ತಿತ್ತು. ವಿಶ್ವವಿದ್ಯಾಲಯ ಸೇವೆ ಇನ್ನು ಎರಡು ವರ್ಷವಿದ್ದು ಎಲ್ಲ ಅವಕಾಶಗಳೀಂದ ವಂಚಿತರಾಗಿ, ಸಂಶೋಧನಾ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿಯಾದರು ಸೇವೆಸಲ್ಲಿಸುವ ಅನಿವಾರ್ಯತೆ ನಾಗರಾಜ ಅವರದ್ದಾಗಿದೇ. ಇದು ಅತ್ಯಂತ ದುರದೃಷ್ಟಕರ.