ಹಾವೇರಿ: ಮತ್ತೆ 9 ಕೋವಿಡ್ ಸೋಂಕು ದೃಢ, 19 ಜನರು ಗುಣಮುಖ ಆಸ್ಪತ್ರೆಯಿಂದ ಬಿಡುಗಡೆ

Share

ಹಾವೇರಿ: ಜಿಲ್ಲೆಯಲ್ಲಿ ಸೋಮವಾರ 9 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, 19 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ತಿಳಿಸಿದ್ದಾರೆ.

ಈವರೆಗೆ ಜಿಲ್ಲೆಯಲ್ಲಿ 175 ಪಾಸಿಟಿವ್ ಪ್ರಕರಣ ದೃಢಪಟ್ಟಿವೆ. 56 ಜನರು ಸೋಂಕಿನಿಂದ ಗುಣಮುಖರಾದ ಕಾರಣ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. 117ಪ್ರಕರಣಗಳು ಸಕ್ರಿಯವಾಗಿವೆ ಎಂದು ಅವರು ತಿಳಿಸಿದ್ದಾರೆ.

ಶಿಗ್ಗಾಂವ ತಾಲೂಕಿನಲ್ಲಿ 6, ಹಾವೇರಿ, ಹಾನಗಲ್ ಹಾಗೂ ಹಿರೇಕೆರೂರು ತಾಲೂಕಿನಲ್ಲಿ ತಲಾ 1 ಪ್ರಕರಣ ಸೇರಿ 9 ಪ್ರಕರಣಗಳು ಸೋಮವಾರ ದೃಢಗೊಂಡಿವೆ.

ಶಿಗ್ಗಾಂವಿಯ ಹಳೆಪೇಟೆಯ 37 ವರ್ಷದ ಮಹಿಳೆ (P-167), 70 ವರ್ಷದ ಪುರುಷ (P-168), 60 ವರ್ಷದ ಮಹಿಳೆ(P-169), ಮೌಲಾಲಿ ಗುಡ್ಡದ 48 ವರ್ಷದ ಪುರುಷ (P-170) ಹಾಗೂ ಮೆಬೂಬ ನಗರದ 45 ವರ್ಷದ ಪುರುಷ (P-171), ಅಂದಲಗಿ ಗ್ರಾಮದ ಕೆಲಗೇರಿ ಓಣಿಯ 39 ವರ್ಷದ ಪುರುಷ P-172), ಹಾವೇರಿಯ ಶಿವಲಿಂಗನಗರದ 38 ವರ್ಷದ ಪುರುಷ (P-173), ಹಾನಗಲ್ ತಾಲೂಕು ಅಕ್ಕಿ ಆಲೂರು ಕೆಳಗಿನ ಓಣಿಯ 30 ವರ್ಷದ ಮಹಿಳೆ (P-174), ಹಿರೇಕೆರೂರು ತಾಲೂಕಿನ ರಾಮತೀರ್ಥದ 65 ವರ್ಷದ ಮಹಿಳೆ (P-175) ಕೋವಿಡ್ ಸೋಂಕು ದೃಢಗೊಂಡಿದ್ದು, ಸೋಂಕಿತರನ್ನು ಹೆಚ್ಚಿನ ಚಿಕಿತ್ಸೆಗಾಗಿ ನಿಗದಿತ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರವಾಸ ಹಿನ್ನೆಲೆ: 37 ವರ್ಷ ಮಹಿಳೆ, 70 ವರ್ಷದ ಪುರುಷ ಹಾಗೂ 60 ವರ್ಷದ ಮಹಿಳೆ ಶಿಗ್ಗಾಂವ ನಗರದ ಹಳೆಪೇಟೆ ಕಂಟೈನ್‍ಮೆಂಟ್ ವಲಯದ ನಿವಾಸಿಗಳಾಗಿದ್ದು, ಈ ಕಾರಣಕ್ಕಾಗಿ ಜುಲೈ 2 ರಂದು ಸ್ವಾಬ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಜುಲೈ 5 ರಂದು ರಾತ್ರಿ ಪಾಸಿಟಿವ್ ದೃಢಗೊಂಡಿದ್ದು, ಸೋಂಕಿತರನ್ನು ನಿಗಧಿತ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶಿಗ್ಗಾಂವಿಯ ಮೌಲಾನಾ ಗುಡ್ಡದ ಕಂಟೈನ್‍ಮೆಂಟ್ ಜೋನ್ ನಿವಾಸಿ 48 ವರ್ಷದ ಪುರುಷ ಹಾಗೂ ಮೆಹಬೂಬನಗರದ ಕಂಟೈನ್‍ಮೆಂಟ್ ವಲಯದ ನಿವಾಸಿ 45 ವರ್ಷದ ಪುರುಷ P-10598ರ ಪ್ರಾಥಮಿಕ ಸಂಪರ್ಕ ಹೊಂದಿದ ಕಾರಣ ಜುಲೈ 2 ರಂದು ಸ್ವಾಬ್ ತೆಗೆದು ಲ್ಯಾಬ್ ಕಳುಹಿಸಲಾಗಿದ್ದು, ಜುಲೈ 5 ರಂದು ಇಬ್ಬರಿಗೂ ಪಾಸಿಟಿವ್ ದೃಢಪಟ್ಟಿದೆ. ನಿಗಧಿತ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಗುತ್ತಿದೆ.

ಶಿಗ್ಗಾಂವ ತಾಲೂಕು ಅಂದಲಗಿ ಗ್ರಾಮದ ಕೆಲಗೇರಿ ಓಣಿಯ 39 ವರ್ಷದ ಪುರುಷ ತನ್ನ ಹೆಂಡತಿ ಮಕ್ಕಳೊಂದಿಗೆ ವಾಸವಾಗಿದ್ದು, ಜುಲೈ 2 ರಂದು ಸ್ವಾಬ್ ಮಾದರಿ ಕಳುಹಿಸಲಾಗಿದ್ದು, ಜುಲೈ 5 ರಂದು ಈತನಿಗೆ ಪಾಸಿಟಿವ್ ಇರುವ ವರದಿ ಬಂದಿದ್ದು, ನಿಗಧಿತ ಆಸ್ಪತ್ರೆಗೆ ದಾಖಲಿಸಲಾಗಿದೆ. ಈತನ ಸಂಪರ್ಕ ಪತ್ತೆ ಕಾರ್ಯ ಪ್ರಗತಿಯಲ್ಲಿದೆ.

ಸೋಂಕಿತ 30 ವರ್ಷದ ಮಹಿಳೆ ಹಾನಗಲ್ ತಾಲೂಕು ಅಕ್ಕಿ ಆಲೂರಿನ ಕೆಳಗಿನ ಓಣಿಯಲ್ಲಿ ಗಂಡ ಮಕ್ಕಳೊಂದಿಗೆ ವಾಸವಾಗಿದ್ದು P-16599ರ ಪ್ರಾಥಮಿಕ ಸಂಪರ್ಕ ಹೊಂದಿದ ಕಾರಣ ಜುಲೈ 3 ರಂದು ಸ್ವಾಬ್ ಸಂಗ್ರಹಿಸಿ ಲ್ಯಾಬ್‍ಗೆ ಕಳುಹಿಸಲಾಗಿತ್ತು. ಜುಲೈ 5ರ ವರದಿಯಲ್ಲಿ ಪಾಸಿಟಿವ್ ಬಂದ ಕಾರಣ ನಿಗಧಿತ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಂಕಿತರ ಸಂಪರ್ಕದಲ್ಲಿದ್ದ ಐದು ಜನ ಪ್ರಾಥಮಿಕ ಹಾಗೂ 13 ಜನ ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಲಾಗಿದೆ. ಇವರನ್ನು ಗೃಹಪ್ರತ್ಯೇಕತೆಯಲ್ಲಿ ಇರಿಸಿ ನಿಗಾವಹಿಸಲಾಗಿದೆ.

65 ವರ್ಷದ ಪುರುಷ ಹಿರೇಕೆರೂರು ತಾಲೂಕಿನ ರಾಮತೀರ್ಥದಲ್ಲಿ ಹೆಂಡತಿ ಮಕ್ಕಳೊಂದಿಗೆ ವಾಸವಾಗಿದ್ದು, P-9546ರ ಪ್ರಾಥಮಿಕ ಸಂಪರ್ಕ ಹೊಂದಿದ ಕಾರಣ ಕೆಮ್ಮು ಮತ್ತು ಶೀತದಿಂದ ಬಳಲುತ್ತಿದ್ದು, ಜಿಲ್ಲಾ ಆಸ್ಪತ್ರೆಗೆ ದಾಖಲಾಗಿತ್ತು. ಜುಲೈ 4 ರಂದು ಸ್ವಾಬ್ ಸಂಗ್ರಹಿಸಿ ಲ್ಯಾಬ್‍ಗೆ ಕಳುಹಿಸಲಾಗಿತ್ತು. ಜುಲೈ 5ರ ವರದಿಯಲ್ಲಿ ಪಾಸಿಟಿವ್ ದೃಢಪಟ್ಟಿದೆ. ನಿಗಧಿತ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಾವೇರಿ ಶಿವಲಿಂಗನಗರದಲ್ಲಿ ಹೆಂಡತಿ ಮಕ್ಕಳೊಂದಿಗೆ ವಾಸವಾಗಿರುವ 38 ವರ್ಷದ ಪುರುಷ ಜ್ವರ ಮತ್ತು ಕೆಮ್ಮಿನ ಕಾರಣ ಜುಲೈ 2 ರಂದು ಹಾವೇರಿ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದಾಗ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಜುಲೈ 5 ರಂದು ಕೋವಿಡ್ ಸೋಂಕು ಪಾಸಿಟಿವ್ ವರದಿ ಬಂದ ಹಿನ್ನೆಲೆಯಲ್ಲಿ ನಿಗಧಿತ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದರಿ ಸೋಂಕಿತರ ನಿವಾಸದ 100 ಮೀ.ಪ್ರದೇಶವನ್ನು ಕಂಟೈನ್‍ಮೆಂಟ್ ಜೋನ್ ಆಗಿ ಪರಿವರ್ತಿಸಲಾಗಿದೆ.

ನಗರದ ಪ್ರದೇಶದಲ್ಲಿ ವಾಸಿಸುವ ಸೋಂಕಿತರ ನಿವಾಸದ 200 ಮೀಟರ್ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶವಾದ ಅಂದಲಗಿ ಹಾಗೂ ರಾಮತೀರ್ಥ ಗ್ರಾಮಗಳನ್ನು ಸಂಪೂರ್ಣವಾಗಿ ಬಫರ್ ಜೋನ್ ಆಗಿ ಪರಿಗಣಿಸಲಾಗಿದೆ. ಇನ್ಸಿಡೆಂಟಲ್ ಕಮಾಂಡರ್ ಆಗಿ ಆಯಾ ತಾಲೂಕಾ ತಹಶೀಲ್ದಾರ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ಪತ್ತೆ: ರಟ್ಟಿಹಳ್ಳಿ ತಾಲ್ಲೂಕಿನ ಪರ್ವತಸಿದ್ಧಗೇರಿಯ ವ್ಯಕ್ತಿಗೆ (P-23228 (Hvr-165)) ಭಾನುವಾರ ಸೋಂಕು ದೃಢಪಟ್ಟಿದ್ದು, ಆಸ್ಪತ್ರೆಗೆ ದಾಖಲಿಸಲು ಮನೆಗೆ ಹೋದಾಗ ಈತನು ಮನೆಯಲ್ಲಿ ಇರಲಿಲ್ಲ. ಸೋಮವಾರ ಪೊಲೀಸರು ಬಂಧಿಸಿದ್ದು, ಹಿರೇಕೆರೂರಿನ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

19 ಸೋಂಕಿತರು ಗುಣಮುಖ: ಶಿಗ್ಗಾಂವ ಗೌಡರ ಓಣಿ ನಿವಾಸಿ 85 ವರ್ಷದ ಮಹಿಳೆ (P-8296), ಶಿಗ್ಗಾಂವಿಯ ಮೆಹಬೂಬ ನಗರದ 40 ವರ್ಷದ ಮಹಿಳೆ (P-10598), ಸವಣೂರು ಖಾದರ ಬಾಗ್‍ನ ಒಂಭತ್ತು ತಿಂಗಳ ಮಗು (P-11210), 27 ವರ್ಷದ ಪುರುಷ (P-12114), ಶಿಗ್ಗಾಂವಿಯ ಕಂಟೈನ್‍ಮೆಂಟ್ ಜೋನ್ ನಿವಾಸಿ 71 ವರ್ಷದ ವೃದ್ಧ (P-14595), ಹಾನಗಲ್ ತಾಲೂಕು ತಿಳವಳ್ಳಿ ಗ್ರಾಮದ 27 ವರ್ಷದ ಪುರುಷ (P-14602), ಹಾನಗಲ್‍ನ 37 ವರ್ಷದ ಆಶಾ ಕಾರ್ಯಕರ್ತೆ (P-14603), ಹಾವೇರಿ ತಾಲೂಕು ಗುತ್ತಲದ 43 ವರ್ಷದ ಪುರುಷ (P-14605), ಯಮ್ಮಿಗನೂರಿನ 45 ವರ್ಷದ ಆಶಾ ಕಾರ್ಯಕರ್ತೆ (P-14607), ಕೋಡದ 49 ವರ್ಷದ ಆಶಾ ಕಾರ್ಯಕರ್ತೆ (P-14610), ಸುತ್ತಕೋಟಿಯ 42 ವರ್ಷದ ಆಶಾ ಕಾರ್ಯಕರ್ತೆ (P-14,608), ನೂಲಗೇರಿಯ 41 ವರ್ಷದ ಮಹಿಳೆ (P-14609), ಹಿರೇಕೆರೂರು ತಾಲೂಕು ರಾಮತೀರ್ಥದ 27 ವರ್ಷದ ಪುರುಷ (P-14611), ಗುಡ್ಡದ ಮಾದಾಪೂರದ 40 ವರ್ಷದ ಆಶಾ ಕಾರ್ಯಕರ್ತೆ (P- 14618), ಮಾಸೂರಿನ 34 ವರ್ಷದ ಮಹಿಳೆ (P-14620), ಶಿಗ್ಗಾಂವ ದೇಸಾಯಿಗಲ್ಲಿ ಆರು ವರ್ಷದ ಮಗು (P-14587), 28 ವರ್ಷದ ಮಹಿಳೆ (P-14588), 65 ವರ್ಷದ ಮಹಿಳೆ (P-14589) ಹಾಗೂ ಹಾನಗಲ್ ತಾಲೂಕು ಕಂಚಿನೆಗಳೂರಿನ 24 ವರ್ಷದ ಪುರುಷ( P-14628) ಗುಣಮುಖರಾದ ಕಾರಣ ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.