ಹಾವೇರಿ: ಓರ್ವ ಖಾಸಗಿ ವೈದ್ಯ ಸೇರಿದಂತೆ 15 ಜನರಿಗೆ ಕೋವಿಡ್ ಸೋಂಕು ದೃಢ

Share

ಹಾವೇರಿ: ಮೂವರು ಆಶಾ ಕಾರ್ಯಕರ್ತೆಯರು ಹಾಗೂ ಓರ್ವ ಖಾಸಗಿ ವೈದ್ಯ ಸೇರಿದಂತೆ ಒಟ್ಟು 15 ಜನರಿಗೆ ಭಾನುವಾರ ಕೋವಿಡ್ ಸೋಂಕು ದೃಢ ಪಟ್ಟಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌. ಯೋಗೇಶ್ವರ ತಿಳಿಸಿದ್ದಾರೆ.

ಈವರೆಗೆ ಜಿಲ್ಲೆಯಲ್ಲಿ 166 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, 37 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ‌. 127 ಸಕ್ರಿಯ ಪ್ರಕರಣಗಳಿವೆ‌. 2 ಮರಣ ಹೊಂದಿದ್ದಾರೆ.

ಇಂದು ಪತ್ತೆಯಾದ ಪ್ರಕರಣಗಳ ಪೈಕಿ ಹಾವೇರಿ ತಾಲ್ಲೂಕು 5, ಹಾನಗಲ್ 5, ಶಿಗ್ಗಾಂವಿ 3 ಹಾಗೂ ರಟ್ಟಿಹಳ್ಳಿ ತಾಲ್ಲೂಕಿನಲ್ಲಿ 2 ಪ್ರಕರಣಗಳು ಪತ್ತೆಯಾಗಿವೆ.