ಹಾವೇರಿ: ಮತ್ತೆ 28 ಕೋವಿಡ್ ಸೋಂಕು ದೃಢ, ಇಬ್ಬರು ಗುಣಮುಖ

Share

ಹಾವೇರಿ: ಜಿಲ್ಲೆಯಲ್ಲಿ ಶನಿವಾರ 28 ಕೋವಿಡ್ ಸೋಂಕು ದೃಢಪಟ್ಟಿದೆ. ಇಬ್ಬರು ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ತಿಳಿಸಿದ್ದಾರೆ.

ಈವರೆಗೆ ಜಿಲ್ಲೆಯಲ್ಲಿ 151 ಪಾಸಿಟಿವ್ ಪ್ರಕರಣ ದೃಢಗೊಂಡಿವೆ. ಈ ಪೈಕಿ 37 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಎರಡು ಜನರು ಮೃತಪಟ್ಟಿದ್ದು, 112 ಪ್ರಕರಣಗಳು ಸಕ್ರಿಯವಾಗಿವೆ ಎಂದು ಅವರು ತಿಳಿಸಿದ್ದಾರೆ.

ಇಂದು ಓರ್ವ ಪೊಲೀಸ್, ಇಬ್ಬರು ಆಶಾ ಕಾರ್ಯಕರ್ತೆಯರು, ಮೂರು ಜನ ಆರೋಗ್ಯ ಇಲಾಖೆ ಸಿಬ್ಬಂದಿ, ಓರ್ವ ಬ್ಯೂಟಿಷಿಯನ್ ಹಾಗೂ ಶಿಗ್ಗಾಂವಿಯ ಪಿಗ್ಮಿ ಏಜೆಂಟ್ P-9412ರ ಪ್ರಾಥಮಿಕ ಸಂಪರ್ಕದಿಂದ ಐದು ಜನರಿಗೆ ಹಾಗೂ ಉಳಿದಂತೆ 15 ಜನರಿಗೆ ಸೋಂಕು ದೃಢಪಟ್ಟಿದೆ.

ಹಾನಗಲ್ ತಾಲೂಕಿನ ಶಿವಪುರದ ಆರೋಗ್ಯ ಇಲಾಖೆ ಸಿಬ್ಬಂದಿ 24 ವರ್ಷದ ಯುವಕ (P-124), ಹಾನಗಲ್‍ನ 22 ವರ್ಷದ ಯುವಕ (P-125), ಕಲ್ಕಹಕ್ಕಲನ ಆರೋಗ್ಯ ಇಲಾಖೆ ಸಿಬ್ಬಂದಿ 31 ವರ್ಷದ ಮಹಿಳೆ( P-126), 41 ವರ್ಷದ ಆಶಾ ಕಾರ್ಯಕರ್ತೆ( P-127), ರಾಣೇಬೆನ್ನೂರ ತಾಲೂಕಿನ 66 ವರ್ಷದ ವೃದ್ಧೆ(P-128) ಹಾಗೂ 28 ವರ್ಷದ ಮಹಿಳೆ(P-129), ಶಿಗ್ಗಾಂವ ತಾಲೂಕಿನ 45 ವರ್ಷದ ಆಶಾ ಕಾರ್ಯಕರ್ತೆ (P-130), 34 ವರ್ಷದ ಯುವಕ (P-131) P-9412 ಸಂಪರ್ಕಿತ, 21 ವರ್ಷದ ಯುವಕ(P-132) (P-9412 ಪ್ರಾಥಮಿಕ ಸಂಪರ್ಕ), 56 ವರ್ಷದ ಪುರುಷ (P-133), 64 ವರ್ಷದ ವೃದ್ಧ(P-134), 27 ವರ್ಷದ ಯುವಕ (P-135), 42 ವರ್ಷದ ಪುರುಷ (P-136) P-9412 ಸಂಪರ್ಕಿತ, 25 ವರ್ಷದ ಯುವತಿ(P-137) P-9412 ಸಂಪರ್ಕಿತ, 4 ವರ್ಷದ ಗಂಡು ಮಗು (P-138) P-9412 ಸಂಪರ್ಕಿತ, ಹಾನಗಲ್ ತಾಲೂಕು 60 ವರ್ಷದ ವೃದ್ಧೆ (P-139), 29 ವರ್ಷದ ಬ್ಯೂಟಿ ಟೆಕ್ನಿಷಿಯನ್ ಮಹಿಳೆ(P-140), ಹಾವೇರಿ ನಾಗೇಂದ್ರನಮಟ್ಟಿಯ 24 ವರ್ಷದ ಯುವತಿ (P-141) ಹಾಗೂ ಪೊಲೀಸ್ ಇಲಾಖೆಯ 50 ವರ್ಷದ ಪುರುಷ (P-142), ಹಾನಗಲ್ ತಾಲೂಕಿನ 60 ವರ್ಷದ ಮಹಿಳೆ (P-143), 56 ವರ್ಷದ ಮಹಿಳೆ(P-144), ರಾಣೇಬೆನ್ನೂರ ತಾಲೂಕು 46 ವರ್ಷದ ಪುರುಷ (P-145), ಹಾನಗಲ್ ತಾಲೂಕು 27 ವರ್ಷದ ಯುವತಿ(P-146), ಶಿಗ್ಗಾಂವ ತಾಲೂಕು 43 ವರ್ಷದ ಪುರುಷ (P-147), ಹಾನಗಲ್ ತಾಲೂಕಿನ 38 ವರ್ಷದ ಮಹಿಳೆ(P-148), ಆರೋಗ್ಯ ಇಲಾಖೆಯ ಸಿಬ್ಬಂದಿ 20 ವರ್ಷದ ಯುವಕ (P-149), ರಾಣೇಬೆನ್ನೂರ ತಾಲೂಕಿನ 29 ವರ್ಷದ ಮಹಿಳೆ(P-150) ಹಾಗೂ ಹಿರೇಕೆರೂರು ತಾಲೂಕಿನ 35 ವರ್ಷದ ಮಹಿಳೆ (P-151) ಸೋಂಕು ದೃಢಗೊಂಡಿದೆ.

ಹಾನಗಲ್‍ನ ಶಿವಪುರದ 38 ವರ್ಷದ ಗೃಹಿಣಿ ತನ್ನ ಮಗನೊಂದಿಗೆ ಜುಲೈ 1 ರಂದು ಜ್ವರ ಸಂಬಂಧವಾಗಿ ಹಾನಗಲ್ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದಾಗ ತಾಯಿ-ಮಗನ ಸ್ವಾಬ್ ತೆಗೆಸಿಕೊಂಡಿರುತ್ತಾರೆ. ಜುಲೈ 3 ರಂದು ಕೋವಿಡ್ ಪಾಸಿಟಿವ್ ಬಂದಿರುತ್ತದೆ. ನಿಗಧಿತ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಉಳಿದಂತೆ ಸದರಿ ಸೋಂಕಿತರ ನಿವಾಸದ 100 ಮೀ.ಪ್ರದೇಶವನ್ನು ಕಂಟೈನ್‍ಮೆಂಟ್ ಜೋನ್ ಆಗಿ ಪರಿವರ್ತಿಸಲಾಗಿದೆ ಹಾಗೂ 200 ಪ್ರದೇಶ ಬಫರ್ ಜೋನ್ ಆಗಿ ಪರಿಗಣಿಸಲಾಗಿದೆ. ಇನ್ಸಿಡೆಂಟಲ್ ಕಮಾಂಡರ್ ಆಗಿ ಆಯಾ ತಾಲೂಕಾ ತಹಶೀಲ್ದಾರ ಅವರನ್ನು ನೇಮಕ ಮಾಡಲಾಗಿದೆ.

ಇಬ್ಬರು ಗುಣಮುಖ, ಬಿಡುಗಡೆ: ಜೂನ್ 23 ರಂದು ಕೋವಿಡ್ ಸೋಂಕು ದೃಢಪಟ್ಟು ನಿಗದಿತ ಆಸ್ಪತ್ರೆಯಲ್ಲಿ ದಾಖಲಾಗಿ ಗುಣಮುಖರಾದ ಕಾರಣ ಶನಿವಾರ ರಾಣೇಬೆನ್ನೂರ ನಗರದ ಬಟ್ಟೆ ವ್ಯಾಪಾರಿ 38 ವರ್ಷದ ಪುರುಷ (P-9411) ಹಾಗೂ ಶಿಗ್ಗಾಂವಿ ಪಟ್ಟಣದ ಪಿಗ್ಮಿ ಏಜೆಂಟ್ 37 ವರ್ಷದ (P-9412) ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.