ಕೋವಿಡ್19: ಉಪ ತಹಶೀಲ್ದಾರ, ಪೊಲೀಸ್, ಸ್ಟೇನೋ ಸೇರಿದಂತೆ 13 ಜನರಿಗೆ ಸೋಂಕು, ಮಹಿಳೆ ಮರಣ

Share

ಹಾವೇರಿ: ಜಿಲ್ಲೆಯಲ್ಲಿ ಶನಿವಾರ ಉಪತಹಶೀಲ್ದಾರ, ಇಬ್ಬರು ಗರ್ಭಿಣಿಯರು, ಓರ್ವ ಪೊಲೀಸ್, ಓರ್ವ ಸ್ಟೇನೋ ಸೇರಿದಂತೆ 13 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಓರ್ವ ಮಹಿಳೆ ಸೋಂಕಿನಿಂದ ಮೃತಪಟ್ಟಿದ್ದಾಳೆ. 18 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 288 ಕೋವಿಡ್-19 ಪಾಸಿಟಿವ್ ಪ್ರಕರಣ ದೃಢಪಟ್ಟಿದ್ದು, 134 ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. 4 ಜನರು ಮೃತಪಟ್ಟಿದ್ದಾರೆ. 150 ಕೋವಿಡ್ ಪ್ರಕರಣಗಳು ಸಕ್ರಿಯವಾಗಿವೆ. ಇಂದು ದೃಢಪಟ್ಟ ಪ್ರಕರಣಗಳ ಪೈಕಿ ಹಾವೇರಿ ತಾಲೂಕಿನಲ್ಲಿ 4, ಬ್ಯಾಡಗಿ ತಾಲೂಕಿನಲ್ಲಿ 6, ಹಾನಗಲ್ 2 ಹಾಗೂ ಶಿಗ್ಗಾಂವ 1 ಪ್ರಕರಣಗಳು ಪಾಸಿಟಿವ್ ಬಂದಿದೆ.

ಸೋಂಕಿತರ ವಿವರ: ಬ್ಯಾಡಗಿ ತಾಲೂಕಿನ ಮೊಟೇಬೆನ್ನೂರಿನ 35 ವರ್ಷದ ಪುರುಷ (HVR-276), ಕಾಗಿನೆಲೆ ಗ್ರಾಮದವರಾದ 27 ವರ್ಷದ ಮಹಿಳೆ (HVR-279), 37 ವರ್ಷದ ಪುರುಷ (HVR-280), 32 ವರ್ಷದ ಪುರುಷ (HVR-281), ಆರು ವರ್ಷದ ಬಾಲಕಿ (HVR-282), 28 ವರ್ಷದ ಪುರುಷ(HVR-286), ಹಾವೇರಿ ನಗರದ 31 ವರ್ಷದ ಪುರುಷ (HVR-278), 38 ವರ್ಷದ ಪುರುಷ(HVR-284), ಗುತ್ತಲದ 40 ವರ್ಷದ ಪುರುಷ (HVR-285) ಹಾಗೂ ಕನವಳ್ಳಿಯ 45 ವರ್ಷದ ಮಹಿಳೆ(HVR-288), ಹಾನಗಲ್ ತಾಲೂಕು ಅಕ್ಕಿ ಆಲೂರಿನ 21 ವರ್ಷದ ಗರ್ಭಿಣಿ (HVR-277) ಹಾಗೂ ಹಾನಗಲ್ ನಗರದ 30 ವರ್ಷದ ಗರ್ಭಿಣಿ (HVR-283) ಹಾಗೂ ಶಿಗ್ಗಾಂವಿಯ 74 ವರ್ಷದ ಪುರುಷ(HVR-287) ಸೇರಿ 13 ಜನರಿಗೆ ಶನಿವಾರ ಸೋಂಕು ದೃಢಪಟ್ಟಿದೆ.