ರಾಣೇಬೆನ್ನೂರ ತಹಶೀಲ್ದಾರ ಸೇರಿದಂತೆ 36 ಮಂದಿಗೆ ಕೋವಿಡ್ ಸೋಂಕು ದೃಢ

Share

ಹಾವೇರಿ: ಜಿಲ್ಲೆಯಲ್ಲಿ ರಾಣೇಬೆನ್ನೂರ ತಹಶೀಲ್ದಾರ, ಜಿಲ್ಲಾ ಸ್ಟಾಫ್ ನರ್ಸ್, ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕ, ಕೆನರಾ ಬ್ಯಾಂಕ್ ಉದ್ಯೋಗಿ ಸೇರಿದಂತೆ ಸೋಮವಾರ ಒಟ್ಟು 36 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. 55 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಹಾಗೂ ಓರ್ವರು ಮೃತ ಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 495 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಗೊಂಡಿವೆ. 347 ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ ಹಾಗೂ 12 ಜನರು ಮೃತಪಟ್ಟಿದ್ದಾರೆ. 136 ಪ್ರಕರಣಗಳು ಸಕ್ರಿಯವಾಗಿವೆ.

ಸೋಮವಾರ ಪತ್ತೆಯಾದ ಪ್ರಕರಣಗಳಲ್ಲಿ ಸವಣೂರು 5, ಶಿಗ್ಗಾಂವ 13, ರಾಣೇಬೆನ್ನೂರು 3, ಹಾವೇರಿ 6, ಬ್ಯಾಡಗಿ 4 ಹಾಗೂ ಹಾನಗಲ್ ತಾಲೂಕಿನಲ್ಲಿ 5 ಜನರಿಗೆ ಸೋಂಕು ದೃಢಪಟ್ಟಿದೆ. ಗುಣಮುಖರಾಗಿ ಶಿಗ್ಗಾಂವಿ ತಾಲೂಕಿನ 13, ರಾಣೇಬೆನ್ನೂರು 33 ಹಾಗೂ ಹಾವೇರಿ ತಾಲೂಕಿನ 9 ಜನರು ಒಳಗೊಂಡಂತೆ 55 ಜನರು ಬಿಡುಗಡೆಯಾಗಿದ್ದಾರೆ.

ಬ್ಯಾಡಗಿ: ಚಿಕ್ಕಬಾಸೂರಿನ 21 ವರ್ಷದ ಮಹಿಳೆ (ಪಿ-68478), ಹಿರೇಹಳ್ಳಿಯ 26 ವರ್ಷದ ಮಹಿಳೆ(ಪಿ-68556) ಇಬ್ಬರಿಗೂ ನಿಗದಿತ ತಪಾಸಣೆ ನಡೆಸಲಾಗಿತ್ತು. ಬ್ಯಾಡಗಿಯ ಇಸ್ಲಾಂಪುರದ ಐ.ಎಲ್.ಐ. ಲಕ್ಷಣದ 70 ವರ್ಷದ ಮಹಿಳೆ(ಪಿ-68 352), ಜಿಲ್ಲಾ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿರುವ ಮೂಲತಃ ಬ್ಯಾಡಗಿ ತಾಲೂಕು ತಿಪ್ಪಲಾಪುರದ ಪಿ-31656ರ ಪ್ರಾಥಮಿಕ ಸಂಪರ್ಕಿತೆ 30 ವರ್ಷದ ಮಹಿಳೆ(ಪಿ-68408) ಜುಲೈ 14 ರಂದು ಈ ಮೂರು ಮಹಿಳೆಯರ ಸ್ಯಾಂಪಲ್ ಸಂಗ್ರಹಿಸಲಾಗಿತ್ತು. ಜುಲೈ 19ರ ವರದಿಯಲ್ಲಿ ಪಾಸಿಟಿವ್ ಬಂದಿದೆ.

ಹಾನಗಲ್: ಕಂಚಿನೆಗಳೂರಿನ ಐಎಲ್‍ಐ ಲಕ್ಷಣ ಹೊಂದಿದ 38 ವರ್ಷದ ಪುರುಷ ಪಿ-19928ರ ಸೋಂಕಿತನ ಪ್ರಾಥಮಿಕ ಸಂಪರ್ಕ ಹೊಂದಿದ ಹಾನಗಲ್ ಕಲ್ಲಹಕ್ಕಳದ 33 ವರ್ಷದ ಪುರುಷ(ಪಿ-68165), 20 ವರ್ಷದ ಯುವಕ(ಪಿ-68877), 18 ವರ್ಷದ ಯುವಕ (ಪಿ-69254)ರಿಗೆ ಸೋಂಕು ದೃಡಪಟ್ಟಿದೆ ಹಾಗೂ ಕುಮಾರೇಶ್ವರ ನಗರದ ವಾಸಿಯಾದ 28 ವರ್ಷದ ಪುರುಷ (ಪಿ-63495)ಪ್ರಸ್ತುತ ಮುಂಡಗೋಡ ತಾಲೂಕು ಪಾಳಾದ ಕೆನರಾ ಬ್ಯಾಂಕಿ ಉದ್ಯೋಗಿಯಾಗಿರುವ ಈತ ಜುಲೈ 18 ರಂದು ಗಂಟಲು ದ್ರವ ಪರೀಕ್ಷೆ ಮಾಡಿಕೊಂಡು ಹಾನಗಲ್ ನಗರಕ್ಕೆ ಬಂದಿರುತ್ತಾನೆ.

ರಾಣೇಬೆನ್ನೂರ: ಪಿ-19929ರ ಸಂಪರ್ಕಿತ ಪಟ್ಟಣ ಶೆಟ್ಟಿ ಓಣಿಯ 27 ವರ್ಷದ ಮಹಿಳೆ(ಪಿ-69268), ವಿದ್ಯಾನಗರದ ಕಂಟೈನಮೆಂಟ್ ಜೋನ್ ಸಂಪರ್ಕದ ರಾಣೇಬೆನ್ನೂರ ತಹಶೀಲ್ದಾರಾಗಿ ಕರ್ತವ್ಯ ನಿರ್ವಹಿಸುತ್ತಿರುವ 33 ವರ್ಷದ ಪುರುಷ(ಪಿ-69159) ಹಾಗೂ ಬೀರೇಶ್ವರ ನಗರದ 62 ವರ್ಷದ ಪುರುಷ(ಪಿ-59916) ನಿಗೆ ಸೋಂಕು ದೃಢಪಟ್ಟಿದೆ.

ಹಾವೇರಿ: ದಾನೇಶ್ವರಿ ನಗರದ ಸಾರಿ ಲಕ್ಷಣ ಹೊಂದಿದ 70 ವರ್ಷದ ಪುರುಷ(ಪಿ-69400), ಶಿವಾಜಿ ನಗರ ಕಂಟೈನಮೆಂಟ್ ಜೋನ್ ಪಿ-47927ರ ಸಂಪರ್ಕಿತೆ 24 ವರ್ಷದ ಯುವತಿ(ಪಿ-68596), ದೇವಿಹೊಸೂರಿನ 24 ವರ್ಷದ ಮಹಿಳೆ(ಪಿ-69646), ಕನವಳ್ಳಿಯ ಕಂಟೈನಮೆಂಟ್ ಜೋನ್ ಪಿ-31833ರ ಸಂಪರ್ಕಿತೆ 32 ವರ್ಷದ ಮಹಿಳೆ(ಪಿ-69013), ಪಿ-31801ರ ಸಂಪರ್ಕಿತೆ 40 ವರ್ಷದ ಮಹಿಳೆ(ಪಿ-69449) ಹಾಗೂ 66 ವರ್ಷದ ಪುರುಷ(ಪಿ-69660) ಸೋಂಕು ದೃಢಪಟ್ಟಿದೆ.

70 ವರ್ಷದ ವೃದ್ಧ ತೀವ್ರ ಉಸಿರಾದ ತೊಂದರೆಯಿಂದ ಬಳಲುತ್ತಿದ್ದು, ಜುಲೈ 14 ರಂದು ಜಿಲ್ಲಾ ಆಸ್ಪತ್ರೆಗ ದಾಖಲಾಗಿದ್ದರು. ಜುಲೈ 17 ರಂದು ಮರಣ ಹೊಂದಿದ್ದಾರೆ. ಜುಲೈ 19 ರಂದು ಪಾಸಿಟಿವ್ ಬಂದಿದೆ. 24 ವರ್ಷದ ಮಹಿಳೆ ಪಿ-47925ರ ಸಂಪರ್ಕಿತೆ, ದೇವಿಹೊಸೂರಿನ 24 ವರ್ಷದ ಮಹಿಳೆ ನಿಗದಿತ ತಪಾಸಣೆ ವೇಳೆ ಗಂಟಲು ಮಾದರಿ ಸಂಗ್ರಹಿಸಲಾಗಿತ್ತು. 32 ವರ್ಷದ ಮಹಿಳೆ ಪಿ-31833ರ ಸಂಪರ್ಕಿತೆ ಹಾಗೂ ಕನವಳ್ಳಿಯ 40 ವರ್ಷದ ಮಹಿಳೆ ಹಾಗೂ 66 ವರ್ಷದ ಪುರುಷ ಪಿ-31801ರ ಸಂಪರ್ಕದ ಕಾರಣ ತಪಾಸಣೆ ವೇಳೆ ಸೋಂಕು ದೃಢಪಟ್ಟಿದೆ.

ಶಿಗ್ಗಾಂವಿ: ಪಿ-60571 ಸೋಂಕಿತ ಪ್ರಾಥಮಿಕ ಸಂಪರ್ಕಿತರಾದ ಶಿಗ್ಗಾಂವ ಮಲ್ಲಿಕಾರ್ಜುನ ನಗರದ 20 ವರ್ಷದ ಯುವತಿ (ಪಿ-68191), 45 ವರ್ಷದ ಮಹಿಳೆ(ಪಿ-68172) 60 ವರ್ಷದ ಮಹಿಳೆ(ಪಿ-68531), 13 ವರ್ಷದ ಬಾಲಕಿ(ಪಿ-68933), 36 ವರ್ಷದ ಮಹಿಳೆ(ಪಿ-68685), 52 ವರ್ಷದ ಪುರುಷ(ಪಿ-58086) ಸೋಂಕು ದೃಢ ಪಟ್ಟಿದೆ.

ಪಿ-64641 ಪ್ರಾಥಮಿಕ ಸಂಪರ್ಕಿತರಾದ ಬಂಕಾಪುರದ ಸಿಂಪಿ ಗಲ್ಲಿಯ 62 ವರ್ಷದ ಮಹಿಳೆ(ಪಿ-68768), ಪಿ-31636ರ ಪ್ರಾಥಮಿಕ ಸಂಪರ್ಕಿತರಾದ ಶಾ ಬಜರಾ ಓಣಿಯ 50 ವರ್ಷದ ಪುರುಷ(ಪಿ-68348), 20 ವರ್ಷದ ಯುವಕ(ಪಿ-69759), ಪಿ-64585ರ ಶಿಗ್ಗಾಂವ ಆಜಾದ ನಗರ ನಿವಾಸಿ 33 ವರ್ಷದ ಪುರುಷ(ಪಿ-68683), ಐಎಲ್‍ಐ ಲಕ್ಷಣ ಹೊಂದಿದ ಶಿಗ್ಗಾಂವ ಕೆಂಗಾಪುರ ಪ್ಲಾಟ್‍ನ 28 ವರ್ಷದ ಪುರುಷ (ಪಿ-68271) ಹಾಗೂ ಶಿಗ್ಗಾಂವ ಟಾಗೂರ ಆಸ್ಪತ್ರೆ ಹತ್ತಿರದ ನಿವಾಸಿ 32 ವರ್ಷದ ಮಹಿಳೆ(ಪಿ-64131), ಗಾಂಧಿನಗರದ ನಿವಾಸಿ ಗದಗ ಲಕ್ಷ್ಮೇಶ್ವರ ಕೆ.ಎಸ್.ಆರ್.ಟಿ.ಸಿ. ಡಿಪೋದಲ್ಲಿ ಬಸ್ ಚಾಲಕನಾಗಿ ಕಾರ್ಯನಿರ್ವಹಿಸುತ್ತಿರುವ 52 ವರ್ಷದ ಪುರುಷ (ಪಿ-58086) ಸೋಂಕು ದೃಡಪಟ್ಟಿದೆ. ಸೋಂಕಿತರ ಪೈಕಿ ಐ.ಎಲ್.ಐ. ಲಕ್ಷಣಹೊಂದಿದವರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. 52 ವರ್ಷದ ಸೋಂಕಿತ ಚಾಲಕ ಗದಗ ಆಸ್ಪತ್ರೆಯಲ್ಲಿ ಜುಲೈ 13 ರಂದು ಗಟಲು ಮಾದರಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಜುಲೈ 18 ರಂದು ಪಾಸಿಟಿವ್ ವರದಿ ಬಂದಿದೆ. ಸವಣೂರ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದೆ.

ಸವಣೂರು: ಪಿ-25535ರ ಸೋಂಕಿತನ ಸಂಪರ್ಕಿತರಾದ ಸವಣೂರ ತಾಲೂಕು ಮಾದಾಪುರ ಗ್ರಾಮದ 26 ವರ್ಷದ ಪುರುಷ(ಪಿ-69706), 37 ವರ್ಷದ ಪುರುಷ(ಪಿ-69025), 21 ವರ್ಷದ ಯುವಕ(ಪಿ-69683), ಸವಣೂರ ಅಗ್ನಿಶಾಮಕ ದಳದ ವಸತಿ ಗೃಹದಲ್ಲಿ ವಾಸವಾಗಿರುವ 59 ವರ್ಷದ ಪುರುಷ(ಪಿ-68390) ಹಾಗೂ ಚೌಡಾಳ ಗ್ರಾಮದ 55 ವರ್ಷದ ಪುರುಷ(ಪಿ-56814)ರಿಗೆ ಸೋಂಕು ದೃಡಪಟ್ಟಿದೆ.

ಸೋಂಕಿತರ ಪೈಕಿ 59 ಹಾಗೂ 55 ವರ್ಷದವರು ಐ.ಎಲ್. ಐ. ಲಕ್ಷಣ ಕಾರಣ ಗಂಟಲು ದ್ರವ ಮಾದರಿ ಪರೀಕ್ಷೆಗೆ ಒಳಗಾಗಿದ್ದರು. ಉಳಿದವರು ಸೋಂಕಿತರ ಸಂಪರ್ಕಿತರಾಗಿದ್ದಾರೆ.

ಸೋಂಕಿತರ ನಿವಾಸದ ಪ್ರದೇಶವನ್ನು ನಿಯಮಾನುಸಾರ ಕಂಟೈನ್‍ಮೆಂಟ್ ಜೋನ್ ಹಾಗೂ ಬಫರ್ ಜೋನ್ ಆಗಿ ಘೋಷಿಸಿ ರಾಣೇಬೆನ್ನೂರ ತಾಲೂಕಿಗೆ ಬ್ಯಾಡಗಿ ತಹಶೀಲ್ದಾರ ಹಾಗೂ ಶಿಗ್ಗಾಂವ ತಾಲೂಕಿಗೆ ಸವಣೂರ ತಹಶೀಲ್ದಾರ ಹಾಗೂ ಉಳಿದಂತೆ ಆಯಾ ತಾಲೂಕಾ ದಂಡಾಧಿಕಾರಿಗಳನ್ನು ಇನ್ಸಿಡೆಂಟಲ್ ಕಮಾಂಡರ್ ಆಗಿ ನೇಮಿಸಲಾಗಿದೆ.