ಹಾವೇರಿ: ಮತ್ತೆ 39 ಮಂದಿಗೆ ಕೋವಿಡ್ ದೃಢ

Share

ಹಾವೇರಿ: 108 ಆಂಬುಲೆನ್ಸ್ ಚಾಲಕ ಸೇರಿ ಜಿಲ್ಲೆಯಲ್ಲಿ ಮಂಗಳವಾರ 39 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಮೂವರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 534 ಕೋವಿಡ್-19 ಪ್ರಕರಣಗಳು ದೃಢಗೊಂಡಿವೆ. ಒಟ್ಟು 347 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 15 ಮಂದಿ ಮೃತಪಟ್ಟಿದ್ದು, 172 ಪ್ರಕರಣಗಳು ಸಕ್ರಿಯವಾಗಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಮಂಗಳವಾರದಂದು ಪತ್ತೆಯಾದ 39 ಪ್ರಕರಣಗಳ ಪೈಕಿ, ಹಾವೇರಿ ತಾಲ್ಲೂಕು– 3, ಶಿಗ್ಗಾವಿ ತಾಲ್ಲೂಕು–6, ರಾಣೆಬೆನ್ನೂರು–14, ಹಾನಗಲ್ ತಾಲ್ಲೂಕು–14, ಬ್ಯಾಡಗಿ ಮತ್ತು ಹಿರೇಕೆರೂರ ತಾಲ್ಲೂಕಿನಲ್ಲಿ ತಲಾ ಒಂದು ಪ್ರಕರಣ ಪತ್ತೆಯಾಗಿದೆ.